 |
A view of Bhandarkars' College |
ಉನ್ನತ ಶಿಕ್ಷಣವೆಂಬುದು ಕನಸಿನ ಮಾತಾಗಿದ್ದ ಕಾಲಘಟ್ಟದಲ್ಲಿ ಕುಂದಾಪುರದ ನಾಗರಿಕರಲ್ಲೊಂದು ಕಾಲೇಜೊಂದನ್ನು ಆರಂಭಿಸುವ ಬಯಕೆ ಹುಟ್ಟಿ, ಅಂದು ಅಕಾಡೆಮಿ ಆಫ್ ಜನರಲ್ ಎಜುಕೆಶನ್ನ ಡಾ| ಟಿ.ಎಂ.ಎ.ಪೈ ಹಾಗೂ ಕುಂದಾಪುರದಲ್ಲಿ ಹುಟ್ಟಿ ಬಹ್ರೇನಿನಲ್ಲಿ ವೈದ್ಯರಾಗಿದ್ದ ಡಾ| ಎ.ಎಸ್.ಭಂಡಾರ್ಕರ್ ರವರ ಸಹಕಾರದೊಂದಿಗೆ ಸಾಕಾರಗೊಂಡು, 1963 ರ ಜುಲೈ 11 ರಂದು ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ನಾನ ಕಾಲೇಜು ಅಸ್ತಿತ್ವಕ್ಕೆ ಬಂದಿತು. ಫಲವಾಗಿ ನೂರಾರು ಶಿಕ್ಷಾಣಾಕಾಂಕ್ಷಿಗಳ ಬಯಕೆ ಸಾಕಾರಗೊಂಡು ಕುಂದಾಪುರದ ಚಿತ್ರಣವನ್ನೇ ಅದು ಬದಲಿಸಿತು. ಮುಂದೆ ಡಾ| ಎಚ್.ಶಾಂತರಾಮ್ ಅವರು ಪ್ರಾಂಶುಪಾಲರಾಗಿ ಆಡಳಿತ ಸೂತ್ರವನ್ನು ಹಿಡಿದಾಗಿನಿಂದ ಕಾಲೇಜು ಮತ್ತಷ್ಟು ಬೆಳೆಯಿತು. ಈಗ ಕಾಲೇಜಿಗೆ ನಾಡಿನಲ್ಲೇ ಮನ್ನಣೆಯಿದೆ, ಗೌರವದ ಸ್ಥಾನ ಮಾನವಿದೆ.
ಇದೀಗ ಕಾಲೇಜು ಸುವರ್ಣ ಮಹೋತ್ಸವದ ಸಿದ್ದತೆಯಲ್ಲಿ ತೊಡಗಿದೆ. ಶಿಕ್ಷಣಾಕಾಂಕ್ಷಿಗಳ ಕನಸನ್ನು ಸಾಕಾರಗೊಳಿಸಿ ಸಾವಿರ, ಸಾವಿರ ರತ್ನಗಳನ್ನು ನಾಡಿಗೆ ನೀಡಿರುವ, ನಾವು ಕಲಿತ ನಮ್ಮ ಹೆಮ್ಮೆಯ ಭಂಡಾರ್ಕಾರ್ಸ್ ಕಾಲೇಜು ಮತ್ತಷ್ಟು ಕೀತರ್ಿ ಗಳಿಸಲಿ ಎಂಬುದೇ ನಮ್ಮೆಲ್ಲರ ಆಶಯ.
 |
Proposed Administrative Block |
 |
College Library |
 |
Computer Science Block |