ಕುಂದಾಪುರ: ಮ್ಯಾರಥಾನ್ -ಗ್ರೀನ್‌ಥಾನ್

ಕುಂದಾಪುರ: ಜಾಗತಿಕ ತಾಪಮಾನ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಗಳ ನೇತೃತ್ವದಲ್ಲಿ ಜೇಸಿಐ ಕುಂದಾಪುರ ಹಾಗೂ ರೋಯಲ್ ಕ್ಲಬ್ ಸಹಯೋಗದೊಂದಿಗೆ ಗುರುವಾರ ಕುಂದಾಪುರದಲ್ಲಿ ಮ್ಯಾರಥಾನ್ ನಡೆಯಿತು.
ಕುಂದಾಪುರದಿಂದ-ಮೂಡ್ಲಕಟ್ಟೆ ವರೆಗಿನ 6ಕಿಲೋಮೀಟರ್ ಮ್ಯಾರಥಾನ್‌ಗೆ ಉದ್ಯಮಿ ಅಭಿನಂದನ್ ಶೆಟ್ಟಿ ಗಾಂಧಿ ಮೈದಾನದಲ್ಲಿ ಚಾಲನೆ ನೀಡಿದರು. ಜೇಸಿಐ ಕುಂದಾಪುರ ಸಂಸ್ಥೆಯ ರತ್ನಾಕರ್ ಪಾರಿವಾಳ ಹಾರಿ ಬಿಡುವ ಮೂಲಕ ಮ್ಯಾರಥಾನ್‌ಗೆ ಶುಭಕೋರಿದರು. ಸಾಮಾಜಿಕ ಕಾರ್ಯಕರ್ತ ಬಿ.ಕಿಶೋರ್‌ಕುಮಾರ್, ಆಂಬ್ಯುಲೆನ್ಸ್ ವಾಸುದೇವ ಹಂದೆ,
ಸಮಾಜಸೇವಕ ಕೇಶವ ಕೋಟೇಶ್ವರ,ಕುಂದಪ್ರಭ ಸಂಸ್ಥೆ ಅಧ್ಯಕ್ಷ ಯು.ಎಸ್.ಶೆಣೈ ಶುಭಕೋರಿದರು. ಗುತ್ತಿಗೆದಾರ ಹಕ್ಲಾಡಿ ರಾಜೀವ ಶೆಟ್ಟಿ, ಉದ್ಯಮಿ ಅಶೋಕ ಬೆಟ್ಟಿನ್, ರತ್ನಾಕರ ಶೆಟ್ಟಿ, ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕ ಸಿದ್ಧಾರ್ಥ ಶೆಟ್ಟಿ, ಡಾ.ಬಿ.ಆರ್.ಸಾಮಗ, ಪ್ರಿನ್ಸಿಪಾಲ್ ಎಸ್.ಎಸ್.ರಾವ್, ಮ್ಯಾರಥಾನ್ ಸಂಯೋಜಕ ದೀಪಕ್ ಸಾಲಿಯಾನ್, ಇಸಿ ಎಚ್‌ಓಡಿ ನವೀನ್ ಎಂ.ಬಿ., ಮೆಸ್ಕಾಂ ಎಂಜಿನಿಯರ್ ರಾಕೇಶ್ ಉಪಸ್ಥಿತರಿದ್ದರು.
ಕುಂದಾಪುರ ಗಾಂಧಿ ಮೈದಾನದಿಂದ ಆರಂಭಗೊಂಡ ಮ್ಯಾರಥಾನ್ ಮೂಡ್ಲಕಟ್ಟೆ ಕಾಲೇಜಿನಲ್ಲಿ ಸಮಾಪನಗೊಂಡಿತು.