ಬೆಳದಿಂಗಳ ಸಾಹಿತ್ಯ ಸಮ್ಮೇಳನ; ಜಯಂತ ಕಾಯ್ಕಿಣಿ ಅಧ್ಯಕ್ಷತೆ

ಬೆಳದಿಂಗಳಿಗೆ ಬೇಧವಿಲ್ಲ ಅದು ಎಲ್ಲರಿಗೂ ಒಂದೇ.ಅದು ಸಮಭಾವದ ಸಂಕೇತ ಎಂದು ಪ್ರಸಿದ್ಧ ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು.
ಅವರು ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯು ಮೂಡುಬಿದಿರೆಯ ಶ್ರೀ ವಿದ್ಯಾ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ೩ ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕಾರ್ಕಳದ ಐತಿಹಾಸಿಕ ಗೋಮಟೇಶ್ವರ ಬೆಟ್ಟದಲ್ಲಿ ಗುರುವಾರ ಹುಣ್ಣಿಮೆಯ ರಾತ್ರಿ ನಡೆದ ಸಮ್ಮೇಳನದಲ್ಲಿ ಎಂದಿನಂತೆ ತಮ್ಮ ನವಿರಾದ ಹೃದಯಸ್ಫರ್ಶಿ ಮಾತುಗಳಿಂದ ರಾತ್ರಿಯಲ್ಲೂ ಸೇರಿದ್ದ ಬಾರಿ ಸಂಖ್ಯೆಯ ಅಭಿಮಾನಿಗಳೆದುರು ಸಂತಸ ಸಂಭ್ರಮ ಪಟ್ಟರು ಮತ್ತು ಬೆಳಗ್ಗೆವರೆಗೆ ಇದ್ದು ಸಂಭ್ರಮಿಸಿದರು.
ಸಾಹಿತ್ಯ ಸಂವಾದಕ್ಕೆ ಇದೊಂದು ಹೊಸ ಅನುಭವ ಎಂದ ಅವರು ಸಾಹಿತ್ತ ಇಡಿ ಬಿಡಿಯ ಸಹಯೋಗ.ಬಿಡಿಯಲ್ಲಿ ಇಡಿ ಸಿಗ ಬೇಕು ಇಡಿ ಹಿಡಿದಾಗ ಬಿಡಿ ಸಿಗ ಬೇಕು.. ಸಾಹಿತ್ಯ- ಸಂಗೀತ ಕಲಾಪಗಳು ಸಂಸ್ಕಾರ ಬೆಳೆಸುತ್ತವೆ ಅಲ್ಲದೇ ಜಾತಿ ಮತ್ತು ಧರ್ಮದ ಚೌಕಟ್ಟು ಮೂಢ ನಂಬಿಕೆಗಳಿಂದ ಮುಕ್ತಗೊಳಿಸುತ್ತದೆ ಎಂದರು.
ಸಿನಿಮಾ ಹಾಡಿಗೆ ಭಾವನಾತ್ಮಕ ಬಂಧವಿದೆ. ಸಿನಿಮಾ ಹಾಡುಗಳಿಗೆ ಇಡೀ ದೇಶವನ್ನು ಭಾವನಾತ್ಮಕವಾಗಿ ಬೆಸೆಯುವ ಸಾಮರ್ಥ್ಯವಿದೆ. ಇವುಗಳು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಇರುವ ನಮ್ಮನ್ನು ಬೆಸೆಯುತ್ತವೆ ಎಂದು ಅಭಿಪ್ರಾಯ ಪಟ್ಟರು. 
ಸಮಾಝದಲ್ಲಿ ದುಡ್ಡು ಮಾಡುವುದು ಹೇಗೆ ಎಂಬ ಬಗ್ಗೆಗೆ ಹೆಚ್ಚು ಯೋಚನೆಗಳು- ಚಿಂತನೆ ನಡೆಯುತ್ತಿವೆ.ದುಡ್ಡಿದ್ದವನೇ ದೊಡ್ಡವನಲ್ಲ ಹೃದಯವಂತಿಕೆ ಮತ್ತು ಮಾನವಂತಿಕೆ ಇದ್ದವನೇ ದೊಡ್ಡವ ಎಂದರು.
ಸಾಹಿತ್ಯ ಬದುಕಿನ ವಿನ್ಯಾಸವನ್ನೇ ಬದಲಾಯಿಸ ಬಹುದು. ಅಸಂಖ್ಯ ನೋವು ಇದ್ದರೂ ಬದುಕಿನ ಸುಖಕರ ಅನಿರ್ವಚನ ಸುಖವನ್ನು ಅದರಲ್ಲಿ ಕಾಣಬಹುದು.ಹಾಗೆ ನೋಡಿದರೆ ಪ್ರತಿಯೊಬ್ಬನಲ್ಲೂ ಕಾವ್ಯ,ಕವಿತೆ,ಕತೆ ಇದ್ದೇ ಇದೆ ಎಂದು ಅವರು ಹೇಳಿದರು.
ಮೊಗಸಾಲೆ:
ಸಮ್ಮೇಳಾನಾದ ಉದ್ಘಾಟನೆಯನ್ನು ಹಿರಿಯ ಸಾಹಿತಿ ನಾ.ಮೊಗಸಾಲೆ ಅವರು ನೆರವೇರಿಸಿ ಬೆಳಕಿಗಿಂತ ಕತ್ತಲೆ ಮುಖ್ಯವದುದು ಕತ್ತಲೆನಿಲ್ಲದಿದ್ದರೆ ಬೆಳಕೂ ಕಾಣುತ್ತಿರಲಿಲ್ಲ. ನಾವೂ ಸೂರ‍್ಯೋದಯ ಚಂದ್ರೋದಯವನ್ನು ಮರೆತಿದ್ದೇವೆ.ಈ ಸಮ್ಮೇಳನ ಚಂದ್ದನನ್ನು, ಬೆಳದಿಂಗಳನ್ನು ನೆನಪಿಸಿದ್ದಲ್ಲದೆ ಸಾಹಿತ್ಯ ಸಂಘಟನೆಯ ಹೊಸ ಹಾದಿಯನ್ನು ತೋರಿದೆ ಎಂದರು.
ಬೆಳದಿಂಗಳೇ ಮಾತು. ಬೆಳದಿಂಗಳಿಗೆ ಬೇರೆ ಮಾತು ಬೇಕಿಲ್ಲ.ಗೊಮ್ಮಟೇಶ್ವರನ ಅರ್ಥವಂತಿಕೆ ನಮಗೆಲ್ಲ ತಿಳಿಯ ಬೇಕಾಗಿದೆ.ಇದು ಸಾಹಿತ್ಯ ಸಮ್ಮೇಳನಕ್ಕೆ ಹೊಸ ದಿಕ್ಕು ತೋರಿರುವುದರಿಂದ ಅದನ್ನು ಪರಿಕಲ್ಪನೆ ಮಾಡಿ ಸಂಯೋಜಿಸಿರುವ ಶೇಖರ ಅಜೆಕಾರು ಮತ್ತು ಸಹಕರಿಸಿದ ಅವರ ಗೆಳೆಯರ ಸಾಧನೆ ಪ್ರಶಂಸಾರ್ಹ ಎಂದರು.
ಕಾರ್ಕಳದವರಲ್ಲದವರು ಇಲ್ಲಿಗೆ ಬಂದು ಬಾಹುಬಲಿಯ ಬಗ್ಗೆ ಬರೆದಿದ್ದಾರೆ ಆದರೆ ನಾನು ಇಲ್ಲಿಯವನೇ ಆಗಿದ್ದು ಹೆಚ್ಚೇನು ಬರೆಯಲು ಸಾಧ್ಯವಾಗಲಿಲ್ಲ ಎಂದ ಅವರು ಬಾಹುಬಲಿ ಸ್ವಾಮಿಗೆ ಇದು ಸಾಹಿತ್ಯ ಸೇವೆ ಎಂದು ಹೇಳಿದರು.
ಉದ್ಘಾಟನೆಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯುವ ಮುಂದಾಳು ಹನುಮಾನ್ ಮೋಟಾರ‍್ಸ್ ನಿರ್ದೇಶಕ ವಿಲಾಸ್ ನಾಯಕ್ ಅವರು ಮಾತನಾಡಿ ಸಾಹಿತ್ಯೇತರ ಮಂದಿಗೆ ಸಾಹಿತಿಗಳ ಸಾಂಗತ್ಯ ಸಿಗುವಂತೆ ಮಾಡುವುದು ಅವರಲ್ಲಿ ಸಾಹಿತ್ಯದ ಆಸಕ್ತಿಯನ್ನು ಮೂಡಿಸಲು ಸಹಕಾರಿ ಎಂದು ಈ ವಿಶೇಷ ಸಮ್ಮೇಳನದ ಪ್ರಯತ್ಮವನ್ನು ಶ್ಲಾಘಿಸಿದರು.
ಕೆ.ಎಂ. ಇಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಎಸ್.ಇಮ್ತಿಯಾಜ್ ಅಹ್ಮದ್ ಅವರು ಅತಿಥಿಗಳಾಗಿದ್ದರು.
ಸಮ್ಮೇಳನ ಸಮಿತಿಯ ಅಧ್ಯಕ್ಷ ಶೇಖರ ಅಜೆಕಾರು ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.
ಪ್ರಶಸ್ತಿ ಪ್ರದಾನ
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕಷ್ಣ ಪುನರೂರು ಪ್ರಶಸ್ತಿ ಪ್ರದಾನ ಮಾಡಿದರು. ಹಿರಿಯ ಸಾಹಿತಿ ಕನರಾಡಿ ವಾದಿರಾಜ ಭಟ್ ಅವರು ಅಧ್ಯಕ್ಷತೆ ವಹಿಸಿದ್ದರು. ಎಸ್.ಸಿ.ಡಿ.ಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಸಾಹಿತ್ಯ ಸಂಘದ ಕಾರ್ಯದರ್ಶಿ ಎಂ.ರಾಮಚಂದ್ರ, ಮಾಧ್ಯಮ ಗೌರವ ವಿಜೇತ ಎಸ್.ಜಯರಾಂ ಮೊದಲಾದವರು ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಸಮ್ಮೇಳನ ಸಮಿತಿಯ ಅಧ್ಯಕ್ಷ ಶೇಖರ ಅಜೆಕಾರು ಆವರು ಕಾರ್ಯಕ್ರಮ ನಿರ್ವಹಿಸಿದರು.
ಮುಂಬಯಿಯ ಸಾಹಿತಿ ಕೋಡು ಭೋಜ ಶೆಟ್ಟಿ, ಕಿರಿತೆರೆಯ ನಟ-ಸಾಮಾಜಿಕ ಕಾರ್ಯಕರ್ತ ಕೆ.ಪಿ ನಂಜುಂಡಿ, ತುಳುನಾಡ ರಂಗಭೂಮಿ ರತ್ನ ನವೀನ್.ಡಿ ಪಡೀಲ್, ವ್ಯಕ್ತಿ ಅಭಿವ್ಯಕ್ತಿ- ಮಿಮಿಕ್ರಿಯ ಅನನ್ಯ ಸಾಧಕ ಪಟ್ಟಾಭಿರಾಮ ಸುಳ್ಯ, ರಂಗೋಲಿಯ ಪತ್ರಿಕೆಯ ಸಂಪಾದಕಿ, ಕಲಾವಿದೆ ಭಾರತಿ ಮರವಂತೆ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಶಿವರಾಮ ಶೆಟ್ಟಿ ತಲ್ಲೂರು, ಕುಂದಾಪುರ ಕೆದೂರಿನ ಸ್ಪೂರ್ತಿ ಧಾಮದ ಸ್ಥಾಪಕ ಕೇಶವ ಕೋಟೇಶ್ವರ, ಕಾರ್ಕಳ ಶಾಸ್ತ್ರೀಯ ಸಂಗೀತಾ ಸಭಾದ
ಕಾರ್ಯದರ್ಶಿ ಡಾ.ಪ್ರಕಾಶ್ ಶೆಣೈ ಸಹಿತ ಇತರರು ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಗೌರವ ಪ್ರಶ್ತಿಯನ್ನು ಸ್ವೀಕರಿಸಿದರು.
ಡಾ.ವಾಮನ ನಂದಾವರ ಮತ್ತು ಪ್ರೊ.ಚಂದ್ರಕಲಾ ನಂದಾವರ ಅವರಿಗೆ ಕರ್ನಾಟಕ ಸಾಹಿತ್ಯ ದಂಪತಿ ರತ್ನ ಗೌರವ ನೀಡಿ ಸನ್ಮಾನಿಸಲಾಯಿತು.
ಮಹಿಳೆ ಮತ್ತು ಪುರುಷ ಪರಸ್ಪರ ದಾಂಪತ್ಯದಲ್ಲಿ ಸಹಕರಿಸಿ ಸಾಧನೆ ಮಾಡುವುದಕ್ಕೆ ಪ್ರೋತ್ಸಾಹ ನೀಡುವ ಈ ಗೌರವ ನಮ್ಮಿಬ್ಬರ ದಾಂಪತ್ಯದ ಸಾರ್ಥಕತೆಗಾಗಿ ನೀಡಿದ ಗೌರವ ಎಂದೇ ಭಾವಿಸುತ್ತೇನೆ ಎಂದು ಚಂದ್ರಕಲಾ ನಂದಾವರ ಹೇಳಿದರು.
ನಾನು ಸ್ಫೂರ್ತಿಧಾಮವನ್ನು ಅನಾಥರಿಗೆ ಆಶ್ರಯ ನೀಡಲೆಂದು ಕಟ್ಟಿದ್ದರೂ ಯಾವಾಗ ಇಲ್ಲಿಗೆ ಯಾರೂ ಸದಸ್ಯರೇ ಇಲ್ಲ ಎಂದಾಗ ಅತೀ ಹೆಚ್ಚು ಸಂತೋಷ ಪಡುವವನು ನಾನು ಎಂದು ಕೇಶವ ಕೋಟೇಶ್ವರ ಹೇಳಿದರು.
ಸಾಹಿತ್ಯ ಸಂಘಟನೆ ಪಾಪ ಕಷ್ಟದ ಕೆಲಸ,ಜಯಂತ್ ಕಾಯ್ಕಿಣಿಯವರಂತಹ ನಮ್ಮ ಅಭಿಮಾನದ ಸಾಹಿತಿಗಳ ಕೈಯಲ್ಲಿ ಗೌರವ ಸ್ವೀಕರಿಸುವುದು ಭಾಗ್ಯ. ಜಯಂತ ಕಾಯ್ಕಿಣಿಯವರಂತಹ ಸಾಹಿತಿಗಳು ಸಿನಿಮಾ ಸಾಹಿತಿಗಳಿಗೆ ಕವಿಗಳಿಗೆ ಗೌರವ ತಂದುಕೊಟ್ಟಿದ್ದಾರೆ ಎಂದು ನವೀನ್ ಡಿ ಪಡೀಲ್ ಸನ್ಮಾನಕ್ಕೆ ಉತ್ತರಿಸಿದರು.
ಸಾಹಿತ್ಯ ಸೌರಭವನ್ನು ನೀಡುತ್ತದೆ.ತಾಯಿಯ ಕಷ್ಟದ ಬದುಕಿನಿಂದ ಪಾಠ ಕಲಿತ ನಾನು ಶ್ರಮದಿಂದ ಈ ಹಂತಕ್ಕೆ ಬೆಳೆಯಲು ಸಾಧ್ಯವಾಗಿದೆ.ಈ ನಡುರಾತ್ರಿಯಲ್ಲಿ ಈ ರೀತಿಯ ಸುಂದರ ಕಾರ್ಯಕ್ರಮ, ಇಷ್ಟು ಜನ ಸಾಹಿತ್ಯಾಭಿಮಾನಿಗಳು ನಾನು ಇಂತಹ ಕಾರ್ಯಕ್ರಮವನ್ನು ಬದುಕಲ್ಲಿ ಕಂಡದ್ದೇ ಇಲ್ಲ ಎಂದು ಕೆ.ಪಿ. ನಂಜುಂಡಿ ಹರ್ಷ ವ್ಯಕ್ತ ಪಡಿಸಿದರು.




ಬಾಲಪ್ರತಿಭಾ ಗೌರವ;
ಮೂಡುಬಿದರೆಯ ಅಯನಾ ವಿ. ರಮಣ್, ಶ್ವೇತಾ , ರಂಜನ್ ಮತ್ತು ಮಂಗಳೂರಿನ ವಿಜೇತ್ ಉಳ್ಳಾಲ್, ಅಭಿಷೇಕ್ ಎಂ.ಬಿ, ಮಂಗಳೂರಿನ ಕೃಷ್ಣ ಪ್ರಸಾದ್, ಅನನ್ಯ ರೈ ತಮ್ಮ ಪ್ರತಿಭಾ ಪ್ರದರ್ಶನ ನೀಡಿ ಬಾಲಪ್ರತಿಭಾ ಗೌರವ ಸ್ವೀಕರಿಸಿದರು.
ಮಂಗಳೂರಿನ ರಂಗ ಭಾರತಿಯ ನಿರ್ದೇಶಕ ಕೆ.ವಿ ರಮಣ್ ಅವರು ಕಾರ್ಯಕ್ರಮ ನಿರೂಪಿಸಿದರು. ಮೂಡುಬಿದಿರೆಯ ಟ್ಯಾಲೆಂಟ್ಸ್‌ನ ರಾಜೇಶ್ ಭಟ್, ಕವಯತ್ರಿ ಜ್ಯೋತಿ ಗುರುಪ್ರಸಾದ್, ನಾಟಕಕಾರ ಜಯ ಪ್ರಕಾಶ್ ಮಾವಿನಕುಳಿ ಮೊದಲಾದವರು ಉಪಸ್ಥಿತರಿದ್ದರು.

ಮಹಿಳಾ ಗೋಷ್ಟಿ
ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಸತ್-ಸಂಪ್ರದಾಯದಂತೆ ಮೊದಲ ಗೋಷ್ಠಿ ಮಹಿಳಾ ಗೋಷ್ಠಿ ಲೇಖಕಿ ಸಾವಿತ್ರಿ ಮನೋಹರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮಹಿಳೆಯರು ಸಬಲರಾಗುತ್ತಿದ್ದಾರೆ ಇನ್ನಷ್ಟು ಸಬಲರಾಘ ಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಪುರುಷರ ಕಣ್ಣಲ್ಲಿ ಮಹಿಳೆ ಎಂಬ ವಿಶೇಷ ಉಪನ್ಯಾಸವನ್ನು ಕ್ರೈಸ್ಟ್ ಕಿಂಗ್ ಕಾಲೇಜಿನ ಪ್ರೊ.ನಾರಾಯಣ ಶೇಡಿಕಜೆ ಅವರು ಮಾಡಿದರು.
ಮಹಿಳಾ ಅಂದು ಇಂದು ಕುರಿತು ಭುವನೇಂದ್ರ ಕಾಲೇಜಿನ ಪ್ರಾಧ್ಯಾಪಕಿ ವನಿತಾ ಮತ್ತು ಮಹಿಳೆ ಸಾಮರ್ಥ್ಯ-ಸಾರ್ಥಕತೆ ವಿಷಯದ ಬಗೆಗೆ ಕೆ.ಎಂ.ಇ.ಎಸ್ ಪಿ.ಯು.ಕಾಲೇಜಿನ ಪ್ರಾಚಾರ್ಯೆ ಜ್ಯೋತಿ ಪದ್ಮನಾಭ ಭಂಡಿ ಮಾತನಾಡಿದರು. ಟಿ.ವಿ ಪತ್ರಕರ್ತೆ- ಕಲಾವಿದೆ ಅನುಷಾ ಮೂಡುಬಿದಿರೆ ಕಾರ್ಯಕ್ರಮ ನಿರೂಪಿಸಿದರು.
ಸಮಿತಿಯ ಅಧ್ಯಕ್ಷ ಶೇಖರ ಅಜೆಕಾರು ಅತಿಥಿಗಳನ್ನು ಗೌರವಿಸಿದರು. ಸಮಿತಿ ಉಪಾಧ್ಯಕ್ಷೆ ಸುಲತಾ ವಿದ್ಯಾಧರ್ ಉಪಸ್ಥಿತರಿದ್ದರು.


ನಡುರಾತ್ರಿ ಕವಿಗೋಷ್ಠಿ
ನಡುರಾತ್ರಿಯಲ್ಲೂ ಈ ಯುವ ಕವಿಗಳ ಸಂಭ್ರಮ ಖುಷಿಕೊಟ್ಟಿತು.ಕವಿಗಳ ವಿಷಯ ಮತ್ತು ಕವನದ ಪ್ರಬುದ್ಧತೆ ಹೊಸ ಭರವಸೆಯನ್ನು ಮೂಡಿಸಿದೆ ಎಂದು ಮುಂಬಯಿಯ ಕವಿ ಕೋಡುಬೋಜ ಶೆಟ್ಟಿ ಹೇಳಿದರು.
ಮುದ್ದಣ ಕಾವ್ಯ ಪ್ರಶಸ್ತಿ ವಿಜೇತ ಕವಿ ಧನಂಜಯ ಕುಂಬ್ಳೆ ಉಪಸ್ಥಿತರಿದ್ದರು.
ಅಮೃತಾ ಭಾರತಿ ಪಿ.ಯು ಕಾಲೇಜು ಪ್ರಾಂಶುಪಾಲ ಅಮರೇಶ್ ಹೆಗ್ಡೆ, ೧೪ ನೆ ವಿದ್ಯಾರ್ಥಿ ಸಮ್ಮೇಳನದ ಅಧ್ಯಕ್ಷ ಎಚ್.ಜಿ ಸುನೀಲ್ ಬೈಂದೂರ್, ಮಂಗಳೂರು ವಿವಿ ವಿದ್ಯಾರ್ಥಿಗಳಾದ ಭವ್ಯ ಪಿ.ಆರ್ ನಿಡ್ಪಳ್ಳಿ ಶರತ್ ಆಳ್ವ ಚನಿಲ,ಕುಂದಾಪುರ ಪ್ರಿಯಾಂಕ ಶೆಟ್ಟಿ, ಹೆಬ್ರಿ ನವೋದಯ ಶಾಲೆಯ ವಿದ್ಯಾರ್ಥಿಗಳಾದ ದೀಪಕ್,ಸಂತೋಷ್ ಭಟ್,ರಕ್ಷಿತ್ ಶೆಟ್ಟಿ , ಭುವನೇಂದ್ರ ಕಾಲೇಜಿನ ಸೌಮ್ಯ ಕುಮಾರಿ ಮತ್ತು ಸೌಮ್ಯ, ಎಂ.ಜಿ.ಎಂ ಕಾಲೇಜಿನ ರಾಮಂಜಿ,
ಮೂಡುಬಿದಿರೆಯ ಸೌದಂರ್ಯ ತಜ್ಞೆ ಸೀತಾ ಬೆಳುವಾಯಿ ಕೆಸರಗದ್ದೆ, ಹೆಬ್ರಿ ಪ್ರಥಮ ದರ್ಜೆ ಕಾಲೇಜಿನ ದೀಪಕ್ ಎನ್, ಮೊದಲಾದವರು ಕವಿತೆ ವಾಚಿಸಿದರು. ಯುವ ಪ್ರತಿಭೆ ಶಶಾಂಕ್ ರಾನಡೆ ಕಾರ್ಯಕ್ರಮ ನಿರೂಪಿಸಿದರು.
ಕವಿಗಳನ್ನು ಸಮಿತಿ ಅಧ್ಯಕ್ಷ ಶೇಖರ ಅಜೆಕಾರು ಮತ್ತು ಪ್ರಧಾನ ಕಾರ್ಯದರ್ಶಿ ಬೊರ್ಗಲ್‌ಗುಡ್ಡೆ ಮಂಜುನಾಥ ಗೌರವಿಸಿದರು.

ಚಿಂತನೆಗೆ ಹಚ್ಚಿದ ಯುವ ಗೋಷ್ಠಿ
ಯುವಕರು ಹಿರಿಯರ ಸ್ಥಾನವನ್ನು ತುಂಬುವಂತೆ ಬೆಳೆಯ ಬೇಕು ಎಂಬ ಮಾತುಗಳು ಕೇಳಿ ಬರುತ್ತವೆ, ಆದರೆ ಕೆಲ ಹಿರಿಯರು ಯುವಕರಿಗೆ ನೀಡ ಬೇಕಾದ ಸ್ಥಾನ ಸಿಗಲು ಪ್ರೋತ್ಸಾಹ ಮಾಡುತ್ತಿಲ್ಲ ಎಂದು ಯುವ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಮಾಧ್ಯಮ ತಜ್ಞ ವಿವೇಕ್ ನಂಬಿಯಾರ್ ಹೇಳಿದರು.
ಎಂಜಿ.ಎಂ.ಕಾಲೇಜಿನ ಪತ್ರಿಕೋದ್ಯಮ ಉಪನ್ಯಾಸಕ ಬೊರ್ಗಲ್‌ಗುಡ್ಡೆ ಮಂಜುನಾಥ, ಮಂಗಳೂರು ಕನ್ನಡ ಎಂ.ಎ. ವಿದ್ಯಾರ್ಥಿ ಶಶಾಂಕ್ ರಾನಡೆ ಉಪನ್ಯಾಸ ನೀಡಿದರು.
ಯುವ ನಾಯಕ ಸುವೃತ್ ಕುಮಾರ್, ಯುವಜನ ಒಕ್ಕೂಟದ ಅಧ್ಯಕ್ಷ ಯತೀಶ್ ಕಲ್ಯಾ ಅತಿಥಿಗಳಾಗಿದ್ದರು.
ಕಾರ್ಯದರ್ಶಿಗಳಾದ ವಸಂತ ಕುಮಾರ್ ಬೆಳ್ತಂಗಡಿ,ಶರತ್ ಕಾನಂಗಿ ಗೌರವಿಸಿದರು.