ದೇಶಕ್ಕಾಗಿ ಜೀವ ತೆತ್ತ ವೀರರೇ ನಿಮಗಿದೋ ಸಲಾಂ

           ಇಂದು ಕಾರ್ಗಿಲ್‌ ಯುದ್ಧ ಗೆದ್ಧ 15ನೇ ವರ್ಷಾಚರಣೆ. 'ಕಾರ್ಗಿಲ್‌ ವಿಜಯ್‌ ದಿವಸ್‌'... 1999 ರಲ್ಲಿ ಭಾರತ-ಪಾಕಿಸ್ತಾನಗಳ ನಡುವೆ ನಡೆದ ಕಾಳಗದಲ್ಲಿ ಮಡಿದವರನ್ನು ನೆನೆಸಿಕೊಳ್ಳುವ ದಿನವಿದು. ಯುದ್ಧದ ದಿನಗಳನ್ನು ಒಮ್ಮೆ ನೆನಪಿಸಿಕೊಂಡರೆ ಆ ಸಮಯಕ್ಕೆ ನಮ್ಮ ಮೈಯಲ್ಲಿ ಅದೆಂಥಾ ಉತ್ಕರ್ಷ ಭೋರ್ಗರೆದಿತ್ತು ಎಂಬುದು ನೆನಪಿಗೆ ಬರುತ್ತದೆ. ಅಂದು ನಡೆದದ್ದು ಬರಿಯ ಯುದ್ಧವೇ ಆಗಿರದೆ ಭಾರತೀಯರ ಕೆಚ್ಚನ್ನು, ನಮ್ಮ ಸೈನಿಕರ ಶೌರ್ಯ, ಸಾಹಸವನ್ನು ವಿಶ್ವಕ್ಕೆ ತಿಳಿಯಪಡಿಸಿದ ಅಸಮಾನ್ಯ ಘಟನೆಯಾಗಿತ್ತು. 
          ಹಿಮಾಲಯದ ತಪ್ಪಲಿನಲ್ಲಿ ಸುಮಾರು -15 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸುಮಾರು 60 ದಿನಗಳ ನಡೆದ ಕಾರ್ಗಿಲ್ ಯುದ್ಧ ಜುಲೈ 26, 1999ರಂದು ಕೊನೆಗೊಂಡಿತ್ತು. ಆಪರೇಷನ್ ವಿಜಯ್ ಹೆಸರಿನ ಭಾರತೀಯ ಸೇನೆಯ ಕಾರ್ಯಾಚರಣೆ ಯಶಸ್ವಿಯಾಗಿತ್ತು. ದೇಶಕ್ಕಾಗಿ ಜೀವವನ್ನು ಕೊಟ್ಟ ಆ ಸೈನಿಕರ  ಕೊಡುಗೆ ನಿಜಕ್ಕೂ ಕೊಂಡಾಡುವಂತದ್ದು.

      ಲೆ. ಸೌರಭ್ ಕಾಲಿಯಾ, ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಯೋಗೆಂದ್ರ ಸಿಂಗ್, ಸಂಜಯ್ ಕುಮಾರ್, ಮೇಜರ್ ಪದ್ಮಪಾಣಿ ಆಚಾರ್ಯ, ಲೆಫ್ಟಿನೆಂಟ್ ಬಲ್ವಾನ್ ಸಿಂಗ್, ಮೇಜರ್ ಸರವಣನ್, ಲೆಫ್ಟಿನೆಂಟ್ ಕಣಾದ್ ಭಟ್ಟಚಾರ್ಯ(22ವರ್ಷ), ಕ್ಯಾಪ್ಟನ್ ಸಜು ಚೇರಿಯನ್, ಲೆ. ಕೈಸಿಂಗ್ ಕ್ಲಿಫರ್ಡ್ ನಂಗ್ರಮ್,ಕ್ಯಾ. ಜೆರ್ರಿ ಪ್ರೇಮ್ ರಾಜ್,ಮೇಜರ್ ಸೋನಮ್ ವಾಂಗ್ ಚುಕ್, ಕ್ಯಾ ವಿಜಯ್ ಥಾಪರ್, ರಾಜಶ್ರೀ ಗುಪ್ತ ಸೇರಿದಂತೆ ಯುದ್ದದಲ್ಲಿ ಸೆಣಸಿದ, ವೀರ ಮರಣವನ್ನಪ್ಪಿದ ಯೋಧರಿಗೆ ಇದೋ ನಮ್ಮ ಕೋಟಿ ನಮನ.... 
-ಸಂ


  

ದೇಶಕ್ಕಾಗಿಯೇ ಬದುಕನ್ನರ್ಪಿಸಿದವರಿಗೆ ಸಲಾಮ್ ಹೇಳೋಣ.
ದೇಶಕ್ಕಾಗಿಯೇ ಬದುಕುತ್ತ್ತಿರುವವರನ್ನು ನಮಿಸೋಣ.
ವಂದೇ ಮಾತರಂ ಎನ್ನುತ್ತ ದೇಶಕ್ಕಾಗಿ ಬಾಳೋಣ


ನಿಮ್ಮ ಪ್ರತಿಕ್ರಿಯೆ ಬರೆಯಿರಿ
ಕುಂದಾಪ್ರ ಡಾಟ್ ಕಾಂ