ಗ್ರೀನ್ ವ್ಯಾಲಿ ನ್ಯಾಷನಲ್ ಸ್ಕೂಲ್ ಹಾಗೂ ಪಿಯು ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಜಾನ್ ಮ್ಯಾಥು ನೇಮಕ.

ಗ್ರೀನ್ ವ್ಯಾಲಿ ನ್ಯಾಷನಲ್ ಸ್ಕೂಲ್ ಹಾಗೂ ಪಿಯು ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಜಾನ್ ಮ್ಯಾಥು ಅವರು
 ನೇಮಕಗೊಂಡಿದ್ದಾರೆ.ಅವರು ಈ ಹಿಂದೆ ಮಾಲ್ಡೀವ್ಸ್ ದೇಶದ ಜೆ.ಸಿ.ಇ ಆಡ್ವಾನ್ಸ್ಡ್ ಲೆವೆಲ್ ಲಂಡನ್ ಎಕ್ಸಾಮಿನೇಷನ 
ಪಠ್ಯ ಕ್ರಮವನ್ನು ಅನುಸರಿಸುವ ಪ್ರತಿಷ್ಟಿತ ಎಲ್ಲಾ ಇಂಟರ್ ನ್ಯಾಷನಲ್ ಹೈಸ್ಕೂಲಿನ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ 
ಮಾಲ್ಡೀವ್ ದೇಶದ ಶಿಕ್ಷಣ ಸಚಿವಾಲಯದಲ್ಲಿ ಪ್ರಾಂಶುಪಾಲರಾಗಿ ೧೩ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುತ್ತಾರೆ.
ಮಾಲ್ಡೀವ್ ನ ಪ್ರಪ್ರಥಮ ಭಾರತೀಯ ಪ್ರಾಂಶುಪಾಲರಾಗಿ ಅಲ್ಲಿನ ಶೈಕ್ಷಣಿಕ ವಲಯದಲ್ಲಿ ಭಾರೀ ಗೌರವಕ್ಕೆ 
ಪಾತ್ರರಾಗಿರುವ ಅವರು ತಮ್ಮ ಭೋಧನಾ ವಿಧಾನದಿಂದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ 
ಫಲಿತಾಂಶ ಪಡೆದು ಆ ದೇಶದಲ್ಲಿ ಖ್ಯಾತಿ ಹೊಂದಿದವರಾಗಿದ್ದಾರೆ. ತಮ್ಮ ೨೬ವರ್ಷಗಳ ಸುದೀರ್ಘ ಶೈಕ್ಷಣಿಕ 
ಸೇವೆಯಲ್ಲಿ ೨೨ವರ್ಷಗಳ ಕಾಲ ಪ್ರಾಂಶುಪಾಲರಾಗಿ ಮಾರ್ಗದರ್ಶನ ನೀಡಿರುವವರು ಜಾನ್ ಮ್ಯಾಥು. ಮಂಗಳೂರಿನ 
ಕೆಂಬ್ರಿಜ್ ಸ್ಕೂಲ್ ನ ಸ್ಥಾಪಕ ಪ್ರಾಂಶುಪಾಲರಾದ ಜಾನ್ ಮ್ಯಾಥು ಅವರು ದೇಶದ ಕೆರ್ಪಾಲ್ ಸಾಗರ್ ಅಕಾಡೆಮಿ , 
ಐ.ವಿ ಲೀಗ್ ಶಾಲೆಗಳ ಸಹಿತ ವಿವಿಧ ಪ್ರತಿಷ್ಠಿತ ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಗ್ರೀನ್ ವ್ಯಾಲಿ ಯ ಚೀಪ್-ಕೋ-ಆರ್ಡಿನೇಟರ್ ಹಾಗೂ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿ ಬ್ರಿಟಿಷ್ ಮೂಲದ ವಿಲೆಮಿನ
ಮ್ಯಾಥು ಅವರು ನೇಮಕಗೊಂಡಿದ್ದಾರೆ.ಪ್ರಖ್ಯಾತ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಶಾಲಾ ಕಾಲೇಜುಗಳಲ್ಲಿ 
ಆಡಳಿತದೊಂದಿಗೆ ಸುದೀರ್ಘ ೨೩ವರ್ಷಗಳ ಭೋಧನಾನುಭವ ವನ್ನು ಹೊಂದಿರುವ ವಿಲೆಮಿನಾ ಈ ಹಿಂದೆ ಮಾಲ್ಡೀವ್ 
ದೇಶದ ಎಲ್ಲಾ ಕಾಲೇಜ್ ನಲ್ಲಿ ಕೋ-ಆರ್ಡಿನೇಟರ್ ಮತ್ತು ಸೀನಿಯರ್ ಲೆಕ್ಚರರ್ ಆಗಿ ಸೇವೆ ಸಲ್ಲಿಸಿರುತ್ತಾರೆ.
ಲಂಡನ್ ಹಾಗೂ ಕೇಬ್ರಿಜ್ ವಿಶ್ವವಿದ್ಯಾಲಯಗಳಿಂದ ಮಾನ್ಯತೆ ಪಡೆದ "ಒ" ಲೆವೆಲ್ ಮತ್ತು"ಎ" ಲೆವೆಲ್ ಪರೀಕ್ಶಾ
ಕ್ರಮ ಅನುಸರಿಸಿರುವ ಶಾಲೆಗಳಲ್ಲಿ ಕೋ-ಆರ್ಡಿನೇಟರ್ ಮತ್ತು ಇಂಗ್ಲೀಷ ಭಾಷೆಯ ಸೀನಿಯರ್ ಟೀಚರ್ ಆಗಿ ವಿಲೆಮಿನ 
ಅವರು ೧೩ವರ್ಷಗಳ ಕಾಲ ಸೇವೆ ಸಲ್ಲಿಸಿದವರಾಗಿದ್ದಾರೆ.
ಜಾನ್ ಮ್ಯಾಥು ಮತ್ತು ವಿಲೆಮಿನಾ ಮ್ಯಾಥು ಅವರ ಶೈಕ್ಷಣಿಕ ಅನುಭವ ಹಾಗೂ ಮಾದರಿ ಶಿಕ್ಷಣ ಸಂಸ್ಥೆಗಳನ್ನು 
ಕಟ್ಟಿ ಬೆಳೆಸಿದ ಅವರ ದೃಡ ಸಂಕಲ್ಪ ಗ್ರೀನ್ ವ್ಯಾಲಿ ನ್ಯಾಷನಲ್ ಸ್ಕೂಲಿಗೆ ವರದಾನವಾಗಲಿದೆ ಎಂದು ಸಂಸ್ಥೆಯ ಪ್ರಕಟನೆ 
ತಿಳಿಸಿದೆ