ಪತ್ರಕರ್ತ ಅರುಣ್ ಕುಮಾರ್ ಗೆ ಸನ್ಮಾನ

 ಬೈಂದೂರು : ಗ್ರಾಮೀಣ ವರದಿಗಾರಿಕೆ ಮತ್ತು ಸಾಂಸ್ಕ್ರತಿಕ ಸೇವೆಗಾಗಿ ಬೆಂಗಳೂರಿನ ಅಡಿಗ ಆಟ್ಸ್ ಅಕಾಡಮಿ ವತಿಯಿಂದ 2012 ರ ಸಾಲಿನಲ್ಲಿ ಬೆಂಗಳೂರಿನ ನಯನಾ ಸಭಾಂಗಣದಲ್ಲಿ ನಡೆದ ಸಾಂಸ್ಕ್ರತಿಕ ಉತ್ಸವದಲ್ಲಿ ಶ್ರೀ ಗಂಧ ಕಲಾ ಕೇಸರಿ ಪ್ರಶಸ್ತಿ ಪಡೆದ ಅರುಣ್ ಕುಮಾರ್ ರವರಿಗೆ ಬೈಂದೂರು ರೋಟರಿ ವತಿಯಿಂದ ಸನ್ಮಾನಿಸಲಾಯಿತು.

 2012 ರ ಸಾಲಿನ ರೋಟರಿ ಪದಗ್ರಹಣ ನೆರವೇರಿಸಿದ ಶಿವಮೊಗ್ಗದ ಮನೋವೈಧ್ಯ ಡಾ | ಎ. ಕೆ. ಅಶೋಕ್ ಪೈ ಸನ್ಮಾನ ನೆರವೇರಿಸಿದರು. ಈ ಸಂದರ್ಭದಲ್ಲಿ ಉಪಗವರ್ನರ್ ಅಭಿನಂದನಾ ಶೆಟ್ಟಿ, ವಲಯ ಸೇನಾನಿ ಕೆ. ಕೆ. ಶೆಟ್ಟಿ, ರೋಟರಿ ಮಾಜಿ ಗವರ್ನರ್ ರೋ. ಜಗನ್ನಾಥ ಶೆಟ್ಟಿ, ನೂತನ ಅಧ್ಯಕ್ಷ ವಸಂತ ಹೆಗ್ಡೆ ಉಪಸ್ಥಿತರಿದ್ದರು. ಮಂಜುನಾಥ ಮಹಾಲೆ ಸ್ವಾಗತಿಸಿ, ಸುಧಾಕರ ಪಿ. ಕಾರ್ಯಕ್ರಮ ನಿರೂಪಿಸಿ, ಎಮ್. ಎನ್. ಶೇರುಗಾರ್ ವಂದಿಸಿದರು.


ನಿಮ್ಮ ಪ್ರತಿಕ್ರಿಯೆ ಬರೆಯಿರಿ ಕುಂದಾಪ್ರ.ಕಾಂ> editor@kundapra.com