ಕೇಶವ ಕೋಟೇಶ್ವರರಿಗೆ 'ಕರುನಾಡ ಸುವರ್ಣ ರತ್ನ' ಪ್ರಶಸ್ತಿ

ಕುಂದಾಪುರ:ಸಾಮಾಜಿಕ ಕಾರ್ಯಕರ್ತ, ಸ್ಫೂರ್ತಿಧಾಮದ ಕೇಶವ ಕೋಟೇಶ್ವರರಿಗೆ 'ಕರುನಾಡ ಸುವರ್ಣ ರತ್ನ' ಪ್ರಶಸ್ತಿ ಒಲಿದು ಬಂದಿದೆ.
          ಸೇವಾ ಕ್ಷೇತ್ರದಲ್ಲಿ  ಅವರು ಸಲ್ಲಿಸಿದ ಅಪ್ರತಿಮ ಸೇವೆಗಾಗಿ ಬೆಂಗಳೂರಿನ ಶ್ರೀ ಶಾರಧ ಕಲಾ ನೀಕೇತನ ಸಂಸ್ಥೆಯು 2012-13ನೇ ಸಾಲಿಗೆ 'ಕರುನಾಡ ಸುವರ್ಣ ರತ್ನ' ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇವರು ಹಿಗಾಗಲೇ ಹತ್ತಾರು ಸಂಘ ಸಂಸ್ಥೆಗಳಿಂದ ಸಮಾಜ ರತ್ನ, ಮುಕ್ತಿ ರತ್ನ ಮುಂತಾದ ಬಿರುದುಗಳು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
        ದಿನಾಂಕ 20:07:2012 ರಂಧು ಬೆಂಗಳೂರು ಜೆ.ಸಿ. ರಸ್ತೆಯ ಕನ್ನಡ ಭವನದಲ್ಲಿ  ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ಮಾಲತಿ ಸುಧೀರ್ರವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದ್ದಾರೆ.