ಭಂಡಾರ್ಕಾರ್ಸ್ ಕಾಲೇಜು: ಸುವರ್ಣ ಸಂಭ್ರಮದ ಕಾರ್ಯಕ್ರಮಗಳ ಉದ್ಘಾಟನೆ

 ಕುಂದಾಪುರ: 50ನೇವರ್ಷಚರಣೆಯಲ್ಲಿರುವ ಪ್ರತಿಷ್ಟಿತ ಭಂಡಾರ್ಕಾರ್ಸ್ ಕಾಲೇಜು ಸುತ್ತಲಿನ  ಗ್ರಾಮಾಂತರ  ಪ್ರದೇಶದ ಜನರಿಗೆ ಶಿಕ್ಷಣ ನೀಡಿ ಅವರ ಉನ್ನತ ಶಿಕ್ಷಣದ ಕನಸನ್ನು ನನಸಾಗಿಸುವಲ್ಲಿ ಯಶಸ್ವಿಯಾಗಿದೆ ಎಂದು ಮಣಿಪಾಲ ವಿಶ್ವವಿದ್ಯಾನಿಲಯದ ಕುಲಪತಿ ಪದ್ಮಭೂಷಣ  ಡಾ.ರಾಮದಾಸ .ಎಮ್. ಪೈ ಹೇಳಿದರು.
    ಅವರು ಜುಲೈ 14ರಂದು ಇಲ್ಲಿನ  ಭಂಡಾರ್ಕಾರ್ಸ್ ಕಾಲೇಜಿನ  ಸುವರ್ಣ ಸಂಭ್ರಮದ ಕಾರ್ಯಕ್ರಮಗಳನ್ನು  ಉದ್ಘಾಟಸಿ ಮಾತನಾಡಿದರು. ನಮ್ಮ ಸಮಾಜದಲ್ಲಿನ  ಬಡತನ, ಅನಕ್ಷರತೆ ಮತ್ತು ಅನಾರೋಗ್ಯ ಸಮಸ್ಯೆಗಳನ್ನು ತೊಲಗಿಸಲು ಗುಣಮಟ್ಟದ ಶಿಕ್ಷಣ ಅತ್ಯಂತ ಅಗತ್ಯ. ಗ್ರಾಮಾಂತರ ಪ್ರದೇಶಗಳಲ್ಲಿ  ಸ್ಥಳಿಯರ ಸಹಕಾರದಿಂದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದರಿಂದ ಅಲ್ಲಿನ ಜನರನ್ನು ಸುಶಿಕ್ಷಿತರನ್ನಾಗಿ ಮಾಡುವುದರ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
  
                ಕಾಲೇಜಿನ ಸುವರ್ಣ ಸಂಭ್ರಮ ಲಾಂಛನವನ್ನು ಉದ್ಘಾಟಿಸಿದ ಮಣಿಪಾಲ ವಿಶ್ವವಿದ್ಯಾನಿಲಯದ ಡಾ. ಹೆಚ್.ಎಸ್ ಬಲ್ಲಾಳ್ ಮಾತನಾಡಿ, ಪ್ರತಿಭಾವಂತ  ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರುಗಳ ಪ್ರಯತ್ನದಿಂದ ಪ್ರತಿಷ್ಠಿತ ಈ  ಸಂಸ್ಥೆ ನ್ಯಾಕ್ನಿಂದ 'ಎ' ಗ್ರೇಡ್ ಪಡೆದಿದೆ. ಕಾಲೇಜು ವಿವಿಧ ವಿಷಯಗಳ ಸರ್ಟಿಫಿಕೇಟ್  ಕೋಸರ್್ಗಳನ್ನು ಆರಂಭಿಸಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸುವಲ್ಲಿ ಪ್ರಯತ್ನಿಸುತ್ತಿರುವುದು ಶ್ಲಾಘನೀಯವಾದುದು. ಇಂದು ಗ್ರಾಮಾಂತರ ಪ್ರದೇಶದವರಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಬೇಕಾಗಿದೆ. ಅದಕ್ಕೆ ಪೂರಕವಾಗಿ ಉಪನ್ಯಾಸಕರು ಸಂಶೋಧನಾತ್ಮಕ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

            ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್.ಶಾಂತಾರಾಮ್ ಮಾತನಾಡಿ ಈ ಸಂಸ್ಥೆಯನ್ನು ಸ್ಥಾಪಿಸಿದ ಡಾ. ಟಿ.ಎಂ.ಎ ಪೈ ಮತ್ತು ಡಾ.ಎ.ಎಸ್ ಭಂಡಾರ್ಕರ್ ಇವರುಗಳ ಪರಿಶ್ರಮ, ದೂರದಶರ್ಿತ್ವ ಮತ್ತು ಸಾಮಾಜಿಕ ಕಾಳಜಿಯ ತಳಹದಿಯನ್ನು  ಹಾಕಿಕೊಟ್ಟಿದ್ದಾರೆ. ಅವರನ್ನು ಸ್ಮರಿಸಬೇಕು. ಚಿನ್ನದ ಹಬ್ಬದ ಲಾಂಛನದ ಮಹತ್ವ ಅರಿತು ಸಂಸ್ಥೆಯನ್ನು ಕಟ್ಟಿ ಬೆಳೆಸಬೇಕು. ಚಿನ್ನದ ಹಬ್ಬದ ಭಾಗವಾಗುವ ಅವಕಾಶ ಪಡೆದಿರುವ ವಿದ್ಯಾಥರ್ಿಗಳು ಈ ಸುವಣರ್ಾವಕಾಶವನ್ನು ಉಪಯೋಗಿಸಿಕೊಂಡು ಸಂಸ್ಥೆಯನ್ನು ಬೆಳೆಸುವ ಕೆಲಸದಲ್ಲಿ ತೊಡಗಬೇಕು ಎಂದು ಹೇಳಿದರು

      ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಶ್ರೀ ಕೆ.ಶಾಂತಾರಾಮ್ ಪ್ರಭು, ಶ್ರೀ ಪದ್ಮಾಕರ ನಾಯಕ್, ರಾಜೇಂದ್ರ ತೋಳಾರ್ ಮತ್ತು ಪದವಿಪೂರ್ವ ಕಾಲೇಜಿನ  ಪ್ರ್ರಾಂಶುಪಾಲ ಜಿ.ಎಂ.ಗೊಂಡ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಶ್ರೀ ಚಂದ್ರಶೇಖರ ದೋಮ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶ್ರೀ ಅರುಣಾಚಲ ಮಯ್ಯ ಕಾರ್ಯಕ್ರಮ ನಿರ್ವಹಿಸಿದರು. ಪ್ರಾಧ್ಯಾಪಕ ಕೆ.ಶಾಂತಾರಾಮ್ ವಂದಿಸಿದರು.