ಪ್ರಸಿದ್ಧಿಯನ್ನು ಪಡೆಯುವ ಬರದಲ್ಲಿ ನೈತಿಕತೆ ಮರೆಯದಿರಿ: ಓಂ ಗಣೇಶ್


ಮನುಷ್ಯ ತನ್ನ ಬದುಕಿನಲ್ಲಿ ವೃದ್ಧಿ, ಅಭಿವೃದ್ಧಿ, ಸಮೃದ್ಧಿ ಈ ಮೂರು ಪದಗಳ ಅರ್ಥವನ್ನು ಚೆನ್ನಾಗಿ ತಿಳಿದು ಮುಂದುವರಿಯಬೇಕು. ಪ್ರಸಿದ್ಧಿಯನ್ನು ಪಡೆಯುವ ಬರದಲ್ಲಿ ನೈತಿಕತೆಯನ್ನು ಮರೆತು ಗಳಿಸುವ, ಬೆಳೆಯುವ ಕೆಲಸಕ್ಕೆ ಮುಂದಾಗಬಾರದು. ಆಗ ಮಾತ್ರ ಆತ ಸಮಾಜದಲ್ಲಿ ಒಬ್ಬ ಉತ್ತಮ ವ್ಯಕ್ತಿಯಾಗಿ ಹೊರ ಹೊಮ್ಮಲು ಸಾಧ್ಯ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಜಾದೂಗಾರ ಓಂ ಗಣೇಶ್ ಉಪ್ಪುಂದ ಹೇಳಿದರು.

ಭಂಡಾರ್ಕಾರ್ಸ್ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ಕುಂದಾಪ್ರ ಡಾಟ್ ಕಾಮ್ ವೆಬ್ಸೈಟ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ಕುಂದಾಪುರ ಒಂದು ಪ್ರದೇಶ ಮಾತ್ರವಲ್ಲ. ಅದೊಂದು ಜನಸಂಸ್ಕೃತಿ. ವೆಬ್ಸೈಟ್ನಲ್ಲಿ ಇಲ್ಲಿನ ಸಾಂಸ್ಕೃತಿಕ ಚಹರೆಯನ್ನು ಹಾಗೆಯೇ ಉಳಿಸಿಕೊಂಡು ವಿಶ್ವವ್ಯಾಪಿ ತಲುಪಲು ಅಗತ್ಯವಾದ ಭಾಷೆಯನ್ನು ರೂಡಿಸಿಕೊಂಡು ಮನ್ನಡೆಯುವುದು ಅಗತ್ಯ ಎಂದರು.
ಅಕಾಡೆಮಿ ಆಫ್ ಜನರಲ್ ಎಜುಕೇಶನ್ನ ಆಡಳಿತಾಧಿಕಾರಿ ಡಾ. ಹೆಚ್ ಶಾಂತರಾಮ್ ವೆಬ್ಸೈಟ್ ಬಿಡುಗಡೆಗೊಳಿಸಿ ಶುಭಹಾರೈಸಿದರು. ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಚಂದ್ರಶೇಖರ ದೋಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಪೂವರ್ಾಧ್ಯಕ್ಷರಾದ ಎ.ಎಸ್.ಎನ್ ಹೆಬ್ಬಾರ್ ಅತಿಥಿಯಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರವಿನಾಕುಮಾರಿ ನಿರೂಪಿಸಿದರು. ವೆಬ್ಸೈಟ್ ರೂಪಿಸಿದ ಸುನಿಲ್ ಹೆಚ್. ಜಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಜ್ವಲಾ ಸ್ವಾಗತಿಸಿ, ಚೈತ್ರ ಚಂದನ್ ಧನ್ಯವಾದಗೈದರು.