ಉಚಿತ ನೋಟ್ ಪುಸ್ತಕ ವಿತರಣಾ ಸಮಾರಂಭ

   ಕುಂದಾಪುರ:  ಸೇವಾ ಸಂಗಮ ವಿದ್ಯಾಕೇಂದ್ರ, ವಿದ್ಯಾಗಿರಿ ತೆಕ್ಕಟ್ಟೆ ಶಾಲೆಯಲ್ಲಿ ಇತ್ತೀಚೆಗೆ ವಿದ್ಯಾಥರ್ಿ - ವಿದ್ಯಾಥರ್ಿನಿಯರಿಗೆ ಉಚಿತ ನೋಟ್ ಪುಸ್ತಕ ವಿತರಣಾ ಸಮಾರಂಭ ಜರುಗಿತು.  ಶಾಲಾ ಸಂಚಾಲರಾದ ಟಿ.ರಮೇಶ್ ನಾಯಕ್ ಇವರ ಅಧ್ಯಕ್ಷತೆಯಲ್ಲಿ ವರ್ಷಪ್ರಂತಿ ನೀಡುತ್ತಿರುವ ಶಾಲೆಗೆ ನೋಟ್ ಪುಸ್ತಕಗಳ ಕೊಡುಗೆ ನೀಡುವ ದಾನಿ ಕೋಟೇಶ್ವರ ಸೂರ್ಯನಾರಾಯಣರಾವ್ ಇವರು ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿದರು ಮತ್ತು  ಶಾಲಾ ಶಿಸ್ತು ಹಾಗೂ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮಟ್ಟದಲ್ಲಿ ಕನ್ನಡ ಮಾಧ್ಯಮದಲ್ಲಿ 10ನೇ ತರಗತಿಯ 2011-12ನೇ ಸಾಲಿನಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಅನುಷಾ ನಾಯಕ್ ಮತ್ತು ಪ್ರೀತಿ ಶೆಟ್ಟಿ ಇವರನ್ನು ನೆನಪಿನ ಕಾಣಿಕೆ ನೀಡುವುದರೊಂದಿಗೆ ಸನ್ಮಾನಿಸಿದರು.ಶಾಲಾ ಸಂಚಾಲಕ ಟಿ.ರಮೇಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲಾ ಶಿಕ್ಷಕಿ ಸಂಧ್ಯಾ ಮಾತಾಜಿ ತಮಗೆ ಕಳೆದ ವರ್ಷ ದೊರೆತ ಸಾಧಕ ಪ್ರಶಸ್ತಿಯನ್ನು ವೈಯಕ್ತಿಕವಾಗಿ ಅನುಷಾ ನಾಯಕ್ಗೆ ನೀಡಿ ಗೌರವಿಸಿದರು. ಶಕಿಲಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯಿನಿ ಕೆ.ಇಂದ್ರಾಕ್ಷಿ ಉಡುಪ ಸ್ವಾಗತಿಸಿದರು. ಕೃಷ್ಣಾನಂದ ಶ್ರೀಮಾನ್ ವಂದಿಸಿದರು.
 

ನಿಮ್ಮ ಪ್ರತಿಕ್ರಿಯೆ ಬರೆಯಿರಿ ಕುಂದಾಪ್ರ.ಕಾಂ> editor@kundapra.com