ಮೂಡಬಿದಿರೆ ಶ್ರೀಶ್ರೀಗಳ ಮಾರ್ಗದರ್ಶನದಲ್ಲಿ ಧರ್ಮಜಾಗೃತಿ

 ಮೂಡಬಿದಿರೆ ಶ್ರೀಶ್ರೀಗಳ ಮಾರ್ಗದರ್ಶನದಲ್ಲಿ ಅಮೇರಿಕಾ ಪ್ರವಾಸದಲ್ಲಿ ವಿವಿಧೆಡೆ ಧರ್ಮಜಾಗೃತಿ
ಇದೇ ಜುಲೈ 10ರಿಂದ ಅಗೋಸ್ತು 12 ರ ವರೆಗೆ ಒಂದು ತಿಂಗಳ ಅವಧಿಯಲ್ಲಿ ಅಮೇರಿಕಾ ದೇಶದ ವಿವಿಧೆಡೆ ಜಿನಮಂದಿರ ಪ್ರತಿಷ್ಠಾಪನೆ, ಆರಾಧನೆ, ತಾತ್ತ್ವಿಕ ಚಚರ್ೆ, ಪ್ರವಚನ ಮುಂತಾದ ಕಾರ್ಯಕ್ರಮಗಳಿಗಾಗಿ ವಿವಿಧ ಧಾಮರ್ಿಕ ಸಂಘಟನೆಗಳ ಆಹ್ವಾನದ ಮೇರೆಗೆ ಅಮೇರಿಕಾ ಪ್ರವಾಸಕ್ಕೆ ಮೂಡುಬಿದಿರೆ ಶ್ರೀ ಜೈನಮಠದ ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀತರ್ಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳವರು ತೆರಳಿದರು. ಈ ಧಾಮರ್ಿಕ ಜಾಗೃತಿಯ ಅಮೇರಿಕಾ ಪ್ರವಾಸವು  ಜುಲೈ 10-16ರ ನಡುವೆ ಕ್ಲೀವ್ಲ್ಯಾಂಡಿನಲ್ಲಿ ಸಿದ್ಧಾಚಲಂ ಪಾಶ್ರ್ವನಾಥ ಸ್ವಾಮಿ ಪಾದುಕಾಸ್ಥಾಪನಾರ್ಥ ಭೂಮಿ ಪೂಜೆ ನೆರವೇರಿಸುವರು. ಜುಲೈ 19, 20, 21 ದಿನಗಳಂದು ಕೊಲಂಬಸ್ನಲ್ಲಿ ನೂತನ ಜಿನಮಂದಿರ ಪ್ರತಿಷ್ಠೆ ನೆರವೇರಿಸಲಿದ್ದಾರೆ. ಜುಲೈ 27ರಿಂದ ಅಗೋಸ್ತು 1ರ ವರೆಗೆ ನ್ಯೂಜೆಸರ್ಿಯ 538-540 52 ಸ್ಟ್ರೀಟ್ ವೆಸ್ಟ್ ನ್ಯೂಯಾಕರ್್ 077093 ನೂತನ ಜಿನಮಂದಿರ ಪ್ರತಿಷ್ಠಾ ಪಂಚಕಲ್ಯಾಣ ಕಾರ್ಯಕ್ರಮದಲ್ಲಿ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನ ನೀಡಲಿದ್ದಾರೆ. ಅಗೋಸ್ತು 3ರಿಂದ 6 ರ ವರೆಗೆ ಅಟ್ಲಾಂಟಾದಲ್ಲಿ 3 ದಿನದ ಧಾಮರ್ಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಿದ್ಧಚಕ್ರ ಆರಾಧನಾ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಧಾಮರ್ಿಕ ಪ್ರವಚನ ನೀಡಲಿರುವವರು. ಅಗೋಸ್ತು 7ರಿಂದ 12ರ ವರೆಗೆ 5 ದಿನಗಳ ಕಾಲ ಸಿದ್ಧಾಚಲಂ ಮಡ್ಪಾಂಡ್ ರೋಡಿನಲ್ಲಿ ಸುಮಾರು 100 ಏಕರೆಯಲ್ಲಿ ನಿಮರ್ಾಣಗೊಂಡ ಜೈನತೀರ್ಥದಲ್ಲಿ 20 ಎಕರೆ ಪ್ರದೇಶದಲ್ಲಿ ಜೈನರ ಸಿದ್ಧಕ್ಷೇತ್ರಗಳ ಪ್ರತಿಕೃತಿಯನ್ನು ನಿಮರ್ಾಣಗೊಳಿಸಿದ್ದು ಅದರ ಪ್ರತಿಷ್ಠಾ ಮಹೊತ್ಸವ ಹಾಗೂ ಕಲಿಕುಂಡ ಆರಾಧನೆ ಪರಮ ಪೂಜ್ಯ ಶ್ರೀಶ್ರೀಗಳವರ ಮಾರ್ಗದರ್ಶನ ಹಾಗೂ ದಿವ್ಯ ಸಾನ್ನಿಧ್ಯದಲ್ಲಿ ಅಮೇರಿಕಾದಲ್ಲಿ ಶಿಖಜರ್ಿ 24 ಕೂಟಗಳ ಪ್ರತಿಷ್ಠಾ ಮಹೋತ್ಸವ ಹಾಗೂ ಕಲ್ಯಾಣಮಂದಿರ ಆರಾಧನೆ ಜರುಗಲಿದೆ. ಈ ಧಾಮರ್ಿಕ ಪ್ರವಾಸವು ಶ್ರೀಶ್ರೀಗಳ 30ನೇ ವಿದೇಶ ಪ್ರವಾಸವಾಗಿರುತ್ತದೆ.


ನಿಮ್ಮ ಪ್ರತಿಕ್ರಿಯೆ ಬರೆಯಿರಿ ಕುಂದಾಪ್ರ.ಕಾಂ> editor@kundapra.com