ಮುಂಗಾರು ಆರಂಭ: ರೈತನ ಮೊಗದಲ್ಲಿ ಸಂತಸದ ಕಳೆ

ಕುಂದಾಪುರ: ಕಳೆದ ಕೆಲ ದಿನದಿಂದ ತಾಲೂಕಿನಾದ್ಯಂತ ಮಳೆಯ ಸಿಂಚನವಾಗುತ್ತಿದ್ದು, ಕ್ರಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ರೈತ ಅಣಿಯಾಗುವ ದ್ರಶ್ಯ ಎಲ್ಲೆಡೆ ಕಂಡು ಬರುತ್ತಿದೆ.ಸದ್ಯ ಬೀಜ ಬಿತ್ತನೆಯ ಕಾರ್ಯದಲ್ಲಿ ರೈತ ತೊಡಗಿಸಿಕೊಳ್ಳುತ್ತಿದ್ದು, ಮಳೆಯ ಸಿಂಚನದ ಹಷರ್ೊಲ್ಲಾಸದಲ್ಲಿ ರೈತ ಸಂಭ್ರಮಿಸುತ್ತಿದ್ದಾನೆ. ಹಲವೆಡೆ ಬೀಜ ಮೊಳಕೆಯೊಡೆದು ಬತ್ತದ ಸಸಿಗಳು ಬೆಳೆದು ನಾಟಿ ಕಾರ್ಯಕ್ಕೆ ಸಿದ್ದವಾಗಿ ನಿಂತಿವೆ.ನಾಟಿ ಕಾರ್ಯದಲ್ಲಿ ಮಹಿಳೆಯರು ಹರ್ಷದಿಂದ ತೊಡಗಿಕೊಳ್ಳುತ್ತಿರುವುದು ಕಂಡುಬರುತ್ತಿದೆ.
ಪುರಾತನ ನೇಗಿಲು ಉಳುಮೆ : ಸದ್ಯ ಹಲವೆಡೆ ಯಾಂತ್ರಿಕ ಬೇಸಾಯ ಪದ್ದತಿಯ ಮೂಲಕ ಟಿಲ್ಲರ್,ಟ್ರ್ಯಾಕ್ಟರ್ ಮುಂತಾದ ಯಂತ್ರಗಳನ್ನು ಕೆಲವೆಡೆ ಕ್ರಷಿಗೆ ಬಳಸಿದರೆ ಇನ್ನು ತಾಲೂಕಿನ ಹಲವು ಹಳ್ಳಿಗಳಲ್ಲಿ ನೇಗಿಲು ಉಳುಮೆಯನ್ನೇ ನಡೆಸಿಕೊಂಡು ಬಂದಿರುತ್ತಾರೆ.

ಒಟ್ಟಿನಲ್ಲಿ ಈ ಬಾರಿಯ ಮುಂಗಾರು ವಿಳಂಭವಾಗಿ ಆಗಮಿಸಿದ್ದು ಕ್ರಷಿ ಚಟುವಟಿಕೆಗಳಿಗೆ ಕೋಚ ಏರುಪೇರಾಗಿದೆ.ಮುಂಬರುವ ದಿನಗಳಲ್ಲಿ ಕ್ರಷಿಗೆ ಪೂರಕವಾದ ವಾತಾವರಣ ಸ್ರಷ್ಟಿಯಾಗಿ  ರೈತನ ಶ್ರಮ ಪಲಿಸಲಿ.ಎನ್ನುವುದು ನಮ್ಮ ಆಶಯ. ನಿಮ್ಮ ಪ್ರತಿಕ್ರಿಯೆ ಬರೆಯಿರಿ
 
ಕುಂದಾಪ್ರ ಡಾಟ್ ಕಾಂ editor@kundapra.com