ತೆಕ್ಕಟ್ಟೆ ರೋಟರಿಯಿಂದ ಶಾಲೆಗೆ ಊಟದ ತಟ್ಟೆ ವಿತರಣೆ

 ದುಡಿದ ಸಂಪಾದನೆಯಲ್ಲಿ ಸ್ವಲ್ಪ ಭಾಗವನ್ನು ಬಡವರಿಗೆ ಹಂಚುವ ಮೂಲಕ ಜೀವನದಲ್ಲಿ ಸಾರ್ಥಕತೆ ಕಾಣಬೇಕೆಂದು ಸ್ಫೂರ್ತಿಧಾಮದ ಕೇಶವ ಕೋಟೇಶ್ವರ ಹೇಳಿದರು. ಅವರು ತೆಕ್ಕಟ್ಟೆ ರೋಟರಿ ಕ್ಲಬ್ ವತಿಯಿಂದ ನೂಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಊಟದ ತಟ್ಟೆ ಕೊಡುಗೆಯಾಗಿ ನೀಡುವ ಸಮಾರಂಭದ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡುತ್ತಿದ್ದರು.
ದಾನಿಗಳಾದ ತೆಕ್ಕಟ್ಟೆ ದುಗರ್ಾಪರಮೇಶ್ವರಿ ಕಲ್ಯಾಣ ಮಂಟಪದ ವ್ಯವಸ್ಥಾಪಕ ಶ್ರೀ ನಿತ್ಯಾನಂದ ಗಾಣಿಗರು ತಟ್ಟೆಯನ್ನು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ದಾನಿಗಳಾದ ನಿತ್ಯಾನಂದರನ್ನು ಗೌರವಿಸಲಾಯಿತು.
               ಶಾಲಾ ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷರಾದ ಶಂಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ತೆಕ್ಕಟ್ಟೆ ಇದರ ಅಧ್ಯಕ್ಷ ಸುಧಾಕರ ಶೆಟ್ಟಿ, ಕಾರ್ಯದಶರ್ಿ ಚಂದ್ರಶೇಖರ ಶೆಟ್ಟಿ, ಜಿಲ್ಲಾ ರೋಟರಿ ಸದಸ್ಯ ವಿಶ್ವನಾಥ ಹೆಗ್ಡೆ, ಕೆದೂರು ಸತೀಶ್ ಶೆಟ್ಟಿ, ವಿಜಯ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾದ್ಯಾಯ ಶಂಕರ್ ಮಾಸ್ತರ್ ಸ್ವಾಗತಿಸಿ, ಗಣಪತಿ ಮಂಜರು ವಂದಿಸಿದರು.

ನಿಮ್ಮ ಪ್ರತಿಕ್ರಿಯೆ ಬರೆಯಿರಿ ಕುಂದಾಪ್ರ.ಕಾಂ> editor@kundapra.com