Madike Maruva Huduga -*- ಮಡಿಕೆ ಮಾರುವ ಹುಡುಗ


ಕವಿ ಹಾಗೂ ಕವನದ ಬಗ್ಗೆ
       ಕೆಲವೊಮ್ಮೆ ಈ ಹೃದಯದಲ್ಲಿ ಒಲವೆಂಬ ಹೂ ಅರಳುತ್ತದೆ. ’ಮಡಿಕೆ ಮಾಡುವ ಹುಡುಗ’ನ ಬಗ್ಗೆ ಮಿಡಿಯುತ್ತದೆ ಕಷ್ಟದಲ್ಲಿ ಇಷ್ಟಾರ್ಥ ಸಿದ್ಧಿಸಿದ ಅಮ್ಮನಿಗಾಗಿ ಸದಾ ಬಡಿಯುತ್ತದೆ. ಆಗಾಗ ಪ್ರಾಯದ ಉತ್ಸಾಹದಲ್ಲಿ ಪ್ರೀತಿಯೂ ಚಿಮ್ಮುತ್ತದೆ.
      ಕತ್ತಲ ಹಳ್ಳಿಯಲ್ಲಿ ಅಮ್ಮನ ಸೆರಗು ಹಿಡಿದು ಪುಟ್ಟದಾಗಿ ಹೆಜ್ಜೆ ಇಡುತ್ತ ಹೊಸೂರಿನ ಹೆಗ್ಗದ್ದೆಯಿಂದ ಕುಂದಾಪುರಕ್ಕೆ ಬಂದ ’ಸಂದೀಪ’ ಎಂಬ ಹುಡುಗ ಕನ್ನಡ ಭಾಷೆಯ ಮೇಲಿನ ಹಿಡಿತದೊಂದಿಗೆ ಕಾವ್ಯವನ್ನು ಅರಳಿಸಿದ ರೀತಿ ಸೋಜಿಗವಾದುದು. ಪದವಿ ಮುಗಿಯುವ ಮುನ್ನವೇ ಭರವಸೆಯ ಯುವಕವಿಯಾಗಿ ಗುರುತಿಸಲ್ಪಟ್ಟ ಈ ಯುವಕ, ಜೀವನದಲ್ಲಿ ಕಂಡದ್ದನ್ನು, ಓದಿದ್ದನ್ನೂ, ಅನುಭವಿಸಿದ್ದನ್ನು ಶಬ್ದಗಳಲ್ಲಿ ಪೋಣಿಸಿ ರಚಿಸಿದ ಕವನಗಳು ಪ್ರಕಟಣೆಗೆ ಅರ್ಹವಾಗಿದೆ. 
     "ಕನಸುಗಳ ರಾಜ" ಸಂದೀಪ ಹೆಗ್ಗದ್ದೆ ಬಹುಮುಖ ಪ್ರತಿಭೆಯ ಯುವಕ. ಪ್ರೇರಣೆ ನೀಡಿದರೆ ಆಡುತ್ತಾ, ಹಾಡುತ್ತಾ, ಬೆಳೆಯುತ್ತ, ಸಾಧನೆಯ ಮೆಟ್ಟಿಲೇರಬಲ್ಲೆ ಎಂದು ತೋರಿಸಿದ ಛಲವಂತ. ಈ ಚೊಚ್ಚಲ ಕವನ ಸಂಕಲನ ಈ ಪ್ರತಿಭಾವಂತನ ಪರಿಚಯದ ಪುಟ್ಟ ಹೆಜ್ಜೆ ಗುರುತು.

     ಪ್ರತಿ ಕವನದಲ್ಲೂ ನಾವಿನ್ಯತೆ ಇದೆ, ಶಕ್ತಿ ಇದೆ, ಪ್ರೀತಿ ಇದೆ. ಸಮಾಜದ ಜ್ವಲಂತ ಸಮಸ್ಯೆಗಳಿಗೆ ಸ್ಪಂದನವೂ ಇದೆ. ಸಾಹಿತ್ಯಾಸಕ್ತರು ಕುಂದಾಪುರದ ಸಂದೀಪ ಹೆಗ್ಗದ್ದೆ ಹೊಸೂರು ಅವರ ಪ್ರಥಮ ಕೃತಿಯನ್ನು ಕೊಂಡು ಓದಿ ಸ್ಫೂರ್ತಿ ತುಂಬುವ ಭರವಸೆಯೂ ಇದೆ.
- ಯು.ಎಸ್.ಶೆಣೈ
ಸಂಪಾದಕರು, ಕುಂದಪ್ರಭ


ಕೊಂಡುಕೊಳ್ಳುಲು ಹೆಚ್ಚಿನ ಸಲಹೆ ಬೇಕಾದಲ್ಲಿ ಕರೆಮಾಡಿ : 9738877358