ಒಂದು ಮೆಲುಕು: ಜಪಾನಿನ ಪ್ರಾಕೃತಿಕ ವಿಕೋಪಗಳು & ವಿಶ್ವ ಕಲಿಯಬೇಕಾದ ಪಾಠ












                ಬಹುಶಃ ಯಾರೂ ನಿರೀಕ್ಷಿಸಿರಲಿಲ್ಲ ಪ್ರಕೃತಿಮಾತೆಯ ಆ ರೌದ್ರಾವತಾರವನ್ನು. ಕೆಲವೇ ಗಂಟೆಗಳಲ್ಲಿ ಇಡೀ ನಗರದ ಚಿತ್ರಣವೇ ಬದಲಾಗಿ ಸ್ಮಶಾನ ಮೌನ ಆವರಿಸಿಕೊಂಡು ಉಳಿದವರು ಅಳಿದವರಿಗಾಗಿ ಮರುಗುತ್ತಾ, ಮತ್ತೆ, ಮತ್ತೆ, ನಡುಗುವ ಭೂಮಿಯಲ್ಲಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ರಕ್ಷಣೆಗಾಗಿ ಮೊರೆಯಿಡುತ್ತಾ, ಅನ್ನ-ನೀರಿಗಾಗಿ ಅಂಗಲಾಚುತ್ತಾ, ಅಳಿದುಳಿದ ಅವಶೇಷಗಳ ಮೇಲೆ ನಿಂತು ಗೋಗರೆಯುವರೆಂದು ಯಾರೂ ನಿರೀಕ್ಷಿಸಿರಲಿಲ್ಲ.
ಅಂದು ಮಾ.11 ಇತಿಹಾಸ ಸೃಷ್ಟಿಸಿದ ಸುನಾಮಿ, ಭೂಕಂಪಗಳಿಗೆ ಜಪಾನ್ ಅಕ್ಷರಶಃ ನಡುಗಿಹೋಗಿತ್ತು. ಕಳೆದ 88 ವರ್ಷಗಳಿಂದಿಚೆಗೆ ಇಂತಹ ಭೀಕರ ಭೂಕಂಪವನ್ನು ಜಪಾನಿಯರು ಕಂಡಿರಲಿಲ್ಲ. ಭಾರತೀಯ ಕಾಲಮಾನ ಬೆಳಿಗ್ಗೆ 11:16ಕ್ಕೆ ಜಪಾನಿನ ಈಶಾನ್ಯ ಕರಾವಳಿ ಪ್ರದೇಶದಲ್ಲಿ 8.9 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು ಬೆನ್ನೆಲ್ಲೇ ಸುನಾಮಿಯ ದೈತ್ಯಾಕಾರದ ಅಲೆಗಳು ಉತ್ತರ ಜಪಾನಿನಾದ್ಯಂತ ರೌದ್ರನರ್ತನವನ್ನು ಪ್ರದಶರ್ಿಸಿತ್ತು. ಸಾವಿನ ಸುನಾಮಿಗೆ ಮನೆಯಾಗಲಿ, ಹಡಗಾಗಲಿ, ಕಾರು, ರೈಲು, ಬಸ್ಸುಗಳಿಗಾಗಲಿ, ಎದುರಿಗೆ ಸಿಕ್ಕ ಇನ್ಯಾವುದೇ ವಸ್ತುಗಾಗಲಿ ಉಹೂಂ ಅಲ್ಲಿ ಗಟ್ಟಿ ಬಂಡೆಯಾಗಿ ಅಡ್ಡ ನಿಲ್ಲುವ ಸಾಮರ್ಥ್ಯ ಯಾವುದಕ್ಕೂ ಇರಲಿಲ್ಲ. 2004ರ ಸುನಾಮಿ ಬಳಿಕ ಸಂಭವಿಸಿದ ಅತೀ ಘೋರ ಸುನಾಮಿ ಹಾಗೂ ವಿಶ್ವದಲ್ಲೇ 5ನೇ ಹೆಚ್ಚು ತೀವ್ರತೆಯ ಭೂಕಂಪ ಎಂದು ಇತಿಹಾಸ ಸೃಷ್ಟಿಸಿದ ಈ ದುರಂತವನ್ನು ಜಪಾನ್ ಅಣು ತುತರ್ು ಪರಿಸ್ಥಿತಿ ಎಂದು ಘೋಷಿಸಿಬಿಟ್ಟಿತು.
             ಸುಮಾರು 33 ಅಡಿಗಳಷ್ಟು ಎತ್ತರದ ರಕ್ಕಸದಲೆಗಳು ಪ್ರಮುಖವಾಗಿ ಉತ್ತರ ಜಪಾನ್ನ ಮಿಯಾಗಿ, ಸೆಂದಾಯ್, ಪುಕುಶಿಮಾ ನಗರಗಳನ್ನು ಕೊಚ್ಚಿಕೊಂಡು ಹೋಯಿತು. 'ಸೈಟೋ' ಎಂಬ ಗ್ರಾಮವೊಂದು ಕಣ್ಮರೆಯಾಗಿ ಹೋಗಿತ್ತು. ಕಾರುಗಳು ಆಟಿಕೆಯ ವಸ್ತುಗಳಂತೆ ಕಂಡವು. ಜನರಿದ್ದ ಹಡಗೊಂದು ಕೊಚ್ಚಿಕೊಂಡೊಯ್ಯಿತು. ರೈಲೊಂದು ಮಾಯವಾಯಿತು. ಆಗಸದಲ್ಲಿ ಹಾರಬೇಕಿದ್ದ ವಿಮಾನಗಳು ನೀರಿನಲ್ಲಿ ತೇಲತೊಡಗಿದವು. ತೈಲಾಗಾರಗಳಿಗೆ ಬೆಂಕಿಹತ್ತಿಕೊಂಡು ಉರಿಯಲಾರಂಭಿಸಿತ್ತು. ಬೃಹತ್ ಕಟ್ಟಡಗಳು ಕೆಲವು ಧರೆಗುರುಳಿದರೆ ಕೆಲವು ಉಯ್ಯಾಲೆಯಂತೆ ತೂಗಿತು. ಅಣು ಸ್ಥಾವರಗಳು ಸ್ಥಗಿತಗೊಂಡು ಭೂಕಂಪದ ಪ್ರದೇಶಗಳು ಕತ್ತಲಲ್ಲಿ ಮುಳುಗಿತು. ಮರಗಳು ಧರೆಗುರುಳಿದ್ದವು. ಸಾವಿನ ಸಂಖ್ಯೆ ಏರುತ್ತಲೇ ಇತ್ತು. ನಗರದ ಸಂಪರ್ಕ ವ್ಯವಸ್ಥೆಗಳೆಲ್ಲಾ ಕಡಿದುಹೋದವು.
ಏಲ್ಲಿ ನೋಡಿದರೂ ಮುರಿದ ಮನೆಗಳು ನುಜ್ಜಾದ ಕಾರುಗಳು, ರಾಶಿಬಿದ್ದ ಹಡಗುಗಳು, ಧಗದಗಿಸುತ್ತಿದ್ದ ಬೆಂಕಿ, ರಾಶಿಬಿದ್ದ ಅವಶೇಷಗಳ ನಡುವೆ ತಮ್ಮವರನ್ನು ಅರಸಿ ತಿರುಗುವ ನಿರಾಶ್ರಿತರು, ಎಲ್ಲ ಕೊಚ್ಚಿಹೋದ ಮೇಲೂ ಮತ್ತೆ ಮತ್ತೆ ಸಂಭವಿಸಿದ ಕಂಪನಗಳು, ರಿಯಾಕ್ಟರ್ಗಳು ಸ್ಪೋಟ. ಸಾಲದೇಂಬಂತೆ ಒಂದೇ ಸವನೆ ಬೀಸುತ್ತಿದ್ದ ಶೀತಗಾಳಿ! ಅಬ್ಬಾ! ಒಂದೇರೆಡೆ? ಜಪಾನ್ ದೇಶ ಪ್ರಕೃತಿ ಮಾತೆಯೊಂದಿಗೆ ಯುದ್ಧ ನಡೆಸಿ ಜಯಿಸಲಾಗದೆ ನಿಸ್ಸಾಯಕವಾಗಿ ಕುಳಿತಿದೆ ಎಂದು ಭಾಸವಾಗುವ ಆ ಬೀಭತ್ಸ ದೃಷ್ಯ ಎಂತಹ ಕಲ್ಲು ಹೃದಯವನ್ನು ಕರಗಿಸುವಂತಿತ್ತು.

ಜಪಾನಿಯರಿಗೆ ಹೊಸದಲ್ಲ ಭೂಕಂಪ :

           ಜಪಾನ್ ದೇಶದ ಜನ ಜೀವನ ಭೂಕಂಪದೊಂದಿಗೆ ಹಾಸುಹೊಕ್ಕಾಗಿದೆ. ಜಗತ್ತಿನಲ್ಲಿ ಅತೀ ಹೆಚ್ಚು ಭೂಕಂಪವಾಗುವ ಪ್ರದೇಶ ಜಪಾನ್. ಪ್ರಪಂಚದ ಒಟ್ಟು ಭೂಕಂಪದ ಶೆ.20 ರಷ್ಟು ಭೂಕಂಪ ಇಲ್ಲಿಯೇ ಸಂಭವಿಸುತ್ತದೆ. ಅದೂ ಕೂಡ 6 ಕ್ಕಿಂತ ಹೆಚ್ಚಿನ ತೀವ್ರತೆಯಿದೆ. ಜಪಾನ್ ಈವರೆಗೆ ಸುಮಾರು 200ಕ್ಕೊ ಅಧಿಕ ಭೂಕಂಪಗಳನ್ನು ಕಂಡಿದೆ. ಪೆಸಿಫಿಕ್, ಫಿಲಿಪ್ವೀನ್, ಯುರೇನಿಯನ್ ಹಾಗೂ ಉ. ಅಮೇರಿಕಾದ ಭೂಪದರಗಳ ಮೇಲೆ ಜಪಾನ್ ದೇಶ ಇರುವುದರಿಂದ ಅಲ್ಲಿ ಭೂಗರ್ಭ ಚಟುವಟಿಕೆಗಳು ಹೆಚ್ಚು ನಡೆದು ಜ್ವಾಲಾಮುಖಿ ಭೂಕಂಪಗಳಿಗೆ ಏಡೆಮಾಡಿ ಕೊಡುತ್ತವೆ.
ವಿಕಿರಣ ಸೋರಿಕೆಯ ಭೀತಿ:
ಭೂಕಂಪ, ಸುನಾಮಿಯ ಬೇಗುದಿಯಲ್ಲಿ ಬೇಯುತ್ತಿದ್ದ ಜಪಾನಿಯರಿಗೆ ಮತ್ತೊಂದು ಶಾಖ್ ನೀಡಿದ್ದು ಅಣುಸ್ಥಾವರಗಳ ಸ್ಫೋಟ ಭಾರಿ ಭೂಕಂಪದಿಂದಾಗಿ ಪುಕುಶಿಮಾ ನಗರದ ಅಣುಸ್ಥಾವರ ಘಟಕಗಳ ತುತರ್ು ಶೀಥಿಲಿಕರಣ ವ್ಯವಸ್ಥೆ ಹಾಳಾಗಿದ್ದರಿಂದ ಶಾಖ ತಣಿಸಲಾಗದೇ ಅದು ಸ್ವೋಟಗೊಂಡಿತ್ತು. ಪರಿಣಾಮವಾಗಿ ವಿಕಿರಣ ಸೋರಿಕೆಯ ಭೀತಿ ಹೆಚ್ಚಾಯಿತು. ವಿಕಿರಣಗಳು ನೀರು, ಗಾಳಿ, ಆಹಾರಗಳಲ್ಲಿ ಸೇರಿದ್ದು ತಿಳಿಯಿತು. ನೆರೆಯ ರಾಷ್ಟಗಳಿಗೂ ತಲುಪಿತು. ಈವರೆಗೆ ಹೆಚ್ಚಿನ ಜೀವಹಾನಿಯ ಬಗ್ಗೆ ವರದಿಯಾಗಿಲ್ಲ

ಕಹಿ ನೆನಪು ಕದಡಿದಾಗ:
ಜಪಾನಿನ ಸುನಾಮಿ ಭಾರತೀಯರ ನಿದ್ದೆಗೆಡಿಸಿತ್ತು. ಡಿ.26,2004 ರಂದು ಸುಮಾತ್ರ ದ್ವೀಪದಲ್ಲಾದ 9.3 ತೀವ್ರತೆಯ ಭೂಕಂಪದಿಂದಾಗಿ ಎದ್ದ ಸುನಾಮಿಯ ರಕ್ಕಸದ ಅಲೆಗಳು. ಭಾರತ, ಇಂಡೋನೆಷಿಯಾ ಹಾಗೂ ಶ್ರೀಲಂಕಾದ ಲಕ್ಷಾಂತರ ಮಂದಿಯನ್ನು ಬಲಿತೆಗೆದುಕೊಂಡಿತ್ತು. ಭಾರತದ ತಮಿಳುನಾಡು, ಪಾಂಡಿಚೇರಿ, ಆಂಧ್ರಪ್ರದೇಶ, ಕೇರಳ ಹಾಗೂ ಅಂಡಮಾನ್-ನಿಕೋಬಾರ್ ದ್ವೀಪಗಳು ಹಾನಿಗೊಳಗಾಗಿ ಹತ್ತು ಸಾವಿರ ಮಂದಿ ಸಾವನ್ನಪ್ಪಿ ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದರು.

ಜಪಾನಿಯರು ಪ್ರಪಂಚಕ್ಕೆ ಮಾದರಿ:
ಎರಡನೇ ಮಹಾಯುದ್ದದ ಪರಿಣಾಮವಾಗಿ ನೆಲಸಮವಾಗಿದ್ದ ಜಪಾನ್ ಇಡಿ ವಿಶ್ವವೇ ಬೆರಗಾಗುವಂತೆ ಬೆಳೆದು ನಿಂತ ಪರಿ ನಿಜಕ್ಕೂ ಅಚ್ಚರಿಪಡುವಂತದ್ದು. ಅದು ತಂತ್ರಜ್ನಾನದಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿ ಪ್ರಪಂಚದ ಪ್ರಬಲ ದೇಶಗಳೊಂದಿಗೆ ಪೈಪೋಟಿಗಿಳಿದಿತ್ತು ಆದರೆ ಈ ತೀವ್ರ ಪ್ರಮಾಣದ ಸುನಾಮಿ, ಭೂಕಂಪ, ವಿಕಿರಣ ಸೋರಿಕೆಗಳು ದೇಶಕ್ಕೆ ಮತ್ತೊಂದು ಅಗ್ನಿ ಪರೀಕ್ಷೆಯನ್ನೊಡ್ಡಿತ್ತು.ಆದರೇನಂತೆ? ಅಲ್ಲಿನ ಜನರೇನು ಉಳಿದವರಂತೆ ಕಂಗೆಡಲಿಲ್ಲ.ಅಂತರಾಷ್ಟೀಯ ಸಮುದಾಯದೆದುರು ನೆರವಿಗಾಗಿ ಕೈ ಚಾಚಲಿಲ್ಲ. ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದ್ದಂತೆ ಪುನರ್ ನಿಮರ್ಾಣ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. 'ಭೂಕಂಪವಾಗಲಿ, ಸುನಾಮಿಯಾಗಲಿ ನಮ್ಮ ಶಕ್ತಿ, ವಿಶ್ವಾಸ, ಸಂಕಲ್ಪವನ್ನು ನಡುಗಿಸಿಲ್ಲ. ಪುನಃ ನಾವೆಲ್ಲರೂ ಒಂದಾಗಬೇಕಿದೆ ಎಂದು ಜಪಾನಿನ ಪ್ರಧಾನಿ ಜನರಲ್ಲಿ ನೈತಿಕ ಸ್ಥ್ಯೆರ್ಯ ತುಂಬಿದ್ದಾರೆ. ತನ್ನ ಬಂಧುಗಳೆಲ್ಲರನ್ನೂ ಕಳೆದುಕೊಂಡು ಬದುಕಲು ಕಾರಣಗಳೇ ಇಲ್ಲದ ಮಧ್ಯ ವಯಸ್ಸಿನ ಮನುಷ್ಯನೊಬ್ಬ ತನ್ನ ಅಂಗಡಿಯ ಮುಂದೆ ಹೀಗೆ ಬರೆಸಿದ್ದಾನಂತೆ-'ಭೂಕಂಪ ನಮ್ಮ ಭೂಮಿಯನ್ನು ಅಲುಗಿಸಿರಬಹುದು ಆದರೆ ನಮ್ಮ ಬದುಕುವ ಉತ್ಸಾಹ, ವಿಶ್ವಾಸವನ್ನಲ್ಲ; ಸುನಾಮಿ ನಮ್ಮ ಮನೆಗಳನ್ನು ಕಿತ್ತುಕೊಂಡು ಹೋಗಿರಬಹುದು ಆದರೆ ಬದುಕುವ ಛಲವನ್ನಲ್ಲ ನಮ್ಮ ಊರನ್ನು ಪುನಃ ಕಟ್ಟೋಣ' ಸುನಾಮಿಯಿಂದ ಅರ್ಧಕ್ಕರ್ಧ ಕೊಚ್ಚಿಹೋದ ಪಿಯಾಗಾವ್ ಪಟ್ಟಣದ ಯುವಕನೊಬ್ಬ ಜಾಹಿರಾತು ಫಲಕವನ್ನೇರಿ ಹೀಗೆ ಪೆಂಟ್ ಮಾಡುತ್ತಿದ್ದನಂತೆ-'ಯಾರೋ ಬಂದು ನಮ್ಮ ನಗರವನ್ನು ಪುನರ ನಿಮರ್ಾಣ ಮಾಡುತ್ತಾರೆಂದು ನಿರೀಕ್ಷಿಸುವ ಬದಲು ನಾವೇ ಆ ಕೆಲಸಕ್ಕೆ ಅಣೆಯಾಗೋಣಾ' ಅದೆಂಥಹ ಹುಮಸ್ಸು, ಆಶಾವಾದ ಜಪಾನಿಯರದು!
ಎಲ್ಲೊ ಒಂದು ಅಫಘಾತ ಸಂಭವಿಸಿದರೆ ಅಲ್ಲಿನವರ ರಕ್ಷಣಿಗಿಂತ ಹೆಚ್ಚಾಗಿ ಲಾಭವಾಗುವ ವಸ್ತುಗಳಿಗಾಗಿ ತಡಕಾಡುವ, ದೇಶದಲ್ಲೊಂದು ಅವಘಡವಾದರೆ ನಮಗೇಕೆ ಉಳಿದವರ ಉಬಸಾರಿ ನಾವು ಕ್ಷೇಮವಾಗಿದ್ದೇವಲ್ಲ ಎಂದು ಸುಮ್ಮನಾಗುವ, ಬದುಕಲು ಸಾಧ್ಯವಿಲ್ಲವೆಂದು ಪ್ರಕೃತಿ, ವ್ಯವಸ್ಥೆಗಳನ್ನು ಜರಿಯುವ, ಪರಸ್ಪರ ಕಿತ್ತಾಡುವ ನಾವುಗಳು ಜಪಾನಿಯರಿಂದ ಕಲಿಯಬೇಕಾದ್ದು ಹಲವಿದೆ.
  • ಅದೇಷ್ಟು ಹಸಿವಿದ್ದರೂ ಜಪಾನಿಯರು ಆಹಾರ, ನೀರು ಔಷಧಗಳಿಗಾಗಿ ಕಿತ್ತಾಡಲಿಲ್ಲ. ಅಲ್ಲಿ ನೂಕುನುಗ್ಗಲುಗಳಿರಲಿಲ್ಲ. ಜನ ಶಿಸ್ತಿನಿಂದ ವತರ್ಿಸಿದರು. ನಿರಾಶ್ರಿತರ ಶಿಬಿರಗಳಲ್ಲಿ ಎಲ್ಲರೂ ಸರತಿ ಸಾಲಿನಲ್ಲಿಯೇ ನಿಂತು ಮಿತ ಆಹಾರವನ್ನೇ ಸೇವಿಸುತ್ತಿದ್ದರು

  • ಜಪಾನಿನ ನಗರಗಳು ಕತ್ತಲುಮಯವಾದಾಗ ಅಲ್ಲಿ ಯಾರೋ ಅಂಗಡಿಗಳಿಗೆ ನುಗ್ಗಿ ಸಾಮಾನುಗಳನ್ನು ದೋಚಲಿಲ್ಲ. ಎಲ್ಲರಿಗೂ ಅಗತ್ಯ ವಸ್ತುಗಳನ್ನು ಸಿಗಲಿ ಎಂದು ಮಿತವಾಗಿ ಬಳಸಿದರು, ದರಗಳನ್ನು ಕಡಿತಗೊಳಿಸಿದರು, ಕಾಸಿಲ್ಲದವರಿಗೆ ಉಚಿತವಾಗಿ ಹಂಚಿ ಔದರ್ಯ ಮೆರೆದರು. ಆತ್ಮಸಾಕ್ಷಿಗೆ ಮೊಸಮಾಡಿಕೊಳ್ಳಲಿಲ್ಲ, ಜೊತೆಗೆ ಪರಹಿತ ಮೆರೆದರು.
  • ಅಣು ಸ್ಥಾವರಗಳ ಉಷ್ಣ ತಣಿಸಲು ವಿಕಿರಣ ಸೋರಿಕೆಯನ್ನು ಲೆಕ್ಕಿಸದೆ ಒಂದಿಷ್ಟು ಮಂದಿ ಜೀವದ ಹಂಗು ತೊರೆದು ಹಗಳಿರುಳು ಶ್ರಮಿಸಿದರು. ಪರಿಹಾರ ಕಾಯರ್ಾಚರಣೆಯಲ್ಲಿ ನಿರತರಾದರು.

  • ಅಲ್ಲಿನ ರಾಜಕಾರಣವೂ ಸ್ವಲ್ಪ ಮಟ್ಟಿಗೆ ಹೊಲಸಾಗಿದ್ದರೂ, ಯಾರೂ ಈ ಸಂದರ್ಭದಲ್ಲಿ ಅಧಿಕಾರದಲ್ಲಿದ್ದವರನ್ನು ದೂಷಿಸುತ್ತಾ ಕುರಲಿಲ್ಲ. ರಾಜೀನಾಮೆ ಕೊಡಿ ಎಂದು ಕಿರು ಕಿರುಚಲಿಲ್ಲ!
  • ಅಲ್ಲಿನ ಪತ್ರಿಕೆಗಳು ಮನಬಂದತೆ ಬರೆಯಲಿಲ್ಲವಂತೆ. ಟಿ.ವಿ ಗಳಲ್ಲಿ ಹೆಣಗಳನ್ನೇ ತೋರಿಸುತ್ತಾ ರೇಜಿಗೆ ಹುಟ್ಟಿಸಿಲ್ಲವಂತೆ. ಜನರಲ್ಲಿ ಆತಂಕವನ್ನು ಮೂಡಿಸದೆ ಸಂಯಮವನ್ನು ಮೇರೆದವು.
  • ಜಪಾನಿಯರು ತಂತ್ರಜ್ನಾನದಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದಾರೆ. ಭೂಕಂಪಕ್ಕೆ ಕುಸಿಯದ ಮನೆ, ಸೇತುವೆಗಳನ್ನೇ ಹೆಚ್ಚಾಗಿ ಕಟ್ಟಿಕೊಂಡಿದ್ದಾರೆ. ಅದಕ್ಕಾಗಿಯೆ ಅಲ್ಲಿ ಪ್ರಾಣಹಾನಿಯ ಪ್ರಮಾಣ ಸ್ವಲ್ಪ ಕಡಿಮೆಯಾಯಿತು.

ನಿಜಕ್ಕೂ ಜಪಾನಿಯರ ದೇಶಪ್ರೇಮ, ಶಿಸ್ತು, ಔದರ್ಯ, ಉತ್ಸಾಹ, ಛಲ, ಆಶಾಭಾವ ಎಂಥವರಿಗೂ ಮಾದರಿಯಾಗುವಂತದ್ದು. ಯಾರೂ ಊಹಿಸಿರದ್ದನ್ನು ಅವರು ಮಾಡುತ್ತಾರೆ. ಹೌದು ಭೂಕಂಪ ಅವರ ಉತ್ಸಾಹ, ವಿಶ್ವಾಸಗಳನ್ನು ಅಲುಗಿಸಿಲ್ಲ. ಸುನಾಮಿ ಬದುಕುವ ಛಲವನ್ನು ಕೊಚ್ಚಿಕೊಂಡು ಹೋಗಿಲ್ಲ. ಕೆಲವೇ ಕೆಲವು ವರ್ಷಗಳಲ್ಲಿ ಇಂಥದೊಂದು ಅವಘಡ ಸಂಭವಿಸಿತ್ತೆಂಬ ಕುರುಹುಗಳೇ ಇಲ್ಲದೆ ದೇಶವನ್ನು ಸಮರ್ಥವಾಗಿ ಕಟ್ಟಿ ಮತ್ತೆ ಪ್ರಬಲ ರಾಷ್ಟ್ರ್ರಗಳೊಂದಿಗೆ ಪೈಪೋಟಿಗಿಳಿಯದಿದ್ದರೆ ಅವರು ಜಪಾನಿಯರೇ ಅಲ್ಲ. ಅದೇನೇ ಇಲ್ಲಿ ನಾವು ಅವರಿಂದೊಂದಿಷ್ಟು ಕಲಿಯಲು ಅಡಿಯಿಲ್ಲ ಅಲ್ವೆ? ಸೂಯರ್ೊದಯದ ನಾಡಿಗರ ಆ ಹುಮ್ಮಸ್ಸು ನಮಗೆ ನಿಜಕ್ಕೂ ಮಾದರಿಯಲ್ಲವೆ?
- ಸುನಿಲ್ ಹೆಚ್.ಜಿ.ಬೈಂದೂರು.