ಕರಾವಳಿಯಲ್ಲಿ ನಡೀತಿದೆ ಭಟ್ಟರ ಹೈ ``ಡ್ರಾಮಾ''....!

                * ತುಂತುರು ಮಳೆ ಹನಿಗಳ ನಡುವೆ ಡ್ರಾಮಾ ತಂಡದ ಸ್ಟೆಪ್ಪು...

ಸಿನೆಮಾ ಕ್ಷೇತ್ರದಲ್ಲಿ ಏನಾದರೂ ಹೊಸತನವನ್ನು ಮಾಡುತ್ತಲೇ ಹೆಸರುವಾಸಿಯಾಗಿರುವ ಕರಾವಳಿ ಪ್ರದೇಶದ, ಮುಂಗಾರು ಮಳೆ ಖ್ಯಾತಿಯ ಯೋಗರಾಜ್ ಭಟ್ರ ಹೊಸ ಸಿನೆಮಾ `ಡ್ರಾಮಾ' ಇನ್ನೇನು ಸೆಟ್ ಏರುವ
ಹಂತದಲ್ಲಿದ್ದು, ಅಂತಿಮ ಹಂತದ ಚಿತ್ರೀಕರಣವಿದೀಗ ಕುಂದಾಪುರದ ಕಡಲ ತೀರದ ಹಲವು ಭಾಗಗಳಲ್ಲಿ ನಡೆಯುತ್ತಿದೆ.ಚಿತ್ರದ ಶೀಷರ್ಿಕೆ ಗೀತೆಯ ಚಿತ್ರೀಕರಣ ಬೀಜಾಡಿಯ ಸನ್ ಪೀಸ್ಟ್ ರೆಸಾಟರ್್ ಸಮೀಪದ ಕಡಲ
ಕಿನಾರೆಯಲ್ಲಿ ನಡೆಯುತ್ತಿದೆ.ಇದಕ್ಕಾಗಿ ಸಂಪೂರ್ಣ ಚಿತ್ರತಂಡ ವಾರಗಳ ಕಾಲ ಇಲ್ಲಿ ಬೀಡುಬಿಟ್ಟಿದ್ದು ಚಿತ್ರದ ಕ್ಲೈಮ್ಯಾಕ್ಸ್ ಹಂತದ ಸಾಹಸ ದ್ರಶ್ಯಗಳನ್ನು ಈ ಭಾಗದಲ್ಲಿ  ಚಿತ್ರೀಕರಿಸಲಿದೆ.ಕುಂದಾಪುರ ,ಮರವಂತೆ ಪ್ರದೇಶಗಳಲ್ಲೂ ಸಿನೇಮಾದ ಚಿತ್ರೀಕರಣ ನಡೆಯಲಿದೆ.

* ಚಿತ್ರ: `ಡ್ರಾಮಾ'

   * ಚಿತ್ರದ ನಾಯಕ ಯಶ್.
                          * ಇನ್ನೋರ್ವ ನಾಯಕ ನೀನಾಸಂ ಸತೀಶ್
        * ನಾಯಕಿ ರಾಧಿಕಾ ಪಂಡಿತ್
                              * ಇನ್ನೋರ್ವ ನಾಯಕಿ ಸಿಂಧು ಲೋಕನಾಥ್.
                              * ನಿದರ್ೇಶಕ ಯೋಗರಾಜ್ ಭಟ್ಟ್ ಹಾಗೂ 
           ಚಿನ್ನು ಪ್ರಕಾಶ್ ಮಾಸ್ಟರ್ 
                            * ಹಾಡಿನ ಚಿತ್ರೀಕರಣ ನಡೆಯುತ್ತಿರುವುದು



ಚಿತ್ರೀಕರಣಕ್ಕೆ ಪೂರ್ವಭಾವಿಯಾಗಿ ನಿದರ್ೇಶಕ ಯೋಗರಾಜ್ ಭಟ್ಟರು ಕಳೆದ ಕೆಲ ದಿನಗಳ ಹಿಂದೆ  ಕರಾವಳಿ ಭಾಗಕ್ಕೆ ಆಗಮಿಸಿ ಸ್ಥಳೀಯ ಸುಂದರ ಪ್ರದೇಶಗಳಿಗೆ ಭೇಟಿ ನೀಡಿ ಸ್ತಳ ಪರಿಶೀಲಿಸಿದ್ದರು.

ಇಬ್ಬರು ನಾಯಕರಿಗೆ ಇಬ್ಬರು ನಾಯಕಿಯರು: ಚಿತ್ರದಲ್ಲಿ ಇರ್ವರು ನಾಯಕರು ಮತ್ತು ಅವರಿಗೆ ಇರ್ವರು ನಾಯಕರಿಯರಿದ್ದು ಚಿತ್ರದ ನಾಯಕ ರಾಕಿಂಗ್ ಸ್ಟಾರ್ ಯಶ್ ವೆಂಕಟೇಶ್ ಎನ್ನುವ ಮಂಡ್ಯದ ತರ್ಲೆ ಹುಡುಗನ ಪಾತ್ರ ಮಾಡಿದ್ದು,ಈ ಮಾತಿನ ಮಲ್ಲನಿಗೆ ತಕ್ಕದಾದ  ನಾಯಕಿಯಾಗಿ ರಾಧಿಕಾ ಪಂಡಿತ್ ಅಭಿನಯಿಸುತ್ತಿದ್ದಾರೆ.ಈಕೆ ಸಿಕ್ಕಾಪಟ್ಟೆ ಮೋಜಿನ ಹುಡುಗಿ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.ಚಿತ್ರದ ಇನ್ನೊಂದು ಜೋಡಿ
ನೀನಾಸಂ ಸತೀಶ್ ಮತ್ತು ಸಿಂಧು ಲೋಕನಾಥ್ ಇವರುಗಳು. ಚಿತ್ರದಲ್ಲಿ ಸತೀಶ್ ಮಾತಿನ ಮಲ್ಲನಾದರೆ ಸಿಂಧು ಮೂಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

``ಡ್ರಾಮಾ ತನಿನನನ... ಓತ್ಲಾ ಹಿತವಚನ''.... : ಬೀಜಾಡಿ ಕಡಲ ತೀರದಲ್ಲಿ ದಿನಾಂಕ 26.ರಿಂದ ಚಿತ್ರದ ಶೀಷರ್ಿಕೆ ಗೀತೆಗೆ ನಾಯಕ ನಾಯಕಿಯರು ಹೆಜ್ಜೆ ಹಾಕುತ್ತಿದ್ದಾರೆ...ಡ್ರಾಮಾ ತನಿನನನ.....ಓತ್ಲಾ ಹಿತವಚನ.....
ಎನ್ನುವ ಶಿಷರ್ೀಕೆ ಗೀತೆಗೆ ಬೆಲೂನು ಕಟ್ಟಿದ ಸೈಕಲ್ ಹಾಗೂ ಬಣ್ಣಬಣ್ಣದ ಕೊಡೆಗಳನ್ನು ಹಿಡಿದು ಹಾಡಿನ ಮೇಕಿಂಗ್ನಲ್ಲಿ ನಾಯಕರು ಮತ್ತು ನಾಯಕಿಯರು ಬ್ಯುಸಿಯಾಗಿದ್ದಾರೆ .



ಅದ್ದೂರಿ ಸಹ ಕಲಾವಿದರ  ತಂಡ: ಚಿತ್ರ ಸಂಪೂರ್ಣ ಮನೋರಂಜನೆಗೆ ಒತ್ತು ನೀಡಿದ್ದರೂ ಕೂಡ ಸಾಹಸ ದ್ರಶ್ಯಗಳಿಗೇನೂ ಕಮ್ಮಿ ಇಲ್ಲ. ಲೋಹಿತಾಶ್ವ ಮತ್ತು ಧೀರ ರಾಕ್ಲೈನ್ ವೆಂಕಟೇಶ್ ಖಳನಾಯಕರಾಗಿ ನಟಿಸುತ್ತಿದ್ದಾರೆ.ಚಿತ್ರ ಮನೋರಂಜನೆಗೆ ಒತ್ತು ನೀಡುವ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತದೆ, ಪ್ರಾಯದ ವಯಸ್ಸಿನ ಯುವಕ-ಯುವತಿಯರಮನೋಭಾವನೆಯನ್ನು, ವ್ಯಕ್ತಿತ್ವವನ್ನು ಚಿತ್ರ ಬಿಂಬಿಸುತ್ತದೆ.

ಚಿತ್ರ ನಿಮರ್ಾಣದ ಜವಬ್ದಾರಿಯನ್ನು ಜಯಣ್ಣ, ಕೋರಿಯೋಗ್ರಾಫರ್ ಜವಬ್ದಾರಿಯನ್ನು ಚಿನ್ನು ಪ್ರಕಾಶ್ ಮಾಸ್ಟರ್, ಛಾಯಾಗ್ರಹಣವನ್ನು ಕ್ರಷ್ಣ ನಿರ್ವಹಿಸುತ್ತಿದ್ದು ಚಿತ್ರಕ್ಕೆ ಹರಿಕ್ರಷ್ಣರವರ ಸಂಗೀತವಿದೆ.
ಈಗಾಗಲೇ ಮೈಸೂರು ಭಾಗದಲ್ಲಿ ಚಿತ್ರೀಕರಣ ಮುಗಿದಿದ್ದು ಕರಾವಳಿ ಭಾಗದಲ್ಲಿ ಕ್ಲೈಮಾಕ್ಸ್ ಚಿತ್ರೀಕರಣದ ನಂತರ ರೀ ರೆಕಾಡರ್ೀಂಗ್ ಹಾಗೂ ತಾಂತ್ರಿಕ ಕೆಲಸಗಳ ನಂತರ ಅಂದರೆ ಆಗಸ್ಟ್ ನ ಮೊದಲನೇ ವಾರದಲ್ಲಿ ಸಿನೇಮಾ ಪ್ರೇಕ್ಷಕರ ಮುಂದೆ ಬರುವ ನಿರೀಕ್ಷೆ ಚಿತ್ರತಂಡದ್ದು.

ಒಟ್ಟಾರೆ ಸಿನೀಮಾ ರಸಿಕರಿಗೆ ಸದಾ ಹೊಸತನವನ್ನು ಉಣಬಡಿಸುತ್ತಾ, ಉತ್ತಮ ಚಿತ್ರಗಳನ್ನು ನೀಡುತ್ತಾ ಬಂದಿರುವ ನಿದರ್ೇಶಕ ಯೋಗರಾಜ್ ಭಟ್ಟರ `ಡ್ರಾಮಾ' ಪ್ರೇಕ್ಷಕರನ್ನು ಎಷ್ಟರಮಟ್ಟಿಗೆ ರಂಜಿಸುವಲ್ಲಿ ಯಶಸ್ವಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
...........             ............             ................         ................            .................

* ಚಿತ್ರದಲ್ಲಿ ತಲೆಹರಟೆ ತರ್ಲೆ ಹುಡುಗನ ಪಾತ್ರ




     ನಿರ್ವಹಿಸುತ್ತಿದ್ದು ಮಂಡ್ಯದ ಎದೆಗಾರಿಕೆಯ
    ಹುಡುಗ ವೆಂಕಟೇಶ್ ಎನ್ನುವ ಪಾತ್ರ ನನ್ನದು,
   ಚಿತ್ರದುದ್ದಕ್ಕೂ ಹಾಸ್ಯ ಪ್ರೇಕ್ಷಕರನ್ನು ರಂಜಿಸುತ್ತದೆ.
- ರಾಕಿಂಗ್ ಸ್ಟಾರ್ ಯಶ್(ಇನ್ನೋರ್ವ ನಾಯಕ)





* ಕರಾವಳಿ ಭಾಗ ನನ್ಗೆ ಹೊಸತಲ್ಲದಿದ್ದರೂ ಕೂಡ
 ಇಲ್ಲಿ  ಚಿತ್ರೀಕರಣ ನಡೆಯುತ್ತಿರುವುದು ನನ್ಗೆ ಸಂತಸ 
ನೀಡಿದೆ...ಪ್ರಸ್ತುತ ಚಿತ್ರದಲ್ಲಿ ಮಾತಿನ ಮಲ್ಲಿಯಾಗಿ ವಿಭಿನ್ನ 
ಪಾತ್ರ ಮಾಡುತ್ತಿದ್ದೇನೆ ಸಂಪೂರ್ಣ ಕಥೆ ವಿಭಿನ್ನವಾಗಿದೆ.
   - ರಾಧಿಕಾ ಪಂಡಿತ್ (ಚಿತ್ರದ ನಟಿ)










* ಸುಮಾರು 15 ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಹ ನಟನಾಗಿ, 
ಹಾಸ್ಯ ನಟನಾಗಿ ಕಾಣಿಸಿಕೊಂಡಿದ್ದು ಮೊದಲ ಬಾರಿಗೆ 
ನಾಯಕ ನಟನಾಗಿ ಪಾತ್ರ ಮಾಡುತ್ತಿದ್ದೇನೆ.
- ನೀನಾಸಂ ಸತೀಶ್.(ಇನ್ನೋರ್ವ ನಾಯಕ)















*ಚಿತ್ರದಲ್ಲಿ ಮೂಕಿ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ, 
ಚಿತ್ರದಲ್ಲಿ ಮನೋರಂಜನೆ ಅಧಿಕವಾಗಿದೆ.ತುಂಭಾ 
ಸಂತಸವಾಯ್ತು.
- ಸಿಂಧು ಲೋಕನಾಥ್(ಇನ್ನೋರ್ವ ನಟಿ)



    

ವರದಿ : ಯೋಗೀಶ್ ಕುಂಭಾಸಿ



 ಕುಂದಾಪ್ರ.ಕಾಂ> editor@kundapra.com