ಹಿರಿಯ ಸಾಹಿತಿಗಳೆಡೆಗೆ ಕಸಪಾ - ಸುರೇಂದ್ರ ಅಡಿಗ
'ಹಿರಿಯರೆಡೆಗೆ ನಮ್ಮ ನಡಿಗೆ' ಎಂಬ ವಿನೂತನ ಕಾರ್ಯಕ್ರಮದಿಂದ ಸ್ಪೂತರ್ಿಗೊಂಡು ಕಸಪಾದಲ್ಲೂ ಹಿರಿಯ ಸಾಹಿತಿಗಳಡೆಗೆ ಕಸಪಾ ಎಂಬ ಕಾರ್ಯಕ್ರಮ ಮಾಡಲು ಪ್ರೇರಣೆ ದೊರಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತ ಜಿಲ್ಲಾ ಅಧ್ಯಕ್ಷರಾದ ಸುರೇಂದ್ರ ಅಡಿಗ ಅವರು ಹೇಳಿದರು.
ಅವರು ಶನಿವಾರ ಕುಂದಾಪುರದ 'ನುಡಿ' (ಹೆಬ್ಬಾರ ನಿವಾಸ)ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತರ ವೇದಿಕೆ (ರಿ.) ಉಡುಪಿ ಘಟಕ, ಕುಂದಾಪ್ರ ಡಾಟ್ ಕಾಂ ಮತ್ತು ಶ್ರೀ ಸ್ಕೂಲ್ ಆಫ್ ಜರ್ನಲಿಸಮ್ ಮೂಡುಬಿದಿರೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಎ.ಎಸ್.ಎನ್.ಹೆಬ್ಬಾರ್ ಅವರನ್ನು ಗೌರವಿಸಿ ಮಾತನಾಡುತ್ತಿದ್ದರು.
ಇದೊಂದು ವಿನೂತನ ಕಾರ್ಯಕ್ರಮ ಮನೆಯ ವಾತಾವರಣದಲ್ಲಿ ಆತ್ಮೀಯವಾಗಿ ನಡೆದಿದ್ದು ತುಂಬಾ ಸಂತೋಷ, ಸಂಭ್ರಮ ನೀಡಿತು ಎಂದು ಅವರು ಹೇಳಿದರು.
ಪತ್ರಕರ್ತರು ಮನೆಗೆ ಬಂದು ಮತ್ತೊಬ್ಬ ಪತ್ರಕರ್ತರನ್ನು ಗೌರವಿಸುವ ಕಾರ್ಯಕ್ರಮ ಅತ್ಯಂತ ಸಂತೋಷ ನೀಡಿತು. ಸನ್ಮಾನಕ್ಕಿಂತ ಪತ್ರಕರ್ತರ ನಡುವೆ ಕಳೆಯುವ ಕ್ಷಣಗಳು ಹೆಚ್ಚು ಮಹತ್ವದ್ದು ಎಂದು ಗೌರವ ಸ್ವೀಕರಿಸಿದ ಎ.ಎಸ್.ಎನ್.ಹೆಬ್ಬಾರ್ರವರು ಸನ್ಮಾನಕ್ಕೆ ಉತ್ತರಿಸಿದರು.
ಪತ್ರಕರ್ತರಿಗೆ ಕನಿಷ್ಠ ಗೌರವಧನ ಅವರ ಜೀವನೋಪಾಯಕ್ಕೆ ಬೇಕಾಗುವಷ್ಟು ಸಿಗುವಂತಾಗಬೇಕು. ಪತ್ರಕರ್ತರ ಸಂಘಟನೆಗಳ ನಡುವಿನ ಅಂತರ ಕಡಿಮೆಯಾಗಬೇಕು ಎಂದು ವೇದಿಕೆಯ ಉಡುಪಿ ಜಿಲ್ಲಾ ಅಧ್ಯಕ್ಷ ಶೇಖರ ಅಜೆಕಾರು ಅವರು ಅಧ್ಯಕ್ಷ ಸ್ಥಾನದಿಂದ ಹೇಳಿದರು.
ಪತ್ರಕರ್ತರಿಗೆ ಕನಿಷ್ಠ ಗೌರವಧನ ಅವರ ಜೀವನೋಪಾಯಕ್ಕೆ ಬೇಕಾಗುವಷ್ಟು ಸಿಗುವಂತಾಗಬೇಕು. ಪತ್ರಕರ್ತರ ಸಂಘಟನೆಗಳ ನಡುವಿನ ಅಂತರ ಕಡಿಮೆಯಾಗಬೇಕು ಎಂದು ವೇದಿಕೆಯ ಉಡುಪಿ ಜಿಲ್ಲಾ ಅಧ್ಯಕ್ಷ ಶೇಖರ ಅಜೆಕಾರು ಅವರು ಅಧ್ಯಕ್ಷ ಸ್ಥಾನದಿಂದ ಹೇಳಿದರು.
ನಿಮ್ಮ ಪ್ರತಿಕ್ರಿಯೆ ಬರೆಯಿರಿ
editor@kundapra.com