ಹೆಮ್ಮಾಡಿಯಲ್ಲಿ ಅಂಬೇಡ್ಕರ್ ಜನ್ಮದಿನಾಚರಣೆ ಸಂಭ್ರಮ ಉದ್ಘಾಟನೆ

ಅಂಬೇಡ್ಕರ್ ಅವರ ತತ್ವಾದರ್ಶಗಳು ಸಾರ್ವಕಾಲಿಕ ಮೌಲ್ಯವನ್ನು ಹೊಂದಿವೆ. ಆಥರ್ಿಕವಾಗಿ ತುಳಿತಕ್ಕೊಳಗಾದವರಿಗೆ ಮೀಸಲಾತಿಯ ಮೂಲಕ ಸಾಮಾಜಿಕ ಸಮಾನತೆಯನ್ನು ತಂದುಕೊಡುವಲ್ಲಿ ಅಂಬೇಡ್ಕರ್ ಅವರು ವಹಿಸಿದ ಪಾತ್ರ ಅತ್ಯಂತ ಮುಖ್ಯವಾದುದು ಎಂದು ಜಿಲ್ಲಾ ಪಂಚಾಯತ್ ಸದಸ್ಯ ಅನಂತ ಮೊವಾಡಿ ಅವರು ಹೇಳಿದರು. ಕಟ್ಬೇಲ್ತೂರು ಡಾ. ಬಿ. ಆರ್. ಅಂಬೇಡ್ಕರ್ ಸೇವಾ ಯುವಕ ಮಂಡಲ ಮತ್ತು ಮುಳ್ಳುಕುಂಟ್ ಶ್ರೀ ಶಿವಶಕ್ತಿ ಭಜನಾ ಮಂದಿರ ಆಶ್ರಯದಲ್ಲಿ ಇಲ್ಲಿನ ಭಜನಾ ಮಂದಿರದಲ್ಲಿ ಶನಿವಾರ ಜರುಗಿದ ಡಾ. ಅಂಬೇಡ್ಕರ್ ಅವರ 121ನೇ ಜನ್ಮದಿನಾಚರಣೆ ಸಂಭ್ರಮವನ್ನು ಉದ್ಘಾಟಿಸಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಬಳಿಕ ಮಾತನಾಡಿದರು. ಯುವಕ ಮಂಡಲದ ಗೌರವಾಧ್ಯಕ್ಷ ಚಂದ್ರ ಹುಲಿಕೆರೆ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಉಪ್ಪುಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಮುಡೂರ ಅಂಬಾಗಿಲು, ಬಡಾಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಮಹಾಬಲ ಕೆ. ಕಿರಿಮಂಜೇಶ್ವರ, ಗಂಗೊಳ್ಳಿಯ ಇಂದುಧರ ದೇವಸ್ಥಾನದ ಮೊಕ್ತೇಸರ ಈಶ್ವರ ಜಿ. ಗಂಗೊಳ್ಳಿ, ಕುಂದಾಪುರದ ಸಮನ್ವಯ ಸಹಕಾರಿ ಸಂಘದ ಆಧ್ಯಕ್ಷ ಕೆ. ಗೋಪಾಲಕೃಷ್ಣ ನಾಡಾ, ದೂರದರ್ಶನ ಕಲಾವಿದ ಎನ್. ಗಣೇಶ್ಕುಮಾರ್ ಗಂಗೊಳ್ಳಿ, ಭಜನಾ ಮಂದಿರದ ಅಧ್ಯಕ್ಷ ನಾಗರಾಜ ಶೇಡಿಕಟ್ಟೆ, ಕೆ. ನರಸಿಂಹ ನಾಡಾ, ಯುವ ಬರಹಗಾರ ಸುನಿಲ್ ಎಚ್. ಜಿ. ಮೊದಲಾದವರು ಉಪಸ್ಥಿತರಿದ್ದರು. ಯುವಕ ಮಂಡಲದ ಅಧ್ಯಕ್ಷ, ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಮಕ್ಕಳಿಗಾಗಿ ನಡೆಸಲಾದ ರಸಪ್ರಶ್ನೆ ಸ್ಫಧರ್ಾ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು. ಯುವಕ ಮಂಡಲದ ಕಾರ್ಯದಶರ್ಿ ರಮೇಶ್ ಪಿ. ತುಂಡಕಿರು ವಂದಿಸಿದರು.