ಉದಯೋನ್ಮುಖ ಕ್ರೀಡಾಪಟು ವಿಶ್ವನಾಥ ಬಿ.

ಸಾಧನೆಯೆಂಬುದು ಯಾರೊಬ್ಬರ ಸೊತ್ತಲ್ಲ. ಏನನ್ನಾದರೂ ಸಾಧಿಸಬೇಕೆಂಬ ಹಂಬಲ, ಆತ್ಮಸ್ಥೈರ್ಯ ಜೊತೆಗೊಂದಿಷ್ಟು ಕಠಿಣ ಪರಿಶ್ರವ ಇವಿಷ್ಟಿದ್ದರೆ ಸಾಕು ವ್ಯಕ್ತಿ ತಾನಾಗಿಯೇ ಬೆಳೆಯುತ್ತಾನೆ. ಸಾಧಿಸಿಯೇ ತೀರುತ್ತಾನೆ. ಬಹುಶಃ ಆತನಿಗೆ ಇದಕ್ಕಿಂತ ಹೆಚ್ಚಿನ ಆತ್ಮತೃಪ್ತಿ ಬೇರಾವುದೂ ನೀಡದು.
ಬದುಕಿನಲ್ಲಿ ಅಡ್ಡಲಾದ ಟೀಕೆಯನ್ನೇ ಮೆಟ್ಟಿಲಾಗಿಸಿಕೊಂಡು, ಪ್ರೋತ್ಸಾಹದ ಮಾತುಗಳಿಂದ ಮಾರ್ಗವೊಂದನ್ನು ಕಂಡುಕೊಂಡು, ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟವರು ಕುಂದಾಪುರ ತಾಲೂಕು, ದೇವಲ್ಕುಂದ ಗ್ರಾಮದ ಬಾಳೆಕೆರೆಯ ಉದಯೋನ್ಮುಖ ಕ್ರೀಡಾಪಟು ವಿಶ್ವನಾಥ ಬಿ. ಪವರ್ ಲಿಫ್ಟಿಂಗ್, ವೇಯ್ಟ್ ಲಿಫ್ಟಿಂಗ್, ಡೆಡ್ ಲಿಫ್ಟಿಂಗ್, ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ವಿಶೇಷ ಛಾಪು ಮೂಡಿಸಿರುವ ಇವರು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದಲ್ಲೊಂದು ದಾಖಲೆಯನ್ನು ಬರೆದು, ರಾಜ್ಯ-ರಾಷ್ಟ್ರಮಟ್ಟದಲ್ಲೂ ಮಿಂಚಿ ಅಪಾರ ಮೆಚ್ಚುಗೆ ಗೆ ಪಾತ್ರರಾದವರು.
ಚಿಕ್ಕಂದಿನಿಂದಲೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಇವರನ್ನು ಆಕಷರ್ಿಸಿದ್ದು ಪವರ್ ಲಿಫ್ಟಿಂಗ್, ವೇಯ್ಟ್ ಲಿಫ್ಟಿಂಗ್ ನಂತಹ ಗಟ್ಟಿಗರ ಕ್ಷೇತ್ರ. ಯಾವುದೂ ತನಗೆ ಸಾಧ್ಯವಾದುದ್ದಲ್ಲ ಎಂಬುದನ್ನು ತಮ್ಮ ಮೊದಲ ಪ್ರಯತ್ನದಲ್ಲಿಯೇ ತೋರಿಸಿಕೊಟ್ಟ ಇವರ ಹೆಗ್ಗಳಿಕೆ, ಮೊದಲ ಬಾರಿಗೆ ಇವರು ಶ್ರೀ ಶಾರದಾ ಕಾಲೇಜು ಬಸ್ರೂರಿನಲ್ಲಿ ನಡೆದ ವಿಶ್ವವಿದ್ಯಾಲಯ ಮಟ್ಟದ 74 ಕೆ.ಜಿ. ಒಳಗಿನ ಕುಸ್ತಿ ಛಾಂಪಿಯನ್ ಶಿಪ್ನಲ್ಲಿ ತೃತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡರು. ಬಳಿಕ ಮಂಗಳೂರು ಗೋವಿಂದ ದಾಸ್ ಕಾಲೇಜಿನಲ್ಲಿ ನಡೆದ ವಿಶ್ವವಿದ್ಯಾನಿಲಯ ಮಟ್ಟದ 75 ಕೆ. ಜಿ ಒಳಗಿನವರ ಪವರ್ ಲಿಫ್ಟಿಂಗ್ ಛಾಂಪಿಯನ್ ಶಿಪ್ನಲ್ಲಿ ದ್ವಿತೀಯ ಸ್ಥಾನ ಪಡೆದರು. ಬಳಿಕ ಇಂಡಿಯನ್ ಪವರ್ ಲಿಫ್ಟಿಂಗ್ ಫೆಡರೇಶನ್ ಇಂಟರ್ ನ್ಯಾಶನಲ್, ಏಷ್ಯನ್ ಪವರ್ ಲಿಫ್ಟಿಂಗ್ ಪೆಡರೇಶನ್ ಹಾಗೂ ಇಂಡಿಯನ್ ಒಲಂಪಿಕ್ಸ್ ಅಸೋಸಿಯೇಶನ್ ಸಯುಂಕ್ತಾಶ್ರಯದಲ್ಲಿ ಸೇಲಂನಲ್ಲಿ ಆಯೋಜಿಸಲಾಗಿದ್ದ ಪವರ್ ಲಿಫ್ಟಿಂಗ್ ಛಾಂಪಿಯನ್ಶಿಪ್ ಜೂನಿಯರ್ ವಿಭಾಗದಲ್ಲಿ ತೃತೀಯ ಸ್ಥಾನವನ್ನೂ, ಅಜ್ಜರಕಾಡು ಮಹಿಳಾ ಕಾಲೇಜಿನಲ್ಲಿ ನಡೆದ ವಿಶ್ವವಿದ್ಯಾನಿಲಯ ಮಟ್ಟದ ದೇಹದಾಡ್ಯ ಸ್ಪಧರ್ೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದ ಇವರು ಅಲ್ಲಿಯೇ ಜರುಗಿದ ಛಾಂಪಿಯನ್ಶಿಪ್ನ ಡೆಡ್ಲಿಫ್ಟ್ ವಿಭಾಗದಲ್ಲಿ 240 ಕೆ.ಜಿ ಭಾರವನ್ನು ಎತ್ತುವ ಮೂಲಕ ವಿಶ್ವವಿದ್ಯಾನಿಲಯ ಮಟ್ಟದಲ್ರ್ಲೆಂದು ದಾಖಲೆಯನ್ನು ಸೃಷ್ಟಿಸಿದರು.
ಇತರ ಕ್ರೀಡೆಗಳಲ್ಲೂ ಪರಿಣತಿಯನ್ನು ಹೊಂದಿದ್ದ ಇವರು ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಗೆ ಆಯೋಜಿಸಿದ್ದ ದಸರಾ ಕ್ರೀಡಾಕೂಟದಲ್ಲಿ ಗುಂಡೆಸೆತದಲ್ಲಿ ದ್ವಿತೀಯ ಸ್ಥಾನವನ್ನು ಭಂಡಾರ್ಕಾರ್ಸ್ ಕಾಲೇಜು ವಾಷರ್ಿಕೋತ್ಸವದ ಅಂಗವಾಗಿ ಆಯೋಜಿಸುತ್ತಿದ್ದ ಕ್ರೀಡಾಕೂಟದ ರೀಲೆ, ಹ್ಯಾಮರ್ ತ್ರೋ, ಲಾಂಗ್ಜಂಪ್, ಶಾಟರ್್ಪುಟ್, ಬಾಡಿಬಿಲ್ಡಿಂಗ್ ಮುಂತಾದವುಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನವನ್ನು ಪಡೆದುದಲ್ಲದೆ ಇತ್ತೀಚಿಗೆ ಬಂಟ್ವಾಳದಲ್ಲಿ ನೆತಾಜಿ ಯುವಕ ಮಂಡಲ ಆಯೋಜಿಸಿದ್ದ ಪವರ್ ಲಿಫ್ಟಿಂಗ್ ಛಾಂಪಿಯನ್ಶಿಪ್ನಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಯುವ ಪ್ರತಿಭೆಯ ಸಾಧನೆಯನ್ನು ಮೆಚ್ಚಿ ಬಾಕರ್ೂರಿನ ಸೋಮಕ್ಷತ್ರೀಯ ಸಂಘ, ಬಾಳೆಕೆರೆಯ ನಾಗರೀಕರು, ಗಂಗೊಳ್ಳಿ ಪಂಚಾಗಂಗಾವಳಿ ಬಳಗ, ಅಂಕದಕಟ್ಟೆ ಶ್ರೀ ರಾಮ ಸ್ಫೋಟರ್್ಸ ಕ್ಲಬ್, ಗಂಗೊಳ್ಳಿಯ ಶ್ರೀ ಗುರುರಾಘವೇಂದ್ರ ಸ್ಫೋಟರ್್ಸಕ್ಲಬ್, ತಾಲೂಕು ಪಂಚಾಯತ್ ಸಮಾಜ ಕಲ್ಯಾಣ ಇಲಾಖೆ, ಭಂಡಾರ್ಕಾರ್ಸ್ ಹಳೆ ವಿದ್ಯಾಥರ್ಿ ಸಂಘ, ಜೆ.ಸಿ. ಕುಂದಾಪುರ ಮುಂತಾದ ಸಂಘ-ಸಂಸ್ಥೆಗಳು ಗುರುತಿಸಿ ಸನ್ಮಾನಿಸಿವೆ.
ಬಾಳೆಕೆರೆಯ ಭಾಸ್ಕರ್ ಗಾಣಿಗ ಮತ್ತು ಪದ್ಮಾವತಿ ದಂಪತಿಗಳ ಪುತ್ರರಾದ ವಿಶ್ವನಾಥ, ಹಕರ್ೂ್ಯಲಸ್ ಜಿಮ್ನಿಶಿಯಂ ಪ್ರಶಾಂತ ಶೇರಿಗಾರ್ ಇವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಳ್ಳಬೇಕೆಂಬ ಆಕಾಂಕ್ಷೆ ಹೊಂದಿರುವ ಇವರು, ಸಾಂಸ್ಕ್ರತಿಕ ರಂಗದಲ್ಲೂ ಸೈ ಏನಿಸಿಕೊಂಡವರು. ಬಾಳೆಕೆರೆ, ಕಕರ್ುಂಜೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು, . ಪೂ. ಕಾಲೇಜು ವಂಡ್ಸೆಯಲ್ಲಿ ಪಿ.ಯು ಶಿಕ್ಷಣವನ್ನು ಪಡೆದ ಇವರು ಕಳೆದ ಶೈಕ್ಷಣಿಕ ವರ್ಷದಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬಿ.ಸಿ. ಪದವಿಯನ್ನು ಮುಗಿಸಿ ಇದೀಗ ಉನ್ನತ ವ್ಯಾಸಂಗದ ಹಂಬಲದಲ್ಲಿದ್ದಾರೆ.

ಕ್ರೀಡಾಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ ರಾಷ್ಟ್ರ ಮಟ್ಟದಲ್ಲೂ ಗುರುತಿಸಿಕೊಂಡಿರುವ ಯುವ ಪ್ರತಿಭೆಗೆ ಮತ್ತಷ್ಟು ಪ್ರೋತ್ಸಾಹ, ಅವಕಾಶಗಳು ದೊರೆಯುವಂತಾಗಲಿ. ಇವರ ಭವಿಷ್ಯದ ಕನಸುಗಳು ನನಸಾಗಲಿ ಎಂದು ಹಾರೈಸುವ.




Report by- Sunil H G Byndoor