ಶೆಟ್ಟರ್ ಅಂಗಡಿಲಿ ಚೌಕಾಸಿ, ತಟ್ಟಿತು ಕುಂದಾಪ್ರಕ್ಕೂ ಬಿಸಿ

                                   ಕುರ್ಚಿಗಿನ್ನು ಕಿತ್ತಾಟ, ಕೇಳುವರ್ಯಾರು ಶ್ರೀಸಾಮಾನ್ಯರ ಸಂಕಟ?


"ಯಾರೇ ಕೂಗಾಡಲಿ ಊರೇ ಹೋರಾಡಲಿ, ನನ್ನ ನೆಮ್ಮದಿಗೆ ಭಂಗವಿಲ್ಲ"
  ನಮ್ಮ ರಾಜ್ಯದ ರಾಜಕೀಯ ಸ್ಥಿತ್ಯಂತರಗಳನ್ನು, ಕಿತ್ತಾಟಗಳನ್ನು ನೋಡಿದವರಿಗೆ ಈ ಹಾಡು ನೆನಪಾಗಿರಬಹುದು.
ಹೌದು. ಸರಿಯಾದ ಮಳೆ-ಬೆಳೆ ಇಲ್ಲದೆ ನೀರು, ವಿದ್ಯುತ್ತಿಗಾಗಿ ಪರಿತಪಿಸುತ್ತಿರುವ ರೈತ, ಬರಗಾಲ, ಭ್ರಷ್ಟಾಚಾರ, ಕಷ್ಟ-ನಷ್ಟಗಳಿಂದ ಕಂಗಾಲಾಗಿರುವ ಶ್ರಿಸಾಮಾನ್ಯ. ಇದ್ಯಾವುದರ ಗೋಡವೆಯೇ ಇಲ್ಲದೆ ಕಿತ್ತಾಡುತ್ತಿರುವ ನಮ್ಮ ನಾಯಕರು. ಇದು ನಮ್ಮ ರಾಜ್ಯದ ದುಸ್ಛಿತಿ. 

       ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ಹಗರಣ, ಗೌಜು, ಗಲಾಟೆಯಿಂದಲೆ ಸುದ್ದಿಮಾಡುತ್ತಿದೆ. ಅಭಿವೃದ್ಧಿ ಕೆಲಸಗಳಿಗಿಂತ ಹೆಚ್ಚಾಗಿ ಹಗರಣಗಳಲ್ಲಿ ಭಾಗಿಯಾಗುವುದು, ಕ್ಷಮೆ ಕೇಳುವುದು ಮತ್ತೆ ಉತ್ತಮ ಆಡಳಿತ ನಿಡುವುದಾಗಿ ಆಶ್ವಾಸನೆ ನಿಡುವುದು ಮತ್ತದೇ ತಪ್ಪನೇಸಗುವುದು ಇದರಲ್ಲಿಯೇ ಕಾಲಕಳೆಯುತ್ತಿದೆ. ಜಾತಿ ರಾಜಕಾರಣ, ಬಣ  ರಾಜಕಾರಣ ಇವುಗಳಲ್ಲಿಯೇ ಮುಳುಗಿರು ಸರಕಾರ ಜನಸಾಮಾನ್ಯರ ನೋವುಗಳಿಗೆ ಸ್ವಂದಿಸುವುದು ಯಾವಾಗ ಎಂಬುದು ಯಕ್ಷ ಪ್ರಶ್ನೆಯಾಗಿದೆ.

         ಗದ್ದಲಗಳ ನಡುವೆಯೆ ಅಸ್ತಿತ್ವಕ್ಕೆ ಬಂದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೆತೃತ್ವದ ಸರಕಾರ ಈ ಭಾರಿ ಸಂಪುಟದಲ್ಲಿ ಪ್ರಾಮಾಣಿಕರಿಗೆ ಮಣೆ ಹಾಕದೇ ಕಳಂಕಿತರನ್ನು ಉಳಿಸಿಕೊಂಡು ಮತ್ತಷ್ಟು ಗುದಾಟಗಳಿಗೆ ಎಡೆಮಾಡಿಕೊಟ್ಟಿದೆ. ಭಿನ್ನಮತವೆಂಬುದು ಸಹಜವೆ ಎಂಬಂತೆ ಮರುಕಳಿಸಿದೆಯಾದರೂ ಈ ಬಾರಿ ಅದರ ಬಿಸಿ ಕರಾವಳಿ ಭಾಗಕ್ಕೂ ತಟ್ಟಿದೆ.
'ಕುಂದಾಪುರದ ವಾಜಪೇಯಿ' ಎಂದೇ ಪ್ರಸಿದ್ದಿ ಪಡೆದಿರುವ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಹೇಳಿ ಕೊನೆ ಗಳಿಗೆಯಲ್ಲಿ ನಿಲುವು ಬದಲಿಸಿದ್ದುನ್ನು ಕುಂದಾಪುರದ ಜನತೆಗೆ ಮಾಡಲಾಗಿರುವ ಅನ್ಯಾಯವೆಂದು ಜನ ಆಕ್ರೋಶಗೊಂಡಿದ್ದಾರೆ.

          ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಬರುವಂತೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಕರೆ ಮಾಡಿದರು. ಆಗ ಈ ವಿಷಯವನ್ನು ನಾನು ನನ್ನ ಸಹೋದ್ಯೋಗಿಗಳ ಗಮನಕ್ಕೆ ತಂದೆ. ಶೆಟ್ಟಿ ಅವರೇ ತಮ್ಮ ಆಯ್ಕೆಯಾದ ಕಾರಣ ಈ ಆಹ್ವಾನವನ್ನು ಒಪ್ಪಿಕೊಳ್ಳಬಾರದು ಎಂದು ಅವರೆಲ್ಲ ಸೂಚಿಸಿದರು. ಈ ಕಾರಣದಿಂದ ನಾನು ರಾಜಭವನಕ್ಕೆ ಹೋಗದಿರಲು ನಿರ್ಧರಿಸಿದ್ದೆ. ನಂತರ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದ ಕೆ.ಎಸ್.ಈಶ್ವರಪ್ಪ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಕೂಡ ಕರೆಮಾಡಿ ತಕ್ಷಣ ಬರುವಂತೆ ಸೂಚಿಸಿದರು. ಆಗಲೂ ಹೋಗದಿದ್ದರೆ ಪಕ್ಷದ ವಿರುದ್ಧ ನಡೆದಂತಾಗುತ್ತದೆ ಎಂದು ನಾನು ತೀರ್ಮಾನಿಸಿದೆ. ಕೊನೆ ಕ್ಷಣದಲ್ಲಿ ಪಕ್ಷದ ಮುಖಂಡರು ನಿರ್ಧಾರ ಬದಲಿಸಿರುವುದರಿಂದ ತಮಗೆ ಅವಮಾನವಾಗಿದೆ ಎಂದಿರುವ ಶ್ರೀನಿವಾಸ ಶೆಟ್ಟಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದಾರೆ. ಪ್ರಮಾಣವಚನ ಸ್ವೀಕಾರಕ್ಕೆ ಬೆಂಗಳೂರಿಗೆ ಆಹ್ವಾನಿಸಿ, ಅಂತಿಮ ಗಳಿಗೆಯಲ್ಲಿ ಸಚಿವ ಸ್ಥಾನ ನಿರಾಕರಿಸುವ ಮೂಲಕ ಅವಮಾನ ಮಾಡಲಾಗಿದೆ ಎಂದು ಅವರು ಬೇಸರಗೊಂಡಿದ್ದಾರೆ. 

      ಮೂರು ಬಾರಿ ಆಯ್ಕೆಯಾಗಿರುವ ಸರಳ ಸಜ್ಜನಿಕೆಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಪ್ರಮಾಣ ವಚನಕ್ಕೆಂದು ಕರೆಯಿಸಿ ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿಸಿ ಅಪಮಾನ ಮಾಡಿದ ಬಿಜೆಪಿ ಮುಖಂಡರ ನಿಲುವನ್ನು ಖಂಡಿಸಿ ಶಾಸಕ ಹಾಲಾಡಿಯವರ ಅಭಿಮಾನಿಗಳು ಶುಕ್ರವಾರ ಕುಂದಾಪುರ ತಾಲ್ಲೂಕು ಬಂದ್‌ಗೆ ಕರೆ ನೀಡಿದ್ದರು

     ಸಚಿವ ಸ್ಥಾನವನ್ನು ವಂಚಿಸಲಾಗಿದೆಯಂತೆ ಎನ್ನುವ ಸುದ್ದಿಗಳು ವ್ಯಾಪಕವಾಗಿ ಕ್ಷೇತ್ರಾದ್ಯಾಂತ ಪ್ರಚಾರವಾಗುತ್ತಿದ್ದಂತೆ ಪ್ರತಿಭಟನೆಯ ಕಾವು ಹೆಚ್ಚಾಗ ತೊಡಗಿದೆ. ತಾಲೂಕಿನ ಮೂಲೆ ಮೂಲೆಯಿಂದ ಬಂದ ಅಭಿಮಾನಿಗಳು ಟಯರ್‌ಗಳಿಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗಿದೆ. ಕುಂದಾಪುರ ನಗರದ ಮುಖ್ಯರಸ್ತೆಯಲ್ಲಿ ಘೋಷಣೆಯನ್ನು ಕೂಗುತ್ತಾ ಸಾಗಿದ ಬಿಜೆಪಿ ಕಾರ್ಯಕರ್ತರು ವಂಚನೆ ನಡೆಸಿದವರ ವಿರುದ್ಧ ಘೋಷಣೆ ಕೂಗಿದರು. ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. 

    ಉಡುಪಿ ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಹೆಗ್ಡೆ, ತಾ.ಪಂ. ಅಧ್ಯಕ್ಷ ಬೆಳ್ಳಾಡಿ ಶಂಕರ ಶೆಟ್ಟಿ, ಕುಂದಾಪುರ ಪುರಸಭೆ ಅಧ್ಯಕ್ಷ ಕೆ.ಮೋಹನದಾಸ ಶೆಣೈ, ಪುರಸಭೆ ಸದಸ್ಯ ನಾಗರಾಜ ಕಾಂಚನ್, ಜಿ.ಪಂ. ಸದಸ್ಯ ಗಣಪತಿ ಟಿ.ಶ್ರೇಯಾನ್, ಕುಂದಾಪುರ ಕ್ಷೇತ್ರ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್ ಕಾವೇರಿ, ಕ್ಷೇತ್ರ ಬಿಜೆಪಿ ಕಾರ್ಯದರ್ಶಿ ಶರಶ್ಚಂದ್ರ ಶೆಟ್ಟಿ, ಕುಂದಾಪುರ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮಂಜು ಬಿಲ್ಲವ, ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ಬಜರಂಗದಳ ಮುಖಂಡ ಗಿರೀಶ್ ಕುಂದಾಪುರ, ಪುರಸಭೆ ಸದಸ್ಯರು,  ಜಯ ಕರ್ನಾಟಕ, ಬಜರಂಗ ದಳ ಕಾರ್ಯಕರ್ತರು, ಆಟೋರಿಕ್ಷಾ ಚಾಲಕರು, ಮೀನುಗಾರರು, ಮೀನು ವ್ಯಾಪಾರಿ ಮಹಿಳೆಯರು,  ಸ್ವಸಹಾಯ ಸಂಘದ ಮಹಿಳೆಯರು  ಸೇರಿದಂತೆ ನಾನಾ ಸಂಘಟನೆಯ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

         ಶಿರೂರು, ಬೈಂದೂರು, ಉಪ್ಪ್ಪುಂದ,  ಕುಂದಾಪುರ, ಕೋಟೇಶ್ವರ, ಕುಂಭಾಸಿ, ಬೀಜಾಡಿ, ಕೋಟ, ವಂಡ್ಸೆ, ನೇರಳಕಟ್ಟೆ, ಆಜ್ರಿ, ಸಿದ್ಧಾಪುರ, ಹೊಸಂಗಡಿ, ಶಂಕರನಾರಾಯಣ, ಹಾಲಾಡಿ, ಬೆಳ್ವೆ, ಗೋಳಿಯಂಗಡಿ, ಬಿದ್ಕಲ್‌ಕಟ್ಟೆ, ಮೊಳಹಳ್ಳಿ, ಸಾಬರಕಟ್ಟೆ,  ಮೊದಲಾದೆಡೆ ಸಂಪೂರ್ಣ ಬಂದ್ ಆಚರಿಸಿದರು 

       ಶನಿವಾರ ಬೆಳಗ್ಗೆ ಬೆಂಗಳೂರಿನಿಂದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮನೆಗೆ ಬರುತ್ತಿರುವಂತೆಯೇ ಸಹಸ್ರಾರು ಅಭಿಮಾನಿಗಳು ಜಮಾಯಿಸಿ, ಧೈರ್ಯ ತುಂಬಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶನಿವಾರ ಅವರು, ಮಂತ್ರಿಗಿರಿಗೆ ಯಾವತ್ತೂ ಆಸೆ ಪಟ್ಟವನಲ್ಲ. ಜಾತಿ, ಬಣ ರಾಜಕೀಯ ಮಾಡಿದವನಲ್ಲ. ಸಚಿವ ಪದವಿ ಸಿಗದ ಕಾರಣ ರಾಜೀ ನಾಮೆ ನೀಡುತ್ತಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಜು.16ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ.  ಕ್ಷೇತ್ರದ ಜನರಿ ಗಾಗಿ ಅವಮಾನದಿಂದ ನೊಂದು ಈ ನಿರ್ಧಾರ ಮಾಡಿದ್ದೇನೆ. ನಾನು ಕಲ್ಲಡ್ಕರ ಮನೆಗೆ ಇದುವರೆಗೆ ಕಾಲಿಟ್ಟಿಲ್ಲ. ಯಡಿಯೂರಪ್ಪ, ಈಶ್ವರಪ್ಪ, ಸದಾನಂದ ಗೌಡರ ಆಶೀರ್ವಾದವನ್ನು ಎಂದೂ ಬೇಡಿಲ್ಲ ಎಂದರು.
ಕೋಟ ಶ್ರೀನಿವಾಸ ಪೂಜಾರಿ ಒಳ್ಳೆಯ ಸ್ನೇಹಿತರು. ಅವರಿಗೆ ಮಂತ್ರಿ ಪದವಿ ಸಿಕ್ಕಿದ್ದು ಖುಷಿಯಾಗಿದೆ. ಅವರ ನಮ್ಮ ನಡುವೆ ಯಾವುದೇ ಭಿನ್ನಮತ ಇಲ್ಲ. . ನನಗಾದ ಅವಮಾನಕ್ಕೆ ಅವರು ಹೊಣೆಯಲ್ಲ ಎಂದ ಶ್ರೀನಿವಾಸ ಶೆಟ್ಟ, ರಾಜಕೀಯ ಜೀವನದಲ್ಲಿ ನಾನೆಂದೂ ಸ್ವಜಾತಿ, ಧರ್ಮ ಎಂದು ರಾಜಕೀಯ ಮಾಡಿಲ್ಲ. ಎಲ್ಲಾ ಜಾತಿ, ಮತಗಳು ಒಂದೇ ಎಂದು ನಾನು ನಂಬಿದ್ದೇನೆ. 1987ರಲ್ಲಿ ನಾನು ವಿದ್ಯಾರ್ಥಿ ನಾಯಕನಾಗಿದ್ದೆ. ಆಗಲೇ ನಾನು ಕೆಲವರ ಪರವಾಗಿ ಚುನಾವಣೆಯಲ್ಲಿ ಓಡಾಡಿದ್ದೆ, ನನ್ನ ಮೊದಲ ಓಟು ಚಲಾಯಿಸಿದ್ದು ಕಮ್ಯುನಿಸ್ಟ್ ಪಕ್ಷಕ್ಕೆ.  ಶಾಸಕನಾಗಿ ಜನಹಿತ ಕೆಲಸ ಮಾಡಿದ್ದೇನೆ. ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯದಲ್ಲಿ ಭಾಗಿಯಾದವನಲ್ಲ. ಅಂತಹುದರಲ್ಲಿ ನಾನು ಮಂತ್ರಿಗಿರಿಗೆ ಅಪೇಕ್ಷೆಪಡುತ್ತೇನೆಂಬುವುದು ಅರ್ಥವಿಲ್ಲದ ಮಾತು. ಎ.ಜಿ.ಕೊಡ್ಗಿ, ಡಿ.ವಿ.ಸದಾನಂದ ಗೌಡರು ನೀವು ಮಂತ್ರಿಯಾಗಬೇಕೆಂದು ಮನವಿ ಮಾಡಿಕೊಂಡರು. ಅವರ ಅಣತಿಯ ಮೇರೆಗೆ ರಾಜಭವನ ತಲುಪಿದ್ದೆ ಎಂದು ಹೇಳಿದರು. 
           ಒಟ್ಟಿನಲ್ಲಿ ಸರಕಾರದ ನಿಲುವು ಕುಂದಾಪುರದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ