ಬೆಳವಣಿಗೆಯ ಭಾಗವಾಗೋಣ: ಸುಜಿತ್ ಲಾಲ್ವಾನಿ

ನಮ್ಮ ನಾಡಿನ ಬದಲಾವಣೆಯ ರೂವಾರಿಗಳು ನಾವಾಗೋಣ

ಕುಂದಾಪುರ:  ನಾಗಾಲೋಟದಲ್ಲಿ ಜಗತ್ತು ಮುನ್ನಡೆಯುತ್ತಿರುವಾಗ ಮನುಷ್ಯ ನಾನು ನನ್ನವರು ಎಂಬ ಸಂಕುಚಿತ ಪ್ರಪಂಚಕ್ಕಷ್ಟೇ ಮೀಸಲಾಗಿರದೆ ಜಗತ್ತಿನ ಬೆಳವಣಿಗೆಯಲ್ಲಿ ಭಾಗಿಯಾಗಬೇಕು ನಾವಿಂದು ಭಾರತದ ಪ್ರಜೆಗಳು ಮಾತ್ರವಾಗಿರದೇ ವಿಶ್ವದ ಪ್ರಜೆಗಳಾಗಿದ್ದೆವೆಎಂದು ಬೆಂಗಳೂರು ಇನ್ಸ್‌ಪಿರೇಶನ್ ಅನ್ ಲಿಮಿಟೆಡ್‌ನ ಅಧ್ಯಕ್ಷ ಸುಜಿತ್ ಲಾಲ್ವಾನಿ ಹೇಳಿದರು.

  
ಅವರು ಭಂಡಾರ್‌ಕಾರ್ಸ್‌ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ಕುಂದಾಪುರದ ಸರಸ್ವತಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್, ಅಕ್ಷಯ ಕೋಚಿಂಗ್ ಕ್ಲಾಸಸ್ ಹಾಗೂ ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಆಶ್ರಯದಲ್ಲಿ ಹಮ್ಮಿಕೊಂಡ ನಾಯಕತ್ವ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

   ನಾವು ಎಲ್ಲಿಂದ ಬಂದಿದ್ದೆವೆ ಎಂಬುದು ಮಖ್ಯವಲ್ಲ. ನಾವೇನಾಬೇಕಿದೆ ಎಂಬುದಷ್ಟೆ ಮುಖ್ಯ. ನಮ್ಮಲ್ಲಿರುವ ಭಯ, ಮತ್ತೊಬ್ಬರೊಂದಿಗೆ ಹೊಲಿಸಿಕೊಳ್ಳುವ ಗುಣ ಮುಂತಾದ ನಕಾರಾತ್ಮಕ ಗುಂಗಳನ್ನು ದೂರ ಮಾಡಿಕೊಂಡು ಸಾಧನೆಯತ್ತ ಮುನ್ನಡೆಯಬೇಕು ಎಂದು ಅವರು, ಇಂದು ಮಕ್ಕಳಿಗೆ ಪರೀಕ್ಷೆ ಎದುರಿಸುವುದೇ ಕಾಯಕವಾಗಿ ಬಿಟ್ಟಿದೆ. . ಇದರಿಂದ ಅವರಲ್ಲಿನ ಸಜನಶೀಲತೆ, ಸ್ವಂತ ಚಿಂತನೆ ಮಾಯವಾಗುತ್ತಿದೆ. ಪರೀಕ್ಷೆ ಎದುರಿಸುವುದರಿಂದ ಉತ್ತಮ ಉದ್ಯೋಗ ಗಿಟ್ಟಿಸಬಹುದೆ ಹೊರತು ಉತ್ತಮ ವ್ಯಕ್ತಿತ್ವವನ್ನಲ್ಲ. ಉತ್ತಮ ವ್ಯಕ್ತಿತ್ವ ಹೊರಹೊಮ್ಮಬೇಕಾದರೆ ವಿದ್ಯಾರ್ಥಿ ಜೀವನದಲ್ಲಿ ಪ್ರೌಢಿಮೆ ತೋರಬೇಕು. ಅದಕ್ಕೆ ಬೇಕಾದ ವೇದಿಕೆ ಒದಗಿಸಿಕೊಡಬೇಕು. ಎಂರು.

ಮೂಡ್ಲಕಟ್ಟೆ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಂಶುಪಾಲರಾದ ಎಸ್.ಎಸ್.ರಾವ್, ಸರಸ್ವತಿ ಗ್ರೂಪ್ ಆಫ್ ಇನ್ಸ್‌ಟಿಟ್ಯೂಟ್ ವ್ಯವಸ್ಥಾಪಕ ನಿರ್ದೇಶಕ ರಿತೇಶ್ ಕಾಮತ್, ಅಕ್ಷಯ ಕೋಚಿಂಗ್ ಕ್ಲಾಸಸ್‌ನ ವ್ಯವಸ್ಥಾಪಕ ನಿರ್ದೇಶಕ ರಾಮ ಮಾರುತಿ, ಪತ್ರಕರ್ತ ಸಂತೋಷ ಕೋಣಿ
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ಮಹೇಶ್ ವಕ್ವಾಡಿ ಕಾರ್ಯಕ್ರಮ ನಿರ್ವಹಿಸಿದರು. 



ನಿಮ್ಮ ಪ್ರತಿಕ್ರಿಯೆ ಬರೆಯಿರಿ