ಬೀಜಾಡಿ ಮಿತ್ರ ಸಂಗಮ ರಜತಮಹೋತ್ಸವ ಸಮಾರಂಭ: ಸಾಧಕರಿಗೆ ಸನ್ಮಾನಿಸಿ ಸಭಾಪತಿ ಬಸವರಾಜ ಹೊರಟ್ಟಿ ಮಾತು

Written By sunil on Feb 5, 2023 | 7:03 PM


 

ಕುಂದಾಪ್ರ ಡಾಟ್ ಕಾಂ ಸುದ್ದಿ.

ಕುಂದಾಪುರ: ಊರಿನ ಸಾಧಕರನ್ನು ಗುರುತಿಸಿ ಗೌರವಿಸಿರುವುದು ಗ್ರಾಮಕ್ಕೆ ನೀಡಿದ ದೊಡ್ಡ ಗೌರವವಾಗಿದೆ. ಇತಂಹ ಪುಣ್ಯಭೂಮಿಯಲ್ಲಿ ಸಾಧಕರ ನಡುವೆ ನಾವಿರುವುದು ದೊಡ್ಡ ಸೌಭಾಗ್ಯವೆನಿಸಿದೆ. ಇಲ್ಲಿನ ಸಾಧಕರು ಹಾಗೂ ಸೇವೆ ಮಾಡುವ ಸಂಸ್ಥೆಯ ಕಾರ್ಯಗಳು ಮಾದರಿಯಾಗಿದೆ. 25 ವರ್ಷಗಳಿಂದ ಗ್ರಾಮದ ಅಭಿವೃದ್ಧಿಗೆ ಹಾಗೂ ಸಮಾಜಕ್ಕೆ ಸೇವೆ ನೀಡುತ್ತಿರುವ ಮಿತ್ರಸಂಗಮದ ಕಾರ್ಯ ಶ್ಲಾಘನೀಯವಾದದ್ದು ಎಂದು ಕನಾ೯ಟಕ ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಜಿಲ್ಲಾ ಪ್ರಶಸ್ತಿ ಪುರಸ್ಕೃತ ಬೀಜಾಡಿ-ಗೋಪಾಡಿ ಮಿತ್ರಸಂಗಮದ ರಜತಮಹೋತ್ಸವ ಸಮಾರಂಭದ ರಜತಪಥ ನೆರಳು ಬೆಳಿಕಿನ ಸಹಯಾನದ 2ನೇ ದಿನದ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ವಿದ್ಯಾಥಿ೯ಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿ ಕೇವಲ ಶಿಕ್ಷಣದ ಗುರಿಯನ್ನು ಇರಿಸದೇ ಸಂಸ್ಕಾರದ ಪಾಠವನ್ನು ಹೇಳಿ ಕೊಡಬೇಕು. ತಂದೆ-ತಾಯಿ ಋಣ, ಸಮಾಜದ ಋಣ, ಶಾಲೆ ಋಣ, ಊರ ಋಣವನ್ನು ಯಾರಿದಂಲೂ ತೀರಿಸಲು ಸಾಧ್ಯವಾಗುವುದಿಲ್ಲ. ನಾವು ಮನುಷ್ಯನಾಗಿ ಹುಟ್ಟಿದ ಮೇಲೆ ಸಮಾಜಕ್ಕಾಗಿ ನಾವು ಸೇವೆ ಮಾಡಲೇಬೇಕು. ಇದರಿಂದ ಅದೆಷ್ಟೂ ಮಂದಿ ಬಡವರಿಗೆ ಅಶಕ್ತರಿಗೆ ನೆರವು ನೀಡಿದ ತೃಪ್ತಿಯ ಜತೆಯಲ್ಲಿ ನಮ್ಮ ಸೇವೆಯೂ ಸಾರ್ಥಕಗೊಳ್ಳುತ್ತದೆ ಎಂದರು.

ಕೋಟ ಶ್ರೀ ಅಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ ಕುಂದರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೆದೂರು ಪ್ರಗತಿಪರ ಕೃಷಿಕ ರಾಮಕೃಷ್ಣ ಬಾಯಿರಿ ಇವರು ವಿಕಲಚೇತನರಿಗೆ ಗಾಲಿಕುಚಿ೯ ವಿತರಿಸಿದರು. ಭರಮಸಾಗರ ಡಿವಿಎಸ್ ವಿದ್ಯಾಸಂಸ್ಥೆ ಅಧ್ಯಕ್ಷ ಪ್ರದೀಪ್ ಡಿ.ವಿ.ಎಸ್, ಹೊಟೇಲ್ ಉದ್ಯಮಿ ಕೆ.ಎಚ್.ಮಂಜುನಾಥ್ ದೇವಾಡಿಗ, ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ನಾಗರಾಜ್, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಕೆ.ಅನಂತಪದ್ಮನಾಭ ಐತಾಳ್ ಆಗಮಿಸಿ ಶುಭ ಹಾರೈಸಿದರು.

ಈ ಸಂದರ್ಭ ವಿಶೇಷ ಸಾಧಕರಿಗೆ ಸನ್ಮಾನ, ಸಾಧಕ ವಿದ್ಯಾಥಿ೯ಗಳಿಗೆ ಪ್ರತಿಭಾ ಪುರಸ್ಕಾರ, ಸಂಸ್ಥೆಯ ವಿಶೇಷ ಸ್ಮರಣ ಸಂಚಿಕೆ ರಜತಪಥ ಬಿಡುಗಡೆ, ವಿಕಲಚೇತನರಿಗೆ ಗಾಲಿಕುಚಿ೯ ವಿತರಣೆ ಹಾಗೂ ಶಾಂತಿಧಾಮ ಪೂರ್ವ ಗುರುಕುಲಕ್ಕೆ ಕಪಾಟು ಹಸ್ತಾಂತರ ಕಾರ್ಯಕ್ರಮಗಳು ನಡೆದವು. ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಮಿತ್ರಸಂಗಮದ ಕಾರ್ಯದಶಿ೯ ರಾಜೇಶ್ ಆಚಾರ್ ಬೀಜಾಡಿ, ರಜತಮಹೋತ್ಸವ ಸಮಿತಿಯ ಕಾಯಾ೯ಧ್ಯಕ್ಷ ಶಂಕರನಾರಾಯಣ ಬಾಯಿರಿ, ಅಧ್ಯಕ್ಷ ದೀಪಾನಂದ ಉಪಾಧ್ಯಾಯ, ಪ್ರಧಾನ ಕಾರ್ಯದಶಿ೯ ಚಂದ್ರ ಬಿ.ಎನ್ ಮತ್ತಿತರರು ಉಪಸ್ಥಿತರಿದ್ದರು.

ಗಾಯಕ ಮಾಧವ ಬೀಜಾಡಿ ಪ್ರಾಥಿ೯ಸಿದರು. ಮಿತ್ರಸಂಗಮದ ಗೌರವಾಧ್ಯಕ್ಷ ವಾದಿರಾಜ್ ಹೆಬ್ಬಾರ್ ಸ್ವಾಗತಿಸಿದರು. ಅಧ್ಯಕ್ಷ ಚಂದ್ರಶೇಖರ ಬೀಜಾಡಿ ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ ಕೆ.ಸಿ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ರಜತಮಹೋತ್ಸವ ಸಮಿತಿ ಉಪಾಧ್ಯಕ್ಷ ಅನೂಪ್ ಕುಮಾರ್ ಬಿ.ಆರ್ ವಂದಿಸಿದರು.

7:03 PM | 0 comments

ಬೀಜಾಡಿ ಮಿತ್ರ ಸಂಗಮ ರಜತಮಹೋತ್ಸವ ಉದ್ಘಾಟನೆಕುಂದಾಪ್ರ ಡಾಟ್ ಕಾಂ ಸುದ್ದಿ.

ಕುಂದಾಪುರ: ಜಿ. ಶಂಕರ್ ಪ್ಯಾಮಿಲಿ ಟ್ರಸ್ಟ್ನಂತೆ ಮಿತ್ರ ಸಂಗಮ ಜನಪರ ಕಾರ್ಯಕ್ರಮಗಳನ್ನು ನೀಡುತ್ತಾ ಸಮಾಜದಲ್ಲಿ ಮಾದರಿ ಸಂಘಟನೆಯಾಗಿ ಗುರುತಿಸಿಕೊಂಡಿದೆ. ಮನುಷ್ಯನ ಹುಟ್ಟು ಸಾವುಗಳ ನಡುವೆ ಕೇವಲವಾಗಿ ಬದುಕುವುದಕ್ಕಿಂತ ಸಮಾಜದಲ್ಲಿ ಬಡವರ ಕಣ್ಣೀರು ಒರೆಸುವ ಕೆಲಸಗಳನ್ನು ಮಾಡಬೇಕು. ಜನರ ಸೇವೆಯೇ ದೊಡ್ಡ ದೇವರ ಸೇವೆ. ನಾವು ಗಳಿಸಿದ ಸಂಪತ್ತಿನಲ್ಲಿ ಕೆಲವೊಂದು ಭಾಗವನ್ನು ಸಮಾಜಕ್ಕೆ ನೀಡಿದಾಗ ದೊಡ್ಡ ಪುಣ್ಯಫಲ ಪ್ರಾಪ್ತಿಯಾಗುತ್ತದೆ ಎಂದು ಉಡುಪಿ ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ನಾಡೋಜ ಡಾ.ಜಿ.ಶಂಕರ್ ಹೇಳಿದರು.

ಜಿಲ್ಲಾ ಪ್ರಶಸ್ತಿ ಪುರಸ್ಕೃತ ಬೀಜಾಡಿ-ಗೋಪಾಡಿ ಮಿತ್ರಸಂಗಮದ ರಜತಮಹೋತ್ಸವ ಸಮಾರಂಭದ ರಜತಪಥ ನೆರಳು ಬೆಳಿಕಿನ ಸಹಯಾನ 3 ದಿನಗಳ ಕಾರ್ಯಕ್ರಮವನ್ನು ಶುಕ್ರವಾರ ಬೀಜಾಡಿಯ ಮಿತ್ರಸೌಧದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಆಡಳಿತ ಮೊಕ್ತೇಸರ ಶ್ರೀರಮಣ ಉಪಾಧ್ಯಾಯ ಸಂಸ್ಥೆಯ ವೆಬ್ಸೈಟ್ ನ್ನು ಬಿಡುಗಡೆಗೊಳಿಸಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಿಕ್ಷಣ ಪ್ರೇಮಿ ಬಿ.ಶೇಷಗಿರಿ ಗೋಟ, ಕೋಟಿಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುರೇಶ್ ಬೆಟ್ಟಿನ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯ ಕಾರ್ಕಡ ರಾಜು ಪೂಜಾರಿ, ಉದ್ಯಮಿ ಕೆ.ಆರ್.ನಾಯ್ಕ್, ಬೀಜಾಡಿ ಮಠದಕೆರೆ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದದ ಅಧ್ಯಕ್ಷ ಬಿ.ಜಿ.ನಾಗರಾಜ್, ಮಿತ್ರಸಂಗಮದ ಗೌರವಾಧ್ಯಕ್ಷ ವಾದಿರಾಜ್ ಹೆಬ್ಬಾರ್, ಕಾರ್ಯದಶಿ೯ ರಾಜೇಶ್ ಆಚಾರ್, ರಜತಮಹೋತ್ಸವ ಸಮಿತಿಯ ಅಧ್ಯಕ್ಷ ದೀಪಾನಂದ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬೀಜಾಡಿಯ ಮೂಡುಶಾಲಾ ನಿವೃತ್ತ ಶಿಕ್ಷಕ ಕರುಣಾಕರ್ ಶೆಟ್ಟಿ ವಕ್ವಾಡಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸ್ವಾವಲಂಬನೆ ಬದುಕಿಗಾಗಿ ಮಹಿಳೆಯರಿಗೆ ಗೋವುಗಳನ್ನು ವಿತರಿಸಲಾಯಿತು.

ಸುಷ್ಮಾ ಆಚಾರ್ಯ ಪ್ರಾಥಿ೯ಸಿದರು. ರಜತ ಮಹೋತ್ಸವ ಕಾರ್ಯದಶಿ೯ ಚಂದ್ರ ಬಿ.ಎನ್ ಸ್ವಾಗತಿಸಿದರು. ಮಿತ್ರಸಂಗಮದ ಅಧ್ಯಕ್ಷ ಚಂದ್ರಶೇಖರ ಬೀಜಾಡಿ ಪ್ರಸ್ತಾವಿಕ ಮಾತನಾಡಿದರು. ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸ್ಥಾಪಕ ಕಾರ್ಯದಶಿ೯ ಮಂಜುನಾಥ್ ಬೀಜಾಡಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸುಷ್ಮಾ ಆಚಾರ್ಯ ಬೀಜಾಡಿ ಮತ್ತು ಮಾಧವ ಬೀಜಾಡಿ ಇವರಿಂದ ಸುಗುಮ ಸಂಗೀತ ನಡೆಯಿತು.

6:42 PM | 0 comments

ಈಜು ಸ್ಪರ್ಧೆಯಲ್ಲಿ ಶಿಕ್ಷಕ ದಂಪತಿ ರಾಷ್ಟ್ರಮಟ್ಟಕ್ಕೆ ಆಯ್ಕೆ

 ಕುಂದಾಪ್ರ ಡಾಟ್ ಕಾಂ ಸುದ್ದಿ.

ಕುಂದಾಪುರ: ಕರ್ನಾಟಕ ರಾಜ್ಯ ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಷನ್, ಶಿವಮೊಗ್ಗದಲ್ಲಿ ಆಯೋಜಿಸಿದ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ತಾಲೂಕಿನ ಗುಜ್ಜಾಡಿ ಗ್ರಾಮದ ಕಂಚುಗೋಡಿನ ನಿವಾಸಿ ನಾಗರಾಜ ಖಾರ್ವಿ ಮತ್ತು ಕೃಪಾ ದಂಪತಿ ಚಿನ್ನದ ಪದಕದೊಂದಿಗೆ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಪದವೀಧರ ಪ್ರಾಥಮಿಕ ಶಿಕ್ಷಕ ನಾಗರಾಜ ಖಾರ್ವಿ 50 ಮೀ. ಬ್ರೆಸ್ಟ್ ಸ್ಟ್ರೋಕ್ ಚಿನ್ನದ ಪದಕ, 100 ಮೀ. ಬ್ರೆಸ್ಟ್ ಸ್ಟ್ರೋಕ್ ಚಿನ್ನದ ಪದಕ, 200 ಮೀ. ಬ್ರೆಸ್ಟ್ ಸ್ಟ್ರೋಕ್ ಚಿನ್ನದ ಪದಕ, 4x50 ಮೀ. ಫ್ರೀ ಸ್ಟೈಲ್ ರಿಲೇ ಚಿನ್ನದ ಪದಕ ಪಡೆದಿದ್ದಾರೆ. ಅವರ ಪತ್ನಿ, ಶಿಕ್ಷಕಿ ಕೃಪಾ ಖಾರ್ವಿ 50 ಮೀ. ಬ್ರೆಸ್ಟ್ ಸ್ಟ್ರೋಕ್ ಚಿನ್ನದ ಪದಕ, 100 ಮೀ. ಬ್ರೆಸ್ಟ್ ಸ್ಟ್ರೋಕ್ ಚಿನ್ನದ ಪದಕ, 200 ಮೀ. ಬ್ರೆಸ್ಟ್ ಸ್ಟ್ರೋಕ್ ಚಿನ್ನದ ಪದಕ 4x50 ಮೀ. ಮೆಡ್ಲೆ ರೀಲೆಯಲ್ಲಿ ಬೆಳ್ಳಿಪದಕ ಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

2020ರಲ್ಲಿ ನಾಗರಾಜ ಖಾರ್ವಿಯವರು ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದು, ಬೀಗ ಜಡಿದು ಈಜಿದ್ದು, ಈ ಭಂಗಿಯಲ್ಲಿ ಅತ್ಯಂತ ವೇಗವಾಗಿ ಈಜಿದ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ಇಬ್ಬರಿಗೆ ರೇಷ್ಮೆ ಇಲಾಖೆಯ ನಿವೃತ್ತ ಇನ್ಸ್ಪೆಕ್ಟರ್ ಬಿ.ಕೆ.ನಾಯ್ಕ್ ಅವರು ತರಬೇತಿ ನೀಡಿರುತ್ತಾರೆ.

5:22 PM | 0 comments

ರಂಗಸುರಭಿ - ೨೦೨೩: ನಾಲ್ಕು ದಿನಗಳ ರಾಜ್ಯಮಟ್ಟದ ನಾಟಕೋತ್ಸವ ಉದ್ಘಾಟನೆ


ಕುಂದಾಪ್ರ ಡಾಟ್ ಕಾಂ ಸುದ್ದಿ.

ಬೈಂದೂರು: ಹೇಳಬೇಕಾದ್ದನ್ನು ಗಟ್ಟಿಯಾಗಿ ಹೇಳುವ ತಾಕತ್ತು ರಂಗಭೂಮಿಯಲ್ಲಿರುವುದರಿಂದ ಇಲ್ಲಿ ತೊಡಗಿಸಿಕೊಳ್ಳುವವರ ಜವಾಬ್ದಾರಿ ಹೆಚ್ಚಿದೆ. ರಂಗಭೂಮಿಯ ಕಲಾವಿದರು ಜೊತೆ ಸೇರುವ ಬದುಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗೆಗೆ ಯೋಚಿಸುವ, ನಮ್ಮ ಹಾಗೂ ಜನರ ಸಮಸ್ಯೆಗಳನ್ನು ಹೇಳಿ ಪರಿಹಾರ ಕಂಡುಕೊಳ್ಳುವ ಅಗತ್ಯತೆ ಇದೆ ಎಂದು ರಂಗನಟ ಹಾಗೂ ಶಿವಮೊಗ್ಗ ಸಾಹಿತ್ಯ ಸಮುದಾಯದ ಕಾರ್ಯದರ್ಶಿ ಕೆ. ಪ್ರಭಾಕರನ್ ಹೇಳಿದರು. 

ಶನಿವಾರ ಸುರಭಿ ರಿ. ಬೈಂದೂರು ಆಶ್ರಯದಲ್ಲಿ ಶ್ರೀ ಶಾರದಾ ವೇದಿಕೆಯಲ್ಲಿ ಆಯೋಜಿಸಲಾದ ರಂಗಸುರಭಿ - ೨೦೨೩ರ ನಾಲ್ಕು ದಿನಗಳ ರಾಜ್ಯಮಟ್ಟದ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿ ಇಂದಿನ ಕಾಲಘಟ್ಟದಲ್ಲಿ ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನ, ದುಸ್ತರತೆ, ಜನರ ನೋವು, ನಲಿವಿನ ಬಗ್ಗೆ ಏನು ಹೇಳಬೇಕೋ ಅದನ್ನು ಅಂಜಿಕೆ, ಅಳುಕಿಲ್ಲದೇ ಧೈರ್ಯವಾಗಿ ಹೇಳಲು ರಂಗಭೂಮಿ ಒಂದೇ ಮಾಧ್ಯಮ. ಜನಗಳಿಗೆ ಅರಿವಿಗೆ ಬರುವಂತಹ ವಿಷಯಗಳನ್ನು ಪುರಾಣ, ಇತಿಹಾಸ ಅಥವಾ ಇನ್ಯಾವುದರಲ್ಲಿ ಸಿಗುವ ಕಥಾವಸ್ತುವನ್ನು ಬಳಸಿಕೊಂಡು ನಾಟಕದ ಮೂಲಕ ಜನರಿಗೆ ತಲುಪಿಸಬೇಕು. ವಿಶ್ವದ ಅನೇಕ ನಾಟಕ ಸಂಸ್ಥೆಗಳು ಈಗಾಗಲೇ ಇವುಗಳನ್ನು ರಂಗಭೂಮಿಗೆ ಅಳವಡಿಸಿಕೊಂಡಿದ್ದು, ಇದರಿಂದ ಸಮಾಜದಲ್ಲಿ ಭಾರಿ ಬದಲಾವಣೆಗಳಾದ ಉದಾಹರಣೆಗಳಿವೆ ಎಂದರು.

ರಂಗಭೂಮಿ ಮತ್ತು ಚಲನಚಿತ್ರ ಕಲಾವಿದೆ ಚಂದ್ರಕಲಾ ರಾವ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ರಂಗಭೂಮಿಯ ಪ್ರತಿನಟನೂ ಎದುರಿಗೆ ತನ್ನನ್ನು ನೋಡುವವರಿದ್ದಾರೆ ಎಂಬ ಗ್ರಹಿಕೆಯ ಮೆಲೆ ನಟಿಸುತ್ತಾನೆ. ಆ ಮೂಲಕ ಪಾತ್ರವನ್ನು ಜೀವಿಸುತ್ತಾನೆ. ನಾಟಕ ಪ್ರೇಕ್ಷಕರನ್ನು ಭ್ರಮೆಯಿಂದ ವಾಸ್ತಗಳತ್ತ ಕರೆದೊಯ್ಯುವಂತಿರಬೇಕು. ರಂಗಭೂಮಿ ಲೋಕಭೂಮಿಯಾದಾಗ ನಮ್ಮಲ್ಲಿನ ತುಮುಲುಗಳನ್ನು, ಸಂವೇದನೆಯನ್ನು ಹಂಚಿಕೊಳ್ಳಲು ಸಾಧ್ಯವಿದೆ ಎಂದರು. 

ಉದ್ಯಮಿ ಡಾ. ಗೋವಿಂದ ಬಾಬು ಪೂಜಾರಿ  ಅಧ್ಯಕ್ಷತೆ ವಹಿಸಿದ್ದರು. ಹದಿನೈದು ನೂತನ ಸದಸ್ಯರು ಸಂಸ್ಥೆಗೆ ಸೇರ್ಪಡೆಗೊಂಡರು. 

ನಿರ್ದೇಶಕ ಸುಧಾಕರ ಪಿ. ಇದ್ದರು. ಸಂಸ್ಥೆಯ ಅಧ್ಯಕ್ಷ ನಾಗರಾಜ ಪಿ. ಯಡ್ತರೆ ಸ್ವಾಗತಿಸಿ, ಪ್ರಾಸ್ತಾವಿಸಿದರು. ಕಾರ್ಯದರ್ಶಿ ಭಾಸ್ಕರ ಬಾಡ ವಂದಿಸಿದರು. ಉಪಾಧ್ಯಕ್ಷ ಅಬ್ದುಲ್ ರವೂಫ್ ನಿರೂಪಿಸಿದರು. ನಂತರ ತೀರ್ಥಹಳ್ಳಿ ನಟ ಮಿತ್ರರು ತಂಡದ ಕಲಾವಿದರು ಶ್ರೀಕಾಂತ್ ಕುಮಟಾ ನಿರ್ದೇಶನದ ತುರುಬ ಕಟ್ಟುವ ಹದನ ನಾಟಕ ಪ್ರದರ್ಶನಗೊಂಡಿತು.


5:21 PM | 0 comments

Popular Posts

Top News

Byndoor Directory


Most Viewed