ಯಕ್ಷಗಾನ ಎನಿಮೇಶನ್ ಇದೊಂದು ಹೊಸ ಪ್ರಯತ್ನ: ಪುನರೂರು


ಮೂಡುಬಿದಿರೆ: ಯಕ್ಷಗಾನ ಪುರಾಣ ಜ್ಞಾನವನ್ನು ನಮ್ಮ ಮಕ್ಕಳಲ್ಲಿ ಉಂಟು ಮಾಡಲು ತುಂಬಾ ಸಹಕಾರಿಯಾಗಿದೆ.ಅದಕ್ಕೆ ಆಧುನಿಕತಂತ್ರಜ್ಞಾನದ ಸ್ಪರ್ಶ ನೀಡಿ ಇನ್ನಷ್ಟು ಮೆರಗು ನೀಡುವ ಪ್ರಯತ್ನ ಇದಾಗಿದ್ದು ಇನ್ನಷ್ಟು ಮಂದಿಯನ್ನು ಯಕ್ಷಗಾನದತ್ತ ಸೆಳೆಯಲು ಪೂರಕವಾಗ ಬಹುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಮೂಡುಬಿದಿರೆಯ ಅಮರಶ್ರೀ ಚಲನಚಿತ್ರ ಮಂದಿರದಲ್ಲಿ ಬುಧವಾರ ನಡೆದ ಶ್ರೀ ಕಾಲೇಜ್ ಸಂಸ್ಥೆಯು "ಭವ"  ಕನ್ನಡ ಚಲನಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎನಿಮೇಟೆಡ್( ಜೀವ ಚೇತನ) ಯಕ್ಷಗಾನ "ಶ್ರೀ ಹರಿಮಾಯೆ" ಬಿಡುಗಡೆಗೊಳಿಸ  ಮಾತನಾಡಿದರು.

ಇಂತಹ ಪ್ರಯೋಗಗಳು ಯಕ್ಷಗಾನಕ್ಕೆ ಪೂರಕವಾಗಿ ನಡೆದು ಕಲೆಗೆ ಇನ್ನೂ ಹೆಚ್ಚಿನ ಬೆಲೆ ಬರಲಿ ಎಂದ ಅವರು ತಂತ್ರಜ್ಞಾನ ಬಳಕೆ ಮತ್ತು ಮಕ್ಕಳಿಗಾಗಿ ಅದರ ಉಚಿತ ಪ್ರದರ್ಶನ ಆಯೋಜನೆಯ ಬಗೆಗೆ ಪ್ರಶಂಸೆಯ ಮಾತುಗಳನ್ನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪಿಂಗಾರ ಪತ್ರಿಕೆಯ ಸಂಪಾದಕ ರೇಮಂಡ್ ಡಿಕುನ್ನಾ ತಾಕೋಡೆ ಮಾತನಾಡಿ ಯಕ್ಷಗಾನ ಸೇರಿದಂತೆ ಕಲಾ ಮಾಧ್ಯಮದ ಇತಿಹಾಸದಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು  ಹೇಳಿದರು.
ಯಕ್ಷಗಾನಕ್ಕೆ ಹೊಸ ಮೆರಗು ನೀಡಲು ಮತ್ತು ಇನ್ನಷ್ಟು ಮಂದಿಯನ್ನು ಆಕಷರ್ಿಸಲು ಈ ಪ್ರಯತ್ನ ಎಂದು ಈ ಹೊಸ ಪರಿಕಲ್ಪನೆಯನ್ನು ಸಾಕಾರ ಮಾಡಿದ ಸದಾನಂದ ಶೆಟ್ಟಿ ಕಟೀಲು ಅಭಿಪ್ರಾಯಪಟ್ಟರು.

14 ನೇ ಕರಾವಳಿ ವಿದ್ಯಾಥರ್ಿ ಸಮ್ಮೇಳನದ ಗೌರವವನ್ನು ಮುಂಬಯಿಯ ಯುವ ಕಲಾವಿದ,ಮೈಟ್ ವಿದ್ಯಾಥರ್ಿ ಶ್ರೇಯಸ್ ಎಸ್ ಹೆಗ್ಡೆ ಅವರಿಗೆ ನೀಡಿ ಗೌರವಿಸಲಾಯಿತು.
ಎನಿಮೇಶನ್ ತಂತ್ರಜ್ಞ ಸಂತೋಷ್ ಶೆಟ್ಟಿ ಕಟೀಲ್, ಭವ ಚಿತ್ರದ ನಿಮರ್ಾಪಕ- ನಿದರ್ೇಶಕ ಪ್ರಕಾಶ್ ಕಾಬೆಟ್ಟು, ಅಮರಶ್ರೀ ಟಾಕೀಸಿನ ವ್ಯವಸ್ಥಾಪಕ ಜೆರಾಲ್ಡ್ ಕುಟಿನೋ ಅತಿಥಿಗಳಾಗಿದ್ದರು.
ಸಂಘಟಕ ಶೇಖರ ಅಜೆಕಾರು ಸ್ವಾಗತಿಸಿದರು. ಶಿಕ್ಷಕಿ ಆಶಾಲತಾ ಕಾರ್ಯಕ್ರಮ ನಿರೂಪಿಸಿದರು. ಸೌಮ್ಯ ಶ್ರೀ ಎಸ್ ಅಜೆಕಾರು ವಂದಿಸಿದರು.
ವಿವಿಧ ಶಾಲೆಗಳ ಮಕ್ಕಳಿಗೆ ಉಚಿತವಾಗಿ ಪ್ರಕಾಶ್ ಸುವರ್ಣ ಕಟಪಾಡಿ ಅವರ ಭಾಗ್ಯ ಮತ್ತು ಬಿಡುಗಡೆಗೊಂಡ ಯಕ್ಷಗಾನವನ್ನು ದೊಡ್ಡ ಪರದೆಯಲ್ಲಿ ಉಚಿತವಾಗಿ ಪ್ರದಶರ್ಿಸಲಾಯಿತು.

 


ನಿಮ್ಮ ಪ್ರತಿಕ್ರಿಯೆ ಬರೆಯಿರಿ ಕುಂದಾಪ್ರ.ಕಾಂ> editor@kundapra.com