ಹೃದಯಗೀತೆ

ಯಾವ ಜನ್ಮದ ಮೈತ್ರಿ?

ಅವರಿಬ್ಬರು ತುಂಬ ಪ್ರೀತಿ ಮಾಡುತ್ತಿದ್ದರು. ಅವಳಿಲ್ಲದೆ ಅವನಿಗೆ ಬಾಳುವುದೇ ಸಾಧ್ಯವಿಲ್ಲ ಎಂಬಂತಿತ್ತು ಬದುಕು.
ಒಂದು ದಿನ ಅವನು ಹೇಳಿದ ಮದುವೆಯಾಗೋಣವೇನೆ?
ಅವಳು ಅವನ ಮುಖವನ್ನೇ ನೋಡಿದಳು. ಮದುವೆಯಾಗೋಣ,
ಆದರೆ, ಒಂದು ಕಂಡಿಷನ್.
ಒಂದು ದಿನ /24 ಗಂಟೆ ನೀನು ನನ್ನನ್ನು ಬಿಟ್ಟು ದೂರವಿರಬೇಕು.
ಮಾತಾಡಬಾರದು, ಫೋನ್ ಮಾಡಬಾರದು, ಮೆಸೆಜ್ ಮಾಡಬಾರದು. ಅದು ನಿನಗೆ ಸಾಧ್ಯವಾದರೆ ಮದುವೆಯಾಗ್ತೇನೆ ಅಂದಳು.
ಹುಡುಗ ಒಪ್ಪಿದ.
ತುಂಬ ಕಷ್ಟಪಟ್ಟು ಒಂದು ದಿನಪೂತರ್ಿ ಅವಳನ್ನು ಸಂಪಕರ್ಿಸದೆಯೇ
ಕಳೆದ. 24 ಗಂಟೆಗಳಾಗುತ್ತಿದ್ದಂತೆಯೇ ಅವಳ ಮನೆಗೆ ಓಡಿದ. ಅವಳ ಮನೆಯ ಅಂಗಳದಲ್ಲಿ ಜನ ಸೇರಿದ್ದರು. ಇವನು ಬರುತ್ತಿದ್ದಂತೆಯೇ ಒಬ್ಬಾತ ಬಂದು ಒಂದು ಚೀಟಿಯನ್ನು ಕೊಟ್ಟ.
ಹುಡುಗ ಓದಿದ
ಆತ್ಮೀಯ ಶ್ರೀ, ಇಷ್ಟು ದಿನ ನನ್ನ ಜತೆ ಇದ್ದಿದ್ದಕ್ಕೆ ಧನ್ಯವಾದಗಳು. ನಾನಿಲ್ಲದೆ ನೀನು ಬದುಕಲಾರೆ ಎಂದು ತಿಳಿದಿದ್ದೆ. ಆದರೆ, ನಾನಿಲ್ಲದೆಯೂ ನೀನು ಬದುಕಬಲ್ಲೆ ಎನ್ನುವುದು ಖಾತ್ರಿಯಾಗಿದೆ. ನಿನಗೆ ನನ್ನ ಅವಶ್ಯಕತೆ ಇಲ್ಲ ಅನ್ನುವುದು ಗೊತ್ತಾಯಿತು. ಹಾಗಾಗಿ.....
ಹುಡುಗ ಅವಸರವಸರವಾಗಿ ಮನೆಯೊಳಗೆ ಓಡಿದ.
ಅಲ್ಲಿ ಆಕೆಯ ಅಪ್ಪ ಇದ್ದರು ' ಬಂದಿಯಾ.. ನಿನ್ನ ಬಗ್ಗೆ ತುಂಬ ಹೇಳ್ತಾ ಇದ್ಲು.
ನಿನ್ನಿಂದಾಗಿ ಇತ್ತೀಚಿನ ದಿನಗಳಲ್ಲಿ ತುಂಬ ಖುಷಿಯಾಗಿದ್ದಳು. ಥ್ಯಾಂಕ್ಸ್ ಕಣೋ'
ಹುಡುಗ ಕೇಳಿದ: ಅವಳೆಲ್ಲಿದ್ದಾಳೆ?
ಅಪ್ಪ ಕೈ ತೋರಿಸಿದಳು: ಬಿಳಿ ವಸ್ತ್ರ ಹೊದ್ದೆ ಅವಳು ಮಲಗಿದ್ದಳು.
ಅಪ್ಪ ಹೇಳಿದರು: ಅವಳು ಇಷ್ಟು ದಿನ ಬದುಕಿದ್ದರೆ ನಿನ್ನಿಂದಲೇ ಕಣೋ....
ಹುಡುಗ ಕುಸಿದು ಕುಳಿತ.*******************************************

ಜೀವ ವೀಣೆ
ಅವನು ಕಳೆದೊಂದು ತಿಂಗಳಿಂದ ನಿತ್ಯ ಆ ಸೀಡಿ ಅಂಗಡಿಗೆ ಹೋಗುತ್ತಿದ್ದ. ಅಲ್ಲೊಬ್ಬಳು
ಹುಡುಗಿ ಇದ್ದಳು. ಪ್ರತಿ ದಿನವೂ ಅವನು ಎರಡೆರಡು ಸೀಡಿ ಖರಿದಿಸುತ್ತಿದ್ದ. ಬೆಳಗ್ಗೆ ಹೇಳಿ ಹೋದರೆ ಸಂಜೆ ಮನೆಗೆ ಬರುವಾಗ ಅದನ್ನು ಹಿಡಿದುಕೊಂಡು ಬರುತ್ತಿದ್ದ. ಹಾಗೆ ಬಂದಾಗಲೆಲ್ಲ ಅವರು ನಾಲ್ಕಾರು ಮಾತು
ಆಡುತ್ತಿದ್ದರು.
ಆದರೆ, ಆ ಹುಡುಗ ಎರಡು ದಿನಗಳಿಂದ ಬರಲೇ ಇಲ್ಲ. ಅದನ್ನು ನೋಡಿದ ಹುಡುಗಿಗೆ ತಡೆಯಲಾಗಲಿಲ್ಲ. ಮೂರನೇ ದಿನ, ಎದ್ದವಳೇ ಅಂಗಡಿಗೂ ಹೋಗುವ ಮೊದಲೇ ಅವನ ಮನೆ ಹುಡುಕಿಕೊಂಡು ಹೋದಳು.
ಅಲ್ಲಿ ಅಂಗಳದ ತುಂಬ ಜನವಿತ್ತು. ವೇಗವಾಗಿ ಬಂದ ಹುಡುಗಿ ಒಳಗೆ ನುಗ್ಗಿದಳು. ಒಳಗೆ ಅವನಪ್ಪ ಎದುರಾದರು. ಅವನೆಲ್ಲಿ ಎಂದು ಕೇಳಿದಳು. ಒಳಗೆ ಮಲಗಿದ್ದ ಅವನನ್ನು ತೋರಿಸಿದರು. ಮೈಮೇಲೆ ಬಿಳಿವಸ್ತ್ರ ಹಾಕಲಾಗಿತ್ತು.
ಅವನಿಗೆ ಕ್ಯಾನ್ಸರ್ ಇತ್ತಮ್ಮ. ಹೆಚ್ಚು ದಿನ ಬದುಕಲಾರ ಅಂದಿದ್ದರು. ಆದರೆ, ನೀನು ಪರಿಚಯವಾದ ನಂತರ ತುಂಬ ಖುಷಿಯಾಗಿದ್ದ. ನೆಮ್ಮದಿಯಾಗಿ ಪ್ರಾಣಬಿಟ್ಟ.
ಕಣ್ಣೀರು ಹಾಕುತ್ತಲೇ ಆಕೆ ಅವನ ಕೋಣೆಗೆ ಹೋದಳು. ತಾನು ಕೊಟ್ಟ ಸೀಡಿಗಳನ್ನು ನೋಡಿದಳು. ಒಂದನ್ನೂ ಬಿಚ್ಚಿ ನೋಡಿರಲಿಲ್ಲ ಅವನು. ಹಾಗಾಗಿ ಅವಳು ಕೊಟ್ಟಿದ್ದ ಅಷ್ಟೂ ಲವ್ ಲೆಟರ್ಗಳು ಬೆಚ್ಚನೆ ಕುಳಿತಿದ್ದವು.

Sunil Snehaloka