ವಿನಾಯಕ ಚಿತ್ರಮಂದಿರ ಹೊಸತನದೊಂದಿಗೆ ಲೋಕಾರ್ಪಣೆ


 * ಪ್ರಥಮ ದಿನವೇ ಪುನೀತ್ ಅಭಿನಯದ ಅಣ್ಣಾ ಬಾಂಡ್ ಚಿತ್ರ ವೀಕ್ಷಿಸಿ  
ಚಿತ್ರ ರಸಿಕರಂತೂ ಪುಲ್ ಖುಷ್....!
 ಕಳೆದ ನಾಲ್ಕೈದು ತಿಂಗಳುಗಳಿಂದ ಕುಂದಾಪುರ ನಗರದಲ್ಲಿ ಸಿನೆಮಾ ವಿಕ್ಷಣೆಗಾಗಿ ಯಾವುದೇ ಚಿತ್ರಮಂದಿರಗಳು ಇರಲಿಲ್ಲ.ಈ ಹಿಂದೆ ಇದ್ದ 2-3 ಸಿನೆಮಾ ಮಂದಿರಗಳನ್ನು ನಷ್ಟದ ಕಾರಣದಿಂದ ಮುಚ್ಚಲಾಯಿತು.ಇದರಿಂದ ಸಿನೆಮಾ ಪ್ರಿಯರಿಗಂತೂ ನಷ್ಟ ಮಾತ್ರವಲ್ಲದೇ ಬೇಸರದ ಸ್ಥಿತಿ ನಿಮರ್ಾಣವಾಯಿತು. ತಮ್ಮ-ತಮ್ಮ ಇಷ್ಟದ ನಾಯಕರ ಹಾಗೂ ತಮ್ಮ ನೆಚ್ಚಿನ ಸಿನೇಮಾಗಳನ್ನು ಸಿನೇಮಾ ಮಂದಿರದಲ್ಲಿ ವೀಕ್ಷಣೆ ಮಾಡುತ್ತಿದ್ದ ಚಿತ್ರ ಪ್ರೇಮಿಗಳು ಕುಂದಾಪುರದಲ್ಲೊಂದು ಉತ್ತಮ ಚಿತ್ರಮಂದಿರವಾಗಬಹುದೆಂಬ ಬಾರಿ
ನಿರಿಕ್ಷೆಯಲ್ಲಿಯೇ ಇದ್ದರು.
* ಹಲವು ದಿನಗಳ ಮೇಲೆ ಚಿತ್ರ ಮಂದಿರದೊಳಗೆ ಚಿತ್ರ ವೀಕ್ಷಿಸಿದ ಕುಂದಾಪುರ ಚಿತ್ರ ರಸಿಕರು.

ಚಿತ್ರ ರಸಿಕರ ಅಭಿರುಚಿಗೆ ತಕ್ಕಂತೆ ಈಗ ಕುಂದಾಪುರದಲ್ಲೊಂದು ನೂತನ ತಂತ್ರಜ್ಞಾನವುಳ್ಳ ಡಿಜಿಟಲ್ ಸಿನೇಮಾ ಮಂದಿರ ಜನರ ಸೇವೆಗೆ ಸಿದ್ದಗೊಂಡು ಜೂನ್ 15 ರಂದು ಅಧಿಕ್ರತವಾಗಿ ಆರಂಭಗೊಂಡಿದೆ.
ಕುಂದಾಪುರದ ಜನತೆಗೆ ಈ ಹಿಂದೆ ಸಾಮಾನ್ಯ ಚಿತ್ರಮಂದಿರ ನೋಡಿದ ಅನುಭವ ಮಾತ್ರ ಇತ್ತು.ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುವ ಮಂದಿ ಈ ರೀತಿಯ ಹೊಚ್ಚ ಹೊಸ  ಸೌಲಭ್ಯಗಳನ್ನು ನೋಡಿದ್ದರು.
ಉತ್ತಮ ತಂತ್ರಜ್ನಾನವನ್ನೋಳಗೊಂಡಿರುವ ಈ ಥೀಯೇಟರ್ನಲ್ಲಿ ಪ್ರಥಮವಾಗಿ ಶುಕ್ರವಾರ ಪವರ್ ಸ್ಟಾರ್ ಪುನೀತ್ರಾಜ್ಕುಮಾರ್ ಅಭಿನಯದ ಅಣ್ಣಾಬಾಂಡ್ ಚಿತ್ರವನ್ನು ಡಿ.ಟಿ.ಎಸ್. ಹಾಗೂ ಡಿಜಿಟಲ್ ಇಫೆಕ್ಟ್ ತಂತ್ರಜ್ಞಾನದೊಂದಿಗೆ ವಿಕ್ಷಿಸಿದ ಸಿನೇಮಾ ರಸಿಕರಂತೂ ಅಪಾರ ಸಂತಸಗೊಂಡರು.ಪ್ರಾರಂಭಿಕ ದಿನದಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ಸಿನೆಮಾ ವಿಕ್ಷೀಸಿ ವಿನಾಯಕ ಸಿನೇಮಾ ಮಂದಿರದ ಲೋಕಾರ್ಪಣೆಗೆ ಸಾಕ್ಷಿಯಾದರು.
                         * ಚಿತ್ರ ರಸಿಕರಿಂದ ಉತ್ತಮ ಪ್ರತಿಕ್ರಿಯೆ.
ಚಿತ್ರಮಂದಿರದಲ್ಲಿ ಎರಡು ವಿಭಾಗಗಳಿದ್ದು ಪ್ರಥಮ ದಜರ್ೆ ಹಾಗೂ ಬಾಲ್ಕನಿ ಎಂಬುದಾಗಿದೆ.ಎರಡರಲ್ಲೂ ಅಪಾರ  ಸಂಖ್ಯೆಯಲ್ಲಿ ಕುಳಿತು ವಿಕ್ಷಿಸಬಹುದಾದ ಉತ್ತಮ ಆಸನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಎಲ್ಲವೂ ಸಿನೇಮಾ  ಬರುವ ಜನರ ಮನಸೂರೆಗೊಳ್ಳುವಲ್ಲಿ ಎರಡು ಮಾತಿಲ್ಲ.ಪ್ರಸ್ತುತ ಚಿತ್ರಮಂದಿರದಲ್ಲಿ 3ಡಿ ತಂತ್ರಜ್ಞಾನದೊಂದಿಗೆ ನೂತನ ಯು.ಎಪ್.ಒ. ತಂತ್ರಜ್ಞಾನ ಕೂಡ ಇದ್ದೂ ಚಿತ್ರ ವೀಕ್ಷಣೆ ರೋಮಾಂಚಕ ಅನುಭವ ನೀಡುವುದರಲ್ಲಿ ಸಂಶಯವಿಲ್ಲ.


                                                                                                 ಚಿತ್ರ, ವರದಿ : ಯೋಗೀಶ್ ಕುಂಭಾಸಿ
 

  ನಿಮ್ಮ ಪ್ರತಿಕ್ರಿಯೆ ಬರೆಯಿರಿ