ತೆಕ್ಕಟ್ಟೆ ಸೇವಾ ಸಂಗಮ ವಿದ್ಯಾಕೇಂದ್ರದಲ್ಲಿ ಗುರು ಪೂರ್ಣಿಮೆ ಆಚರಣೆ

ತೆಕ್ಕಟ್ಟೆ ಸೇವಾ ಸಂಗಮ ವಿದ್ಯಾಕೇಂದ್ರದಲ್ಲಿ ಶಾಲಾ ಸಂಚಾಲಕರಾದ ಶ್ರೀಯುತ ಟಿ.ರಮೇಶ್ ನಾಯಕ್ ಇವರ ಅಧ್ಯಕ್ಷತೆಯಲ್ಲಿ ಗುರು ಪೂರ್ಣಿಮೆಯನ್ನು ಆಚರಿಸಲಾಯಿತು. ಪ್ರಾ.ಶಾಲಾ.ಮು.ಶಿ.ಕೆ.ಇಂದ್ರಾಕ್ಷಿ ಉಡುಪ ಪ್ರಾಸ್ತಾವನೆ ಮಾಡಿದರು.
ವಿಶ್ರಾಂತ ಪ್ರಾಂಶುಪಾಲರಾದ ಶ್ರೀಯುತ ಶಂಕರರಾವ್ ಕಾಳಾವರ ಹಾಗೂ ನಿವ್ರತ್ತ ಶಿಕ್ಷಕ ಶ್ರೀಯುತ ನಾರಾಯಣ ಮಯ್ಯ ಇವರನ್ನು ಫಲಪುಷ್ವ ಶಾಲನಿನೊಂದಿಗೆ ಪ್ರೌಢಶಾಲಾ ಪ್ರಾಚಾರ್ಯರಾದ ಶ್ರೀಯುತ ಸುಬ್ರಾಯ ಹಂದೆಯವರು ಸನ್ಮಾನಿಸಿದರು. ಶ್ರೀಯುತ ಶಂಕರರಾವ್ ಇವರು ಮಾತನಾಡುತ್ತಾ ಸಮಯದ ಮಹತ್ವದ ಹಾಗೂ ಶಿಸ್ತಿನ ಬಗ್ಗೆ ತಿಳಿಸಿ ಹೇಳುತ್ತಾ ಶಾಲಾ ಪರಿಸರ ಹಾಗೂ ಮಕ್ಕಳ ಶಿಸ್ತನ್ನು ಮೆಚ್ಚಿದರು. ಶ್ರೀಯುತ ನಾರಾಯಣ ಮಯ್ಯ ಅವರು ಈಗ ಏನೇ ಸಾಹಿತ್ಯ ರಚನೆಯಾದರೂ ಅದಕ್ಕೆ ಮೂಲ ಕೊಡುಗೆ ವೇದವ್ಯಾಸರದ್ದು ಎಂಬುದಾಗಿ ತಿಳಸುತ್ತಾ ವ್ಯಾಸರ ಜೀವನ ಹಾಗೂ ಮಹಾನ್ ಕಾರ್ಯಗಳನ್ನು ತಿಳಿಸಿ ಗುರುಪೂಣರ್ಿಮೆಯ ಮಹತ್ವವನ್ನು ವಿವರಿಸಿದರು. ಶಾಲಾ ಶೈಕ್ಷಣಿಕ ಸಲಹೆಗಾರರಾದ ಶ್ರೀ.ಬಿ.ಎಲ್.ಉಪಾಧ್ಯರು ಸನ್ಮಾನಿತರನ್ನು ಪರಿಚಯಸಿದರು. ಈ ರಮೇಶ್ ನಾಯಕ್ರವರು ಅಧ್ಯಕ್ಷೀಯ ಭಾಷಣದಲ್ಲಿ ಎಲ್ಲರಿಗೂ ಶುಭಕೋರಿದರು. 10ನೇ ತರಗತಿ ಸಭ್ಯಾ ಕಾರ್ಯಕ್ರಮ ಸಂಯೋಜಿಸಿ, ದೀಕ್ಷಿತ್ ಧನ್ಯವಾದವಿತ್ತರು. 7ನೇ ತರಗತಿ ಶ್ರವಣ ಸ್ವಾಗತಿಸಿದರು. ಶಾಂತಿಮಂತ್ರದೊಂದಿಗೆ ಸಭೆ ಮುಕ್ತಾಯವಾಯಿತು. ನಿತ್ಯಾನಂದ ಶ್ಯಾನುಭಾಗ್ ಮತ್ತು ಮಕ್ಕಳು ಮಾಲಾಡಿ ಇವರ ವತಿಯಿಂದ ಸಿಹಿ ಹಂಚಲಾಯಿತು.


ವರದಿ : ಯೋಗೀಶ್ ಕುಂಭಾಸಿ


ನಿಮ್ಮ ಪ್ರತಿಕ್ರಿಯೆ ಬರೆಯಿರಿ ಕುಂದಾಪ್ರ.ಕಾಂ> editor@kundapra.com