~~~~~~ಥಾಲ್ಯಾಂಡ್ ಎಂಬ ಸುವರ್ಣ ಭೂಮಿ.~~~~~~


ಲೇಖಕರು:ಎ.ಎಸ್.ಎನ್.ಹೆಬ್ಬಾರ್
       ಥಾಲ್ಯಾಂಡ್ನ ರಾಜಧಾನಿ ಬ್ಯಾಂಕಾಕ್ಗೆ ವಿಮಾನದಲ್ಲಿ ಬಂದಿಳಿಯುವುದೇ 'ಸುವರ್ಣಭೂಮಿ' ವಿಮಾನನಿಲ್ದಾಣಕ್ಕೆ. ಥಾಲ್ಯಾಂಡ್ನ್ನು ನಿಜವಾಗಿಯೂ 'ಸುವರ್ಣಭೂಮಿ'ಯಾಗಿಸಲು ಅಲ್ಲಿನ ಜನ ನಿರ್ಧರಿಸಿದ್ದಾರೋ ಎಂಬಂತೆ ಅಲ್ಲಿನ ಜನರ ನಡೆ - ನುಡಿ - ಕಾರ್ಯ ನಡೆದಿದೆ. ಅತ್ಯಂತ ಸಂಯಮಶೀಲ, ವಿನಯಶಾಲಿ, ನಗುಮುಖದ ಈ ಜನರಿಂದಾಗಿಯೇ ಆ ನಾಡಿಗೆ ಲ್ಯಾಂಡ್ ಆಫ್ ಸ್ಮೈಲ್ಸ್ (ಮುಗುಳ್ನಗೆಯ ನಾಡು) ಎಂಬ ಹೆಸರು ಬಂದಿದೆಯೇನೋ. ನಾವೆಲ್ಲೂ ಅಲ್ಲಿ ಬೈದಾಟ, ಕೂಗಾಟ, ಚೀರಾಟ ಮತ್ತು ಜಗಳಾಟ ಕಂಡೇ ಇರಲಿಲ್ಲ. ಬಸ್ಸಿನ ಹಾನರ್್ಗಳಿಲ್ಲ, ಎಂತಹ ಸಂದರ್ಭದಲ್ಲೂ ತಾಳ್ಮೆಯ ಮೂತರ್ಿಯಂತಿದ್ದ ಚಾಲಕರುಗಳು ಅತ್ಯಂತ ಸಪೂರ ಗಲ್ಲಿಯಲ್ಲೂ ಎರಡೆರಡು ಭಾರೀ ಬಸ್ಸುಗಳನ್ನು ನಿರಾತಂಕವಾಗಿ ಎದುರುಬದುರಾಗಿ ಸುಲಲಿತವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದರು.
ಮುಕ್ತ ಮುಕ್ತ ದೇಶ 
                 ಅದು ಥಾಯಿ ಏರ್ವೇಸ್ ಇರಲಿ, ಬ್ಯಾಂಕಾಕ್ ಏರ್ವೇಸ್ ಇರಲಿ 'ಸಾವಾತಿಕಾ' ಎಂಬ ಸ್ವಾಗತದ ನುಡಿಯನ್ನು ರಾಗಮಯವಾಗಿ ಉಲಿಯುತ್ತಾವೆ ಸುಂದರಾಂಗಿಯರಾದ ಗಗನಸಖಿಯರು. ವಿಮಾನ ಇಳಿಯುವಾಗಲೂ ಅದೇ ಮೋಹಕ ರಾಗದ ವಿದಾಯದ ನುಡಿ. ಮೇ 3ರಂದು ಹೀಗೆ 'ಸುವರ್ಣಭೂಮಿ'ಯಲ್ಲಿಳಿದು, ಥಾಲ್ಯಾಂಡ್ ಪ್ರವೇಶಿಸಲು ನಿಲ್ದಾಣದಿಂದ ನಿಷ್ಕ್ರಮಿಸಲೆಂದಿರುವಾಗ ವಿಮಾನ ನಿಲ್ದಾಣದೊಳಗೇನೇ ನಡೆದು ಬಂದು 'ಹೋಯ್, ಹೆಬ್ಬಾರ್ರೇ, ಬಂದ್ರ್ಯಾ?' ಎಂದು ಕೈ ಕುಲುಕಿ ಬರಮಾಡಿಕೊಂಡವರು ಇಲ್ಲಿನ ಮೊಗೇರಿಯವರಾಗಿದ್ದು ಈಗ ಅಲ್ಲಿ ಒಂದು ಕಂಪೆನಿಯ ಪ್ರಮುಖ ಕಾರ್ಯನಿರ್ವಹಣಾಧಿಕಾರಿ ಆಗಿರುವ ನನ್ನ ಮಿತ್ರ ಭಾಸ್ಕರ ಭಟ್ಟರು. 'ನೀವು ಹ್ಯಾಂಗೆ ಬಂದ್ರಿ ಒಳಗೆ?' ಎಂತ ಕೇಳಿದ್ರೆ, 'ಇದು ಥಾಲ್ಯಾಂಡ್. ನಮ್ ದೇಶ ಅಲ್ಲ. ಅಲ್ಲಿನ ಹಾಂಗೆ ಇಲ್ಲಿ ಅಂತ ನಿರ್ಬಂಧ ಇಲ್ಲೆ' ಎಂದುಬಿಟ್ಟರು. ಲಕ್ಷಾಂತರ ಪ್ರವಾಸಿಗಳು ಬಂದು ಹೋಗುವ ಥಾಲ್ಯಾಂಡ್ ಹೀಗೆ ಮುಕ್ತ, ಮುಕ್ತ ! ಹೆಜ್ಜೆ ಹೆಜ್ಜೆಗೂ ಪ್ರವಾಸಿಗಳನ್ನು ಸುಲಿಯುವ ನಮ್ಮ ದೇಶದಲ್ಲಿ ಹೆಜ್ಜೆ ಹೆಜ್ಜೆಗೂ ಅಡ್ಡಿ, ಆತಂಕ. ಇದೇಕೆ ಹೀಗೆ, ಅನ್ನಿಸಿತು.

ಕೇಳುವವರಿಲ್ಲದ ರೂಪಾಯಿ
              ಥಾಲ್ಯಾಂಡ್ನಲ್ಲಿ ಖಚರ್ಿಗೆ ಅಲ್ಲಿನ ಹಣವೇ ಬೇಕು. ಅದಕ್ಕೆ 'ಬಾತ್' (ಃಂಊಖಿ) ಎಂಬ ಹೆಸರು. ಹತ್ತು ಸಾವಿರ ಬಾತ್ ಬೇಕಾದರೆ ಅಂದಿನ ದರದಂತೆ ನಾವು 18,500/- ರೂಪಾಯಿ ಕೊಡಬೇಕು. ಅದು ಆನಂತರ ಇಪ್ಪತ್ತು ಸಾವಿರ ರೂಪಾಯಿಗೆ ಏರಿತ್ತು. ಅಂದರೆ ಬಾತ್ ಎಂಬ ಅವರ ಹಣ ರೂಪಾಯಿ ಎಂಬ ನಮ್ಮ ಹಣಕ್ಕಿಂತ ದುಬಾರಿ. ನಮ್ಮ ರೂಪಾಯಿ ಕಡಿಮೆ - ಅವರ ಬಾತ್ ಹೆಚ್ಚು ! ಹೆಚ್ಚಿನ ದೇಶಗಳಲ್ಲಿ ನಮ್ಮ ರೂಪಾಯಿಗೆ ಇದೇ ಅವಸ್ಥೆ ! ಇದೇಕೆ ಹೀಗೆ, ಅನ್ನಿಸಿತು.

ಬೆಳಗಾಗೆದ್ದು ಹುಲಿಮುಖ ! 

               ಬ್ಯಾಂಕಾಕ್ನಿಂದ ಹೊರಟದ್ದು ಪಟ್ಟಾಯಕ್ಕೆ. ಅದೊಂದು ಕಡಲ ತೀರದ ಮನೋಹರ ಪ್ರವಾಸಿ ತಾಣ. ಪ್ರವಾಸಿಗಳಿಂದ ಗಿಜಿಗುಟ್ಟುವ ಪುಟ್ಟ ನಗರವೂ ಹೌದು. ಅಲ್ಲಿ ಪ್ರವಾಸಿಗಳಿಗೆ ಮೋಜು ಮಾಡಲು ಎಲ್ಲಾ ಇರುತ್ತದೆ. ನಮ್ಮ ಪ್ರವಾಸಿ ಸಂಸ್ಥೆಯ ಬಸ್ಸು ಪಟ್ಟಾಯಕ್ಕೆ ಹೊರಟು ದಾರಿ ಮಧ್ಯೆ ಟೈಗರ್ ಝೂ (ಹುಲಿಧಾಮ)ದಲ್ಲಿ ನಮ್ಮನ್ನಿಳಿಸಿತು. ಅಲ್ಲೇ ನಮಗೆ ಉಪಾಹಾರ. ಭಾರತೀಯ ಉಪಾಹಾರವೇ ಇತ್ತು. ನಾವು ಹಲವರು ಬೆಳಗ್ಗಿನ ಜಾವ ವಿಮಾನ ನಿಲ್ದಾಣದಲ್ಲೇ ಮುಖ ತೊಳೆದುಕೊಂಡು ಬಂದಿದ್ದ ಕಾರಣ ನೇರ ಉಪಾಹಾರಕ್ಕೆ ಕೈ ಹಾಕಿದೆವು. ಆದರೆ ಹಲವರಿಗಿನ್ನೂ ಮುಖ ಪ್ರಕ್ಷಾಳನ, ಬೆಳಗ್ಗಿನ ನಿತ್ಯ ವಿಧಿಗಳು ಆಗಿರಲಿಲ್ಲ. ಅವರೆಲ್ಲ ಬರುವಾಗ ಪೂರಿ, ಪಲ್ಯ, ಹಣ್ಣು, ಬ್ರೆಡ್ಡು ಇತರರು ಮುಕ್ಕಿ ಆಗಿತ್ತು ! ಇದ್ದದ್ದರಲ್ಲೇ ಅವರು ತೃಪ್ತಿ ಪಟ್ಟುಕೊಂಡರು. ಆದರೆ ಬಸ್ಸಿನವರು ನಮ್ಮನ್ನು ಪಟ್ಟಾಯಕ್ಕೆ ಕೂಡಲೇ ಹೊರಡಿಸುವ ಗಡಿಬಿಡಿಯಲ್ಲಿ ಇರಲೇ ಇಲ್ಲ. ನೀವು 'ಹುಲಿಧಾಮ' ನೋಡಿ ಬನ್ನಿ ಎನ್ನುತ್ತಲೇ ಇದ್ದರು. ಬೆಳಿಗ್ಗೆ ಎದ್ದು ಹುಲಿಮುಖ ನೋಡಲು ಯಾರಿಗೂ ಮನಸ್ಸಿಲ್ಲ. ಮೇಲಾಗಿ ಪ್ರವೇಶ ಶುಲ್ಕವೇ 400 ಬಾತ್ ತೆರಬೇಕು. ಎಲ್ಲರೂ ಹೊರಗೆ ಇರಿಸಿದ್ದ ಹುಲಿಗಳ ಶಿಲ್ಪಗಳ ಎದುರು ಹಾಗೂ ಸುಂದರ ಉದ್ಯಾನಗಳ ಮುಂದೆ ನಿಂತೇ ಚಿತ್ರ ತೆಗೆಸಿಕೊಂಡು ಕಾದು ಕೂತರು. ಭಾರತೀಯ ಪ್ರವಾಸಿ ಸಂಸ್ಥೆ ಏಕೆ ಹೀಗೆ ಮಾಡುತ್ತಿದೆ ಎಂಬುದೇ ತಿಳಿಯದಾಯಿತು. ಹುಲಿಧಾಮದ ಟಿಕೇಟಿನಲ್ಲಿ ಇವರಿಗೆ ಕಮಿಶನ್ ಇರಬೇಕು ಎಂದೂ ಚಚರ್ಿತವಾಯಿತು. ಹಾಗೆ ಮಾತಾಡುವಾಗಲೇ ನಮ್ಮ ಮಾರ್ಗದಶರ್ಿನಿ ದಾರಾ ಎಂಬವಳು ಹೇಳಿಬಿಟ್ಟಳು ಸತ್ಯವನ್ನು. ಇಲ್ಲೆಲ್ಲಾ ಹೋಟೇಲುಗಳಲ್ಲಿ ಚೆಕ್ ಇನ್ ಮತ್ತು ಚೆಕ್ ಔಟ್ (ಪ್ರವೇಶ ಹಾಗೂ ನಿರ್ಗಮನ) ಸಮಯವೇ ಮಧ್ಯಾಹ್ನ 2ಕ್ಕೆ. ಹಾಗಾಗಿ ಪಟ್ಟಾಯದಲ್ಲಿ ನಮ್ಮ ಹೋಟೇಲು ರೂಮು ಖಾಲಿ ಆಗುವ ವರೆಗೆ ನಾವು ಕಾಯಬೇಕಲ್ಲ, ಅದಕ್ಕಾಗಿ ನಿಮ್ಮನ್ನು ಹುಲಿಗಳ ಹತ್ತಿರ ಕೂಡಿ ಹಾಕಿದ್ದೇವೆ ಎಂದಳು ! ಭಾರತದಂತಹ ದೂರದ ದೇಶದಿಂದ ಹಣ ತೆತ್ತು ಬಂದೂ, ಇಡೀ ಅರ್ಧದಿನ ಹೀಗೆ ಹುಲಿಯ ಗವಿಗಳ ಬಾಗಿಲು ಕಾಣುತ್ತಾ ಕೂರುವಂತಾಯಿತಲ್ಲ ಎಂದು ಹಲುಬಿಕೊಂಡದ್ದೇ ಬಂತು. ಇದೇಕೆ ಹೀಗೆ ಎಂತ ಅನ್ನಿಸಿ ಭಾಸ್ಕರ ಭಟ್ಟರಿಗೆ ಫೋನು ಮಾಡಿದರೆ, 'ಹೋಯ್, ಇದ್ರಲ್ಲಿ ಹೊಸ್ತೆಂತ ಇಲ್ಲೆ. ಕಳದ ಸಲ ನಮ್ ಪೈಕಿ ಒಬ್ರು ಬಂದಾಗ್ಲೂ ಹಿಂಗೇ ಮಾಡೀರ್' ಎಂದುಬಿಟ್ಟರು.


ಟೆವೆಂಟಿ ಫೋರ್ ಎಂದರೆ ? 
           ಸುಮ್ಮನೆ ಗವಿಯ ಬಾಗಿಲಲ್ಲಿ ಕಾಯುವುದಕ್ಕಿಂತ ಹುಲಿಧಾಮ ಇರುವ ಸಣ್ಣ ಹಳ್ಳಿಯಂತಹ ಊರು ಸುತ್ತಾಡಿ ಬರುವ ಎಂದು ಹೊರಟೆ. ನನ್ನ ಜತೆ ನಮ್ಮ ತಂಡದ ಮಲ್ಯರೂ ಬಂದರು. ಮೇ ತಿಂಗಳು, ಅಸಾಧ್ಯ ಬಿಸಿಲು, ವಿಪರೀತ ಸೆಕೆ ! ದಾರಿ ಬದಿಯಲ್ಲಿ ಸೀಯಾಳಗಳ ರಾಶಿ ಕಾಣಿಸಿತು. 'ಇಲ್ಲಿ ಬೊಂಡ ಇತ್ತ್ ಮಾರಾಯ್ರೆ, ಕುಡಿವನಾ?' ಎಂದು ಅಲ್ಲಿಗೆ ಹೋದೆವು. ಇಲ್ಲೆಲ್ಲಾ ಹುಡುಗಿಯರೇ ಅಂಗಡಿ ನಡೆಸುವುದು. ಸೀಯಾಳದ ವ್ಯಾಪಾರವೂ ಇಬ್ಬರು ಹುಡುಗಿಯರದ್ದೇ. ಅವರಿಗೋ ಇಂಗ್ಲೀಷ್ ಭಾಷೆ ಒಂಚೂರೂ ಗೊತ್ತಿಲ್ಲ. ಸೀಯಾಳ ತೋರಿಸಿ ಖಿತಿಠ ಅಂದ್ರೂ ಅರ್ಥ ಆಗ್ಲಿಲ್ಲ. ಕಡೆಗೆ ಎರಡು ಕೈ ಬೆರಳು ತೋರಿಸಿ, ಸೀಯಾಳ ಕೊಡುವಂತೆ ಸನ್ನೆ ಮಾಡಿದಾಗ ಅರ್ಥ ಆಯಿತು. ಅಲ್ಲಿ ಸೀಯಾಳವನ್ನು ಕೆತ್ತಿ ಮಂಜುಗಡ್ಡೆಯಲ್ಲಿಟ್ಟಿದ್ದರು. ನಮಗಂತೂ ಅದನ್ನು ಕಂಡೇ ಸ್ವರ್ಗಸುಖ ಅನ್ನಿಸಿತು. ಅದನ್ನೇ ಕೊಡು ಎಂದು ಸನ್ನೆ ಮಾಡಿ ತೋರಿಸಿದೆವು. ಒಂದು ಥಮರ್ೋಕೂಲ್ ಸಾಧಾರಣ ಪಟ್ಟಿಗೆ. ಅದರೊಳಗೆಲ್ಲಾ ಮಂಜುಗಡ್ಡೆಯ ತುಣುಕುಗಳು. ಅದರಲ್ಲಿ ಕೆತ್ತಿದ ಬೊಂಡಗಳನ್ನು ಹುಗಿದಿಟ್ಟಿದ್ದರು. ಆ ಹುಡುಗಿಯರು ಬೊಂಡ ತೂತು ಮಾಡಿ ಸ್ಟ್ರಾ ಸಿಕ್ಕಿಸಿ ಕೊಟ್ಟಾಗ ಅದರಲ್ಲಿದ್ದ ನೀರು ನಮಗೆ ಅಮೃತ ಎನ್ನಿಸಿ ಹೀರಿದ್ದೇ ಹೀರಿದ್ದು. ಅಷ್ಟೂ ತಂಪು, ಅಷ್ಟೂ ಸಿಹಿ. ನಮ್ಮವರೇಕೆ ಈ ತಂತ್ರಗಾರಿಕೆ ನಮ್ಮೂರಲ್ಲಿ ಮಾಡುವುದಿಲ್ಲ ? ಒಂದು ಮಿನರಲ್ ವಾಟರ್ ಬಾಟಲಿ 'ಕೋಲ್ಡ್' ಬೇಕಾದರೆ ಹೆಚ್ಚುದರ, 'ವಾಮರ್್' ಇದ್ದಲ್ಲಿ ಕಡಿಮೆ ದರ ಅನ್ನುತ್ತಾರೆಯೇ ಹೊರತು, ಸೀಯಾಳಕ್ಕೆ ಯಾಕೆ ಹೀಗೆ 'ಕೋಲ್ಡ್' ಮತ್ತು 'ವಾಮರ್್' ವ್ಯವಸ್ಥೆ ಮಾಡುವುದಿಲ್ಲ? ಅನ್ನಿಸಿತು. ಏನೇ ಇರಲಿ ನಮ್ಮೂರವರಿಗೆ ಇದನ್ನು ತೋರಿಸಲೇಬೇಕು ಎಂತ ಮನಸ್ಸು ಮಾಡಿ ಕೈಯಲ್ಲಿದ್ದ ಕ್ಯಾಮರಾದಿಂದ ಕ್ಲಿಕ್ಕಿಸಿಯೇ ಬಿಟ್ಟೆ ! ಆ ಹುಡುಗಿಯರು ಮೊದ ಮೊದಲು  ತಮ್ಮ ಫೋಟೋ ತೆಗೀತಿದ್ದಾರೇನೋ ಎಂದು ಮುಜುಗರಪಟ್ಟುಕೊಂಡರು. ನಂತರ ನಾನು ಸೀಯಾಳದ ಫೋಟೋ ತೆಗೆಯುತ್ತಿರುವುದನ್ನು ಕಂಡು ಗಹಗಹಿಸಿ ನಕ್ಕುಬಿಟ್ಟರು ! ಇವನೆಲ್ಲೋ ಹುಚ್ಚ ಎಂದುಕೊಂಡಿರಬೇಕು. 'ಒಡೆದುಕೊಡಿ' ಎಂದು ಕೈಯಲ್ಲೇ ಸನ್ನೆ ಮಾಡಿ ಕೇಳಿದಾಗ, ಕತ್ತಿ ಹಿಡಿದು ಹುಡುಗಿಯರೇ ಬೊಂಡ ಬಗೆದು ಎರಡಾಗಿಸಿ ಕೊಟ್ಟರು. ಅದರೊಳಗಿನ ಥಂಡಿಯಾದ ತೆಳು ಪದರಿನ ಸಿಹಿ ಬೊಂಡವನ್ನು ಸವಿಯಾಗಿ ಮೆದ್ದದ್ದೇ ಮೆದ್ದದ್ದು. ಅಷ್ಟು ರುಚಿಯಾದ ಬೊಂಡ ಈ ವರೆಗೆ ತಿಂದದ್ದೇ ಇಲ್ಲ ಅನ್ನಿಸಿತು. ಎಲ್ಲ ಮುಗಿದು 'ಎಷ್ಟು' ಎಂದರೂ ಅವರಿಗೆ ತಿಳಿಯಲಿಲ್ಲ. ಕಡೆಗೆ ಕೈ ಸನ್ನೆಯಿಂದ ಕೇಳಿದಾಗಲೂ ಗೊತ್ತಾಗದಾಗ, ಕಿಸೆಯಿಂದ ಬಾತ್ ನೋಟು ತೆಗೆದು ತೋರಿಸಿ ಎಷ್ಟು ಎಂದು ಕೈಯಲ್ಲೇ ಕೇಳಿದೆ. ಅವರೇನು ಹೇಳಿದರೋ, 'ಸವೆಂಟಿ ಫೋರ್ ಬಾತ್' ಎಂದಂತಿತ್ತು. ನಮಗಿಬ್ಬರಿಗೂ ಹಾಗೇ ಕೇಳಿಸಿತು. ಹೌಹಾರಿಬಿಟ್ಟೆವು. ಅಂದರೆ ಒಂದೊಂದು ಬೊಂಡಕ್ಕೆ 37 ಬಾತ್ = ಐವತ್ತೈದು ರೂಪಾಯಿಗೂ ಜಾಸ್ತಿ ! ಹೊಸ ದೇಶ, ಹೊಸ ವ್ಯಾಪಾರ, ಹೊಸ ದುಡ್ಡು - ಹೀಗೆ ಸಖತ್ ಮೋಸ ಹೋಗಿಬಿಟ್ಟೆವೇ, ಇದೆಂಥಾ ರೇಟಪ್ಪಾ, ನಮ್ಮ ದೇಶ ಸಾವಿರ ಪಾಲಿಗೆ ಅಡ್ಡಿಲ್ಲೆ ಎಂದುಕೊಂಡು, ನೋಡುವ ಎಂತ 50 ಬಾತ್ನ ಒಂದು ನೋಟನ್ನು ನೀಡಿದೆ. ಆಕೆ ಮರು ಮಾತಾಡದೇ ಅದನ್ನು ತೆಗೆದುಕೊಂಡು ಚಿಲ್ಲರೆ ಎಣಿಸತೊಡಗಿದಾಗ ಪರಮಾಶ್ಚರ್ಯ. ಇಪ್ಪತ್ತನಾಲ್ಕು ಬಾತ್ ತೆಗೆದುಕೊಂಡು, ಇಪ್ಪತ್ತಾರು ಬಾತ್ ಹಿಂದಕ್ಕೆ ಕೊಟ್ಟು ಕೈ ಮುಗಿದರು. ಕಡೆಗೆ ವಿಚಾರಿಸಿದಾಗ ನಮಗೆ ಗೊತ್ತಾದದ್ದು, ಅವರಿಗೆ ನಮ್ಮ ಹಾಗೆ ಇಂಗ್ಲೀಷ್ ಮಾತಾಡಲು ಬರುವುದಿಲ್ಲ, 'ಟ್ವೆಂಟಿ' ಎನ್ನಬೇಕಾದರೆ 'ಟವೆಂಟಿ' ಎನ್ನುತ್ತಾರೆ, ಆಕೆ 'ಟವೆಂಟಿಫೋರ್' ಎಂದದ್ದನ್ನು ನಾವು 'ಸೆವೆಂಟಿಫೋರ್' ಎಂದು ತಪ್ಪಾಗಿ ಅಥರ್ೈಸಿಕೊಂಡಿದ್ದೆವು ಎಂತ. ಅಂದರೆ ಒಂದು ಬೊಂಡಕ್ಕೆ ಬರೇ 12 ಬಾತ್. ಭಾರತೀಯ ಹಣದಲ್ಲಿ ಸುಮಾರು 18 ರೂಪಾಯಿ. ಇಲ್ಲಿಯೂ ಅಷ್ಟೇ ಇದೆಯಲ್ಲ - ಅಡ್ಡಿಲ್ಲ ಥಾಲ್ಯಾಂಡ್. ಕೋಲ್ಡ್ ಸೀಯಾಳಕ್ಕೆ 12 ಬಾತ್ ಆದರೆ ವಾಮರ್್ಗೆ ಬಹುಶಃ 10 ಬಾತ್ ಇರಬಹುದೇನೋ ಎಂಬ ಲೆಕ್ಕಾಚಾರ ಹಾಕುತ್ತಾ ಮುಂದಕ್ಕೆ ಹೋದೆವು.
ಸಿಹಿ ಸಿಹಿ ಹಲಸಿನ ಹಣ್ಣು
         ಅಲ್ಲಿ ರಸ್ತೆ ಬದಿ ಹಲಸಿನ ಹಣ್ಣುಗಳದ್ದೇ ರಾಶಿ ಹಾಕಿಕೊಂಡು ಹಲವಾರು ಜನ ಗಂಡಸರು, ಹೆಂಗಸರು ಸಿಪ್ಪೆ ಸುಲಿಯುತ್ತಾ, ಸೋಳೆ ತೆಗೆದು ಒಟ್ಟು ಮಾಡುತ್ತಾ, ಅವನ್ನೆಲ್ಲಾ ಒಪ್ಪವಾಗಿ ಮಾರುಕಟ್ಟೆಗಾಗಿ ಪ್ಯಾಕ್ ಮಾಡುತ್ತಾ ಇದ್ದರು. ನಾನು ಹೋಗಿ ನಿಂತೆ. ಒಬ್ಬಳು ಬಂದು ಪ್ರಶ್ನಾರ್ಥಕವಾಗಿ ಏನು? ಎಂದು ಸನ್ನೆ ಮಾಡಿದಳು. ಹಣ್ಣು ತೋರಿಸಿದೆ. ಎರಡು ಸೋಳೆ ತಂದು ತಿನ್ನಲು ಕೊಟ್ಟಳು. ದಪ್ಪ ದಪ್ಪದ ದೊಡ್ಡ ಹಲಸಿನ ಸೋಳೆಗಳು. ಸಿಹಿ ಎಂದರೆ ಸಿಹಿ. ಕೊಂಡೊಯ್ಯಲು ಬೇಕು, ದರ ಎಷ್ಟು ಎಂದು ಇಂಗ್ಲೀಷಿನಲ್ಲಿ ಕೇಳಿದೆ. ಅವಳಿಗೆ ಅರ್ಥ ಆದಂತೆ ಕಂಡಿತು. ಆದರೆ ಉತ್ತರ ಕೊಡುವಷ್ಟು ಇಂಗ್ಲೀಷ್ ಗೊತ್ತಿಲ್ಲ ! ಕ್ಯಾಲ್ಕುಲೇಟರ್ ಕೈಗೆ ತೆಗೆದುಕೊಂಡು ಗುಂಡಿಗಳನ್ನು ಒತ್ತಿ ನನ್ನೆದುರಿಗೆ ಹಿಡಿದಳು. ಅದರಲ್ಲಿ 60 ಎಂದು ಕಾಣಿಸುತ್ತಿತ್ತು. ಅಡ್ಡಿಯಿಲ್ಲ ಎಂದು ತಲೆಯಾಡಿಸಿದೆ. ಯಾವುದು ಬೇಕು ಎಂದು ವಿವಿಧ ಹಲಸುಗಳತ್ತ ಬೊಟ್ಟು ಮಾಡಿದಳು. ತಂದು ತೋರಿಸು ಎಂದು ಸನ್ನೆ ಮಾಡಿದಾಗ ಎರಡು ಮೂರು ಹಲಸುಗಳಿಂದ ಸೋಳೆ ತಂದು ಕೊಟ್ಟಳು. ಒಂದು ಸಪ್ಪೆ, ಇನ್ನೊಂದು ಇನ್ನೂ ದೋರೆಯಷ್ಟೇ, ಮತ್ತೊಂದು ಉತ್ಕೃಷ್ಟ ಸಿಹಿ ಇತ್ತು. ಅದನ್ನೇ ಎತ್ತಿ ತೋರಿಸಿದಾಗ ಆ ಹಣ್ಣಿನತ್ತ ಹೋಗಿ ಪ್ಲಾಸ್ಟಿಕ್ ಲಕೋಟೆಗೆ ಅದರ ಸೋಳೆಗಳನ್ನು ತುಂಬಿಕೊಂಡು ಬಂದಳು. ತೂಕ ಮಾಡಿ ಒಂದು ಕೆ.ಜಿ. ಕೊಟ್ಟಳು. ಲಕೋಟೆಯಲ್ಲಿ ಸುಮಾರು 50ರಷ್ಟು ಸೋಳೆಗಳಿದ್ದುವು. ನಾವು ಕೆಲವನ್ನು ಚಪ್ಪರಿಸುತ್ತಾ ಮರಳಿ ಬಂದು, ನಮ್ಮ ತಂಡದವರಿಗೆ ಲಕೋಟೆ ಕೊಟ್ಟಾಗ ಸಂಭ್ರಮದಿಂದ ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿಂದರು. ಅಲ್ಲೇ ಹುಲಿಧಾಮದ ಹೊರಗೆ ಅಂಗಡಿಯಲ್ಲಿ ಒಂದು ಪ್ಯಾಕ್ ಹಲಸಿನ ಸೋಳೆಗಳಿಗೆ 40 ಬಾತ್ - ಬರೇ ಆರು ಸೋಳೆಗಳು ! ಅದರ ಫೋಟೋ ಕ್ಲಿಕ್ಕಿಸಿಕೊಂಡು, ನಾವೇ ಬುದ್ದಿವಂತರು, 60 ಬಾತಿಗೆ 50 ಸೋಳೆ ಖರೀದಿಸಿದೆವು ಎಂದು ಹಿಗ್ಗು ತಂದುಕೊಂಡೆವು. ಥಾಲ್ಯಾಂಡೇ ಹಾಗೆ. ಭಾರೀ ಚೆಂಡಿನ ಗಾತ್ರದ ಪೇರಳೆ ಹಣ್ಣುಗಳು, ರುಚಿ ಅಂದರೆ  ರುಚಿ. ದಾರಿ ಬದಿಯಲ್ಲೇ ಇಟ್ಟುಕೊಂಡು ಕ್ಷಣಮಾತ್ರದಲ್ಲಿ ಕತ್ತರಿಸಿ ಹೋಳು ಮಾಡಿ ಸಕ್ಕರೆ, ಉಪ್ಪು, ಮೆಣಸಿನ ಹುಡಿ ಚಿಮುಕಿಸಿ ಪ್ಲಾಸ್ಟಿಕ್ ಲಕೋಟೆಗೆ ಹಾಕಿ, ಚುಚ್ಚಿ ಹಿಡಿದು ತಿನ್ನಲು ಚೂಪಾದ ಕಡ್ಡಿ ಇಟ್ಟುಕೊಡುತ್ತಾರೆ. ಪ್ಲಾಸ್ಟಿಕ್ ಕವಚದಲ್ಲಿ ತಾಜಾ ಮಾವಿನ ಹಣ್ಣಿನ, ಮಾವಿನ ಕಾಯಿಯ ಹೋಳುಗಳು, ಅರಂಗುಟಾ ಹಣ್ಣುಗಳು, ಅನಾನಾಸು, ಚಿಕ್ಕು, ರೋಸ್ ಆ್ಯಪಲ್ (ಇದಂತೂ ತೀರಾ ರಸಭರಿತ ಸವಿಯಾದ ಹಣ್ಣು!) ಧಾರಾಳವಾಗಿ ಸಿಗುತ್ತವೆ. ಅದರಲ್ಲೇ ಹೊಟ್ಟೆ ತುಂಬಿಸಿಕೊಳ್ಳಬಹುದು. ಜೇನು ಸುರಿವ, ಹಾಲು ಹರಿವ ಸ್ವರ್ಗದಂತೆ ನಮಗೆ ಥಾಲ್ಯಾಂಡ್ ಕಂಡಿದ್ದರೆ ಆಶ್ಚರ್ಯವಿರಲಿಲ್ಲ.

ಸಮುದ್ರ ಮಥನದ ಕಥೆ
             ಪ್ರವಾಸ ಮುಗಿಸಿ ಭಾರತಕ್ಕೆ ವಾಪಾಸು ಹಾರಲು ಸಿದ್ಧರಾಗಿ, ಸುವರ್ಣಭೂಮಿ (ಅವರ ಭಾಷೆಯಲ್ಲಿ ಸುವನ್ನ ಪೂಮ್) ವಿಮಾನ ನಿಲ್ದಾಣದ 'ನಿರ್ಗಮನ ಜಾಗ'ಕ್ಕೆ ಬಂದರೆ ಅಲ್ಲೊಂದು ಆಶ್ಚರ್ಯ ಕಾದಿತ್ತು. ಪ್ರವಾಸಿಗಳೆಲ್ಲರ ಕ್ಯಾಮರಾಗಳು ಝಗ್ ಝಗ್ ಎನ್ನುತ್ತಾ ಜನಗಳು ಸ್ಪಧರ್ೆಯಲ್ಲಿದ್ದಂತೆ ಫೋಟೋ ತೆಗೆಯುತ್ತಿದ್ದರು. ಏನಂತ ನೋಡಿದರೆ ಅದೊಂದು ಭಾರೀ ಉದ್ದದ ಸುಂದರ ಶಿಲ್ಪ. ಸಮುದ್ರ ಮಥನದ್ದೇ ಶಿಲ್ಪವನ್ನು ವಿಮಾನ ನಿಲ್ದಾಣದೊಳಗೆ ಕಡೆದು ಇಟ್ಟಿದ್ದರು. ವರ್ಣ ರಂಜಿತ ಚಂದದ ಶಿಲ್ಪವದು. ಮಧ್ಯೆ ಮಂದರ ಪರ್ವತ. ಅದನ್ನು ಸುತ್ತಿಕೊಂಡ ವಾಸುಕಿ. ಈ ಮಹಾ ಸರ್ಪವನ್ನು ಒಂದೆಡೆ ರಾಕ್ಷಸರು, ಇನ್ನೊಂದೆಡೆ ದೇವತೆಗಳು ಕಡೆಯಲು ಎಳೆಯುತ್ತಿರುವ ಅದ್ಭುತ ದೃಶ್ಯ. ಪರ್ವತದ ತುದಿಯಲ್ಲಿ ನಿಂತ ಥಾಯಿ ಶೈಲಿಯ ಭಗವಾನ್ ಶ್ರೀ ಮಹಾವಿಷ್ಣು. ಭಾರತ ಮಾಡದ್ದನ್ನು ಥಾಲ್ಯಾಂಡ್ನ ಬೌದ್ಧ ದೇಶ ಮಾಡಿ ತೋರಿಸಿತ್ತು.

                                         ಅವರೇಕೆ ಹೀಗೆ - ನಾವೇಕೆ ಹಾಗೆ ?
                 ನಮ್ಮ ದೇಶದ ವಿಮಾನ ನಿಲ್ದಾಣದೊಳಗೆ ಫೋಟೋ ತೆಗೆಯ ಹೋದರೆ ಅಲ್ಲಿನ ಭದ್ರತಾ ಅಧಿಕಾರಿಗಳು ಕಣ್ಣು ಕೆಂಪಗೆ ಮಾಡಿ ಬೆದರಿಸುತ್ತಿದ್ದರೆ, ಇಲ್ಲೆಲ್ಲೂ ಭದ್ರತಾ ಅಧಿಕಾರಿಗಳ ಸುಳಿವೇ ಇಲ್ಲ. ಎಲ್ಲೆಡೆ ಸ್ವಾತಂತ್ರ್ಯ, 28ಸರಳತೆ, ಸ್ವಚ್ಛಂದತೆ. ಎಲ್ಲವೂ ಮುಕ್ತ ಮುಕ್ತ. ಹಾಗೆ ನೋಡಿದರೆ, ಬ್ಯಾಂಕಾಕಿನಲ್ಲಾಗಲೀ, ಪಟ್ಟಾಯದಲ್ಲಾಗಲೀ ಎಲ್ಲೂ ನಾವು ಪೋಲೀಸರನ್ನೇ ಕಾಣಲಿಲ್ಲ ! ಅಷ್ಟೊಂದು ಪ್ರವಾಸಿಗಳು ಬಂದುಹೋಗುವ ಈ ದೇಶಕ್ಕೆ ಇರದಿದ್ದ ಭಯ ನಮ್ಮ ದೇಶಕ್ಕೆ ಯಾಕೆ ಬಂತೋ ! ಅವರೇಕೆ ಹೀಗೆ - ನಾವೇಕೆ ಹಾಗೆ ಎಂದುಕೊಳ್ಳುತ್ತಲೇ ಮರಳಿ ಭಾರತಕ್ಕೆ ಬಂದೆವು.

********************************

Opinion: fill Your Name, Email and Write your Comments


Name *

Email *

Please Enter Your Message Here: *