ಕುಂದಾಪ್ರ ಕನ್ನಡದ ಬಳಕೆ ಹೆಚ್ಚಾಗಬೇಕಿದೆ: ಎ.ಎಸ್.ಎನ್ ಹೆಬ್ಬಾರ್


      ಇಂದು ಹಲವು ಭಾಷೆಗಳು ಅಳಿವಿನಂಚಿನಲ್ಲಿದೆ. ಕುಂದಾಪುರದವರಾದ ನಾವು ಕುಂದಾಪ್ರ ಕನ್ನಡವನ್ನು ಹೆಚ್ಚೆಚ್ಚು ಬಳಸದಿದ್ದರೆ ನಮ್ಮ ಭಾಷೆಗೂ ಈ ಕಂಟಕ ಎದುರಾಗಬಹುದು ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಪೂವರ್ಾಧ್ಯಕ್ಷರಾದ ಎ.ಎಸ್.ಎನ್ ಹೆಬ್ಬಾರ್ ಹೇಳಿದರು.
ಅವರು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ಜರುಗಿದ ಕುಂದಾಪ್ರ ಡಾಟ್ ಕಾಮ್ ವೆಬ್ಸೈಟ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಾ ಕುಂದಾಪುರ ಸಂಸ್ಕೃತಿಯ ಸೊಗಡು ಕುಂದಾಪ್ರ ಡಾಟ್ ಕಾಮ್ ತುಂಬೆಲ್ಲಾ ಪ್ರತಿಬಿಂಬಿಸಿ ಅದು ದೇಶ ವಿದೇಶಗಳಲ್ಲಿ ನೆಲೆಸಿರುವ ಪ್ರತಿ ಕುಂದಾಪುರಿಗರೂ ಪ್ರತಿದಿನವೂ ತಲುಪುವಂತಾಗಬೇಕು ಎಂದರು
ಅಕಾಡೆಮಿ ಆಫ್ ಜನರಲ್ ಎಜುಕೇಶನ್ನ ಆಡಳಿತಾಧಿಕಾರಿ ಡಾ. ಹೆಚ್ ಶಾಂತರಾಮ್ ವೆಬ್ಸೈಟ್ ಬಿಡುಗಡೆಗೊಳಿಸಿ ಶುಭಹಾರೈಸಿದರು. ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಚಂದ್ರಶೇಖರ ದೋಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಅಂತಾರಾಷ್ಟ್ರೀಯ ಖ್ಯಾತಿಯ ಜಾದೂಗಾರ ಓಂ ಗಣೇಶ್ ಉಪ್ಪುಂದ ಅತಿಥಿಯಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರವಿನಾಕುಮಾರಿ ನಿರೂಪಿಸಿದರು. ವೆಬ್ಸೈಟ್ ರೂಪಿಸಿದ ಸುನಿಲ್ ಹೆಚ್. ಜಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಜ್ವಲಾ ಸ್ವಾಗತಿಸಿ, ಚೈತ್ರ ಚಂದನ್ ಧನ್ಯವಾದಗೈದರು.