ಭ್ರಷ್ಟ ರಾಜಕೀಯದ ನಡುವೆ ನಾವು...


1951-52 ಸ್ವಾತಂತ್ರ್ಯಾ ನಂತರದ ಮೊದಲ ರಾಷ್ಟ್ರೀಯ ಚುನಾವಣೆಯಲ್ಲಿ ಜವಹರಲಾಲ್ ನೆಹರು ನೇತ್ರತ್ವದ ಸರಕಾರ ಅಧಿಕಾರಕ್ಕೆ ಬಂದ ಆ ದಿನದಿಂದ ಇಂದಿನವರೆಗೆ ರಾಜಕೀಯ ಹಾಗೂ ರಾಜಕಾರಣಿಗಳ ಬಗ್ಗೆ ಜನಸಾಮಾನ್ಯರಿಗಿರುವ ಸಂದೇಹಗಳು ದೂರವಾಗಿಲ್ಲ, ಬದಲಾಗಿ ಅಧಿಕವಾಗಿದೆ. ಕಾರಣ, ದೇಶ ಸ್ವಾಂತಂತ್ರಗೊಂಡು ಆರು ದಶಕಗಳ ಕಳೆದರೂ, ಆಗದ ನಿರೀಕ್ಷಿತ ಅಭಿವೃದ್ದಿ ಸ್ವಂತಂತ್ರ ಭಾರತದ ಎಲ್ಲಾ ಸಕರ್ಾರಗಳೂ ತಮ್ಮ ಆಡಳಿತವಧಿಯಲ್ಲಿ ಹಲವು ರೀತಿಯ ಸಮಸ್ಯೆಗಳಿಗೆ ಸಿಲುಕಿಕೊಂಡಿವೆ. ಅದಕ್ಕೆ ಪ್ರಸ್ತುತ ಕೇಂದ್ರ ಸರಕಾರವೂ ಹೊರೆತಲ್ಲ. ಆದರ್ಶ ಹೌಸಿಂಗ್ ಸೊಸೈಟಿ, 2ಜಿ ತರಂಗಗುಚ್ಚ ಹಂಚಿಕೆಯ ಹಗರಣ, ಕಾಮನ್ವೆಲ್ತ್ ಕ್ರೀಡಾಕೂಟದ ಸಂಘಟನೆಯಲ್ಲಿ ನಡೆದ ಭ್ರಷ್ಟಾಚಾರ, ಪಿ.ಜೆ.ಥೋಮಸರನ್ನು ಕೇಂದ್ರ ವಿಚಕ್ಷಣ ದಳದ ಆಯುಕ್ತರನ್ನಾಗಿ ನೇಮಿಸಿದ್ದು, ಅಮೇರಿಕದೊಂದಿಗೆ ನಾಗರಿಕ ಪರಮಾಣು ಒಪ್ಪಂದಕ್ಕೆ ಬೆಂಬಲ ನೀಡುವುದಕ್ಕಾಗಿ ಸಂಸದರಿಗೆ ಅಪಾರ ಪ್ರಮಾಣದಲ್ಲಿ ಹಣ ಹಂಚಿಕೆ ಮಾಡಿದ್ದು ಲೋಕಪಾಲ್ ಮಸೂದೆ ಅಂಗೀಕರಿಸದಿರುವುದು ಮುಂತಾದವುಗಳು ಕೇಂದ್ರ ಸಕರ್ಾರದ ಸಾಧನೆಗಳಿಗೆ ಕಪ್ಪುಚುಕ್ಕೆಗಳಾಗಿ ಇಡೀ ವಿಶ್ವದ ಮುಂದೆ ದೇಶ. ತಲೆ ತಗ್ಗಿಸುವಂತಾಗಿದೆ. ಸಾರ್ವಜನಿಕರ ಕೋಟ್ಯಂತರ ರೂಪಾಯಿಗಳನ್ನು ಪೋಲು ಮಾಡುತ್ತಿರುವ ಸಂಸದರ ಬದ್ದತೆಯ ಬಗ್ಗೆಯೂ ಸಂದೇಹ ಮೂಡುತ್ತಿದೆ.ದೇಶದ ಭದ್ರತೆಯಲ್ಲಿ ಪದೇ- ಪದೇ ಎಡವುತ್ತಿರುವುದೂ ಆತಂಕಕಾರಿ ವಿಷಯ. ಅವಶ್ಯಕ ವಸ್ತುಗಳು, ತರಕಾರಿ, ಸಾಂಬಾರ ಪದಾರ್ಥಗಳ ಬೆಲೆ ಗಗನ ಮುಟ್ಟಿ ಸಾಮಾನ್ಯರು ಕಂಗಾಲಾಗುವಂತಾಗಿದೆ.
ನಮ್ಮ ರಾಜ್ಯ ಸರಕಾರಗಳ ಕಥೆಯೂ ಇದಕ್ಕೆ ಹೊರೆತಾಗಿಲ್ಲ. ಪ್ರಸ್ತುತ ಸರಕಾರವಂತೂ, ಅಧಿಕಾರಕ್ಕೆ ಬಂದ ದಿನದಿಂದಲೇ ಅನಿಶ್ಚಿತತೆಯ ಭೀತಿಯಲ್ಲಿದೆ. ಭ್ರಷ್ಟಾಚಾರ, ಸ್ವಜನಪಕ್ಷಪಾತ, ಭಿನ್ನಮತೀಯ ಚಟುವಟಿಕೆಗಳಿಂದಾಗಿ ಸರಕಾರ ನಲುಗುತ್ತಿದೆ. ಭೂಹಗರಣಗಳು ದೇಶವ್ಯಾಪ್ತಿ ಚಚರ್ೆಗೆ ಒಳಪಟ್ಟು ನ್ಶೆತಿಕತೆಯ ಪ್ರಶ್ನೆಗಳು ಉದ್ಭವಿಸಿವೆ. ಆಡಳಿತ ಹಾಗೂ ವಿರೋಧ ಪಕ್ಷಗಳ ಕೆಸರೆರೆಚಾಟಗಳನ್ನು ನೋಡಿ ಜನತೆ ರೋಸಿ ಹೋಗಿರುವುದಂತೂ ಸತ್ಯ. ಈಎಲ್ಲಾ ವಿದ್ಯಮಾನಗಳ ಜೊತೆಗೆ, ವಿಧಾನಸಭೆಯಲ್ಲಿ ಶಾಸಕರ ಅಶಿಸ್ತಿನ ವರ್ತನೆ ರಾಜ್ಯದ ಘನತೆಗೆ ಕುಂದು ತಂದಿವೆ.
ಇಲ್ಲಿ ಸ್ವಷ್ಟವಾಗುದಿಷ್ಟೇ, ಆಡಳಿತ ನಡೆಸುವ ಸರಕಾರಗಳೂ ತಮ್ಮ ಕರ್ತವ್ಯಗಳಲ್ಲಿ ಎಡವುತ್ತಿವೆ ಎಂಬುದು. ಇದನ್ನು ತಡೆಯಬೇಕಾದ ವಿಪಕ್ಷಗಳು ಆ ತಪ್ಯ್ಪಗಳನ್ನೇ ಹಿಡಿದು ನೇತಾಡುತ್ತಿವೆ. ಸಕರ್ಾರದ ತಪ್ಯ್ಪಗಳನ್ನು ಕಟುವಾಗಿ ಟೀಕಿಸುವ ಇವರು, ಉತ್ತಮ ಕಾರ್ಯಕ್ಕೆ ತಮ್ಮ ಬೆಂಬಲ ಸೂಚಿಸುವುದನ್ನು ಮರೆಯುತ್ತಿದ್ದಾರೆ. ಒಂದೊಮ್ಮೆ ವಿಪಕ್ಷಗಳ ಸ್ಥಾನದಲ್ಲಿರುವವರು, ಅಧಿಕಾರಕ್ಕೆ ಬಂದರೂ, ತಮ್ಮ ಹಿಂದಿನ ಮಾತುಗಳನ್ನು ಮರೆತು, ಅದೇ ತಪ್ಯ್ಪಗಳನ್ನು ಪುನರಾವತರ್ಿಸುವುದು ಖೇದನೀಯ, ಇವೆಲ್ಲಾವುಗಳ ಮಧ್ಯೆ, ಕೆಲವೊಮ್ಮೆ ಜವಬ್ದಾರಿಯುತ ಸ್ಥಾನದಲ್ಲಿರುವ ರಾಜಕೀಯ ಮುಖಂಡರು ಪ್ರಚಾರ ಪಡೆಯುವ ಹಂಬಲದಲ್ಲಿ ನೀಡುವ ಬೇಜವಾಬ್ದಾರಿಯುತ ಹೇಳಿಕೆಗಳು ರಾಜ್ಯ-ರಾಜ್ಯಗಳ ನಡುವಿನ, ವಿವಿಧ ಕೋಮಿನ ನಡುವಿನ, ವಿವಿಧ ಭಾಷೆಗಳ ನಡುವಿನ ಬಾಂಧವ್ಯವನ್ನು ಹಾಳುಗೆಡವುತ್ತವೆ.
ರಾಜಕೀಯ ವ್ಯಕ್ತಿಗಳ ಈ ಬೇಜವಾಬ್ದಾರಿತನಗಳ ಸರಪಳಿಯೊಂದಿಗೆ ಸಾಮಾನ್ಯ ಜನರ ಅಸಡ್ಡೆಯೂ ಬೆಸೆದುಕೊಂಡಿದೆ. ಸ್ವಧರ್ಿಗಳು ನೀಡುವ ಹಣ, ಹೆಂಡಕ್ಕೆ, ಜನತೆ ತಮ್ಮ ಅಮೂಲ್ಯವಾದ ಮತದ ಜೊತೆಗೆ, ತಮ್ಮ ಸ್ವಂತಿಕೆಯನ್ನು ಮಾರಿಕೊಳ್ಳುತ್ತಿದ್ದಾರೆ. ಸುಶಿಕ್ಷಿತರು ಮತದಾನದಿಂದ ದೂರ ಉಳಿಯುತ್ತಿರುವುದು ನಿಜಕ್ಕೂ ಆತಂಕದ ವಿಷಯ ಇನ್ನೂ ಮತ ಹಾಕಿದವರು ಆರಿಸಿ, ಕಳುಹಿಸಿದ ಜನಪ್ರತಿನಿಧಿಗಳ ಕಾರ್ಯವೈಖರಿಯನ್ನು ತಿಳಿಯುವ ಗೊಡವೆಗೇ ಹೋಗುವುದಿಲ್ಲ. ಮನು ಕುಲಕ್ಕೆ ವರವಾಗಬೇಕಿದ್ದ ಮರೆವು, ಸದ್ಯ, ಕೇವಲ ರಾಜಕಾರಣಿಗಳಿಗೆ ವರವಾಗಿದೆ. ತಮಗಾದ ಅನ್ಯಾಯವನ್ನು ಜನತೆ ಬಹುಬೇಗನೆ ಮರೆಯುತ್ತಿದ್ದಾರೆ. ಇದು ರಾಜಕಾರಣಿಗಳ ಕರ್ತವ್ಯದ್ರೋಹ, ವಿಶ್ವಾಸದ್ರೋಹಗಳಿಗೆ ಪರೋಕ್ಷವಾಗಿ ಬೆಂಬಲ ನೀಡಿದಂತಾಗುತ್ತದೆ.
ಜನಪ್ರತಿನಿಧಿಗಳು ಹಾಗೂ ಜನಾಸಾಮಾನ್ಯರು, ಇಬ್ಬರೂ ತಮ್ಮ-ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ನಡೆದರೆ, ದೇಶದ ಅಭಿವೃದ್ದಿ ಖಂಡಿತ ಸಾಧ್ಯ. ಆದರೆ, ಆ ದಿನ ಬರುವುದು ಯಾವಾಗ?

ಮನೋಜ ಭಾಗವತ್
ತೃತೀಯ ಬಿ.ಕಾಂ.