ನವಿಲೂರು ಪ್ರಕಾಶರಿಗೆ ಸನ್ಮಾನ.


ಕುಂದಾಪುರ: ವಿವಿಧ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜೆಸಿಐ ಕುಂದಾಪುರ ವಲಯದ ತರಭೇತುದಾರರಾಗಿ ಹಾಗೂ ಬಿದ್ಕಲ್ ಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ನಂಜನಗೂಡು ಸರಕಾರಿ ಪದವಿ ಪೂರ್ವ ಕಾಲೇಜಿಗೆ ವರ್ಗವಾಗುತ್ತಿರುವ ನವಿಲೂರು ಪ್ರಕಾಶ ಅವರಿಗೆ ಕುಂದಾಪುರ ಸಿಟಿ ಜೆಸಿಐ, ಹಾಗೂ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರಿಂದ ಸನ್ಮಾನ ಹಾಗೂ  ಬಿಳ್ಕೊಡುಗೆ ಸನ್ಮಾನ ಸಮಾರಂಭ ದಿನಾಂಕ 24. ರಂದು ರವಿವಾರ ಕುಂದಾಪುರ ಫೇರಿ ರಸ್ತೆಯ ರೋಟರಿ ಸಭಾಭವನದಲ್ಲಿ ಜರುಗಿತು.
ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸ್ವರ ಅಪ್ಪಣ್ಣ ಹೆಗ್ಡೆ ಅವರು ಜೆಸಿ ಕುಂದಾಪುರ ವತಿಯಿಂದ ನವಿಲೂರರನ್ನು ಸನ್ಮಾನಿಸಿ ಶುಭ ಹಾರೈಸಿದರು.``ಉತ್ತಮ ಸಮಾಜಸೇವೆಯೊಂದಿಗೆ ಜನಾನುರಾಗಿಯಾಗಿ ಗುರುತಿಸಿಕೊಂಡ ನವಿಲೂರು ಪ್ರಕಾಶರವರು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವೂ ಸಕ್ರೀಯವಾಗಿ ತೊಡಗಿಸಿಕೊಂಡು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಮುಂಬರುವ ದಿನಗಳಲ್ಲಿ ತಾವೂ ಸೇವೆ ಸಲ್ಲಿಸುವ ಬೇರೆ ಪ್ರದೇಶದಲ್ಲಿಯೂ ಉತ್ತಮ ಹೆಸರು ಗಳಿಸಿ ಜನಾನುರಾಗಿಯಾಗಲಿ'' ಎಂದರು
ಕಾರ್ಯಕ್ರಮದಲ್ಲಿ ಕುಂದಾಪುರ ಸಿಟಿ ಜೆಸಿಸ್ ಅಧ್ಯಕ್ಷ ವೆಂಕಟೇಶ ಪ್ರಭು, ನಿಕಟಪೂವರ್ಾಧ್ಯಕ್ಷ ಕಾತರ್ಿಕೇಯ ಮದ್ಯಸ್ಥ, ಕೆ.ಆರ್.ನಾಯಕ್, ಐರೋಡಿ ವೈಕುಂಟ ಹೆಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು ಮತ್ತು  ಶುಭ ಹಾರೈಸಿದರು. ಕುಂದಪ್ರಭ ಪತ್ರಿಕೆ ಸಂಪಾದಕ ಯು.ಎಸ್.ಶೆಣೈ ಸ್ವಾಗತಿಸಿದರು, ರಂಜಿತ್ ಕುಮಾರ್ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು, ಆರ್.ಎನ್.ಶೆಟ್ಟಿ ಕಾಲೇಜಿನ  ಉಪನ್ಯಾಸಕಿ ಜಯಶೀಲ ಪೈ ಕಾರ್ಯಕ್ರಮ ನಿರೂಪಿಸಿ, ಕುಂದಾಪುರ ಜೇಸಿ ಕಾರ್ಯದಶರ್ಿ ಚಂದ್ರಕಾಂತ್ ವಂದಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರಂಗ ಮಿತ್ರಮಂಡಳಿ ಕುಂದಾಪುರ, ಸಂಗೀತ ಭಾರತಿ ಟ್ರಸ್ಟ್, ಕೋ.ಶಿ.ಕಾರಂತ,
ಸುದ್ದಿಮನೆ ಅಂಕಣಕಾರ ಎಚ್.ಎಸ್.ಮಲ್ಲಿ ಮೊದಲಾದವರು ಅಭಿನಂದಿಸಿ, ಶುಭ ಹಾರೈಸಿದರು.