ಪತ್ರಿಕೆ ಪುರಾಣ

ಪತ್ರಿಕೆ ಪುರಾಣ


ನುಷ್ಯ ಏನನ್ನಾದರೂ ಹೇಳಬೇಕೆನಿಸಿದಾಗ..? ಮಾತಾಡ್ತಾನೆ! ಅದರಲ್ಲೇನಿದೆ ಅಂತಿರಾ? ಮಾತಾಡ್ತಾನಾದ್ರೂ ಮಾತನಾಡುವ ಪರಿ ಬದಲಾಗಿದೆ. ಸಮಾಜದೊಳಗೆ ಬೇರೆಯುವುದಕ್ಕಿಂತ ಹೆಚ್ಚಾಗಿ ಸಾಮಾಜಿಕ ತಾಣದೊಳಗೆ ಹೊಕ್ಕಿ ಕುರುತ್ತಾನೆ. ಫೆಸ್ಬುಕ್ ಒಳಹೊಕ್ಕು ಸ್ಟೇಟಸ್ ಅಪ್ಡೆಟ್ ಮಾಡ್ತಾನೆ ಇಲ್ಲಾ, ಟ್ವಿಟ್ ಹಕ್ಕಿನ ತೇಲಿಬಿಡ್ತಾನೆ. ಹೌದು ಈ ಜಮಾನ ಬದಲಾಗಿದೆ. ಬದುಕುವ ಪರಿಯು ಬದಲಾಗಿದೆ. ಸಂಕುಚಿತ ಪ್ರಪಂಚವನ್ನು ಸಂದಶರ್ಿಸ ಹೋರಟ ನಾವುಗಳು ತಿಳಿದೋ, ತಿಳಿಯದೆಯೊ ಯಾಂತ್ರಿಕತೆಯ ಸೆರೆಯೊಳಕ್ಕೆ ಸಿಲುಕಿದ್ದಾನೆ. ಮನದ ಭಾವನೆಗಳಿಗೂ ತಂತ್ರಜ್ನಾನದ ಗಾಳಿ ಸೋಕಿದ್ದೇನು ಹೊಸ ವಿಚಾರವೇನಲ್ಲ. ಅನಿವಾರ್ಯವೊ ಎಂಬಂತೆ ಬದಲಾವಣೆಗಳೊಂದಿಗೆ ಹೊಂದಿಕೊಳ್ಳುತ್ತಿದ್ದೇವೆ ಅನ್ನೊದಂತೂ ವಾಸ್ತವ.
ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳಲು ಅಂತರಜಾಲ ಲೋಕದಲ್ಲಿ ಸೇರಿಕೊಳ್ಳಬೇಕೆಂದು ಯೋಚಿಸಿದ್ದು ವರ್ಷದ ಹಿಂದೆ ಯೋಜಿಸಿ ಬ್ಲಾಗ್ ಮೂಲಕ ಇ-ಪತ್ರಿಕೆಯ ರೂಪ ನೀಡಿದ್ದು ಮಾತ್ರ ಇತ್ತೀಚೆಗೆ. ಬೆಂಬಿಡದ ಸೆಮಿಸ್ಟರ್ ಪದ್ದತಿ, ಅಗೋಚರ ಒತ್ತಡ, ವೈಯಕ್ತಿಕ ತೊಡಕುಗಳಿಂದಾಗಿ ಬಿಂಬ ಸಜ್ಜುಗೊಳ್ಳಲು ಕೆಲವು ದಿನ ಹಿಡಿದವು.

ನಾ ಬಿಟ್ಟೆನೆಂದರೂ ನನ್ನನ್ನು ಬಿಡದ ಹತ್ತಾರು ಅಡ್ಡಿ-ಆತಂಕಗಳನ್ನು ಮೀರಿ ಸಿದ್ಧಗೊಂಡ ಕುಂದಾಪ್ರ .ಕಾಮ್ ಈಗ ನಿಮ್ಮ ಮುಂದಿದೆ. ಇಲ್ಲಿ ಬಿತ್ತರಗೊಂಡವುಗಳೆಲ್ಲ ತಮಗೆ ಅರ್ಥವಾಗಬಹುದು ಎಂದು ಅಂದುಕೊಂಡಿದ್ದೇನೆ.