ಮುಜರಾಯಿ ಇಲಾಖೆಯ ಜವಾಬ್ದಾರಿ ಕೋಟ ಶ್ರೀನಿವಾಸ್ ಪೂಜಾರಿಗೆಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಎರಡು ದಿನಗಳಲ್ಲಿ ಎಲ್ಲ ಖಾತೆಗಳನ್ನು ಹಂಚಿ ಮೊದಲ ಹಂತದ ಕೆಲಸವನ್ನು ಜಗದೀಶ್ ಶೆಟ್ಟರ್ ಅವರು ಸುಗಮವಾಗಿ ಪೂರೈಸಿದ್ದಾರೆ. ಹಿರಿಯ ಮುತ್ಸದ್ದಿ ವಿ.ಎಸ್. ಆಚಾರ್ಯ ಅವರ ಅಕಾಲಿಕ ಮರಣದಿಂದ ತೆರವಾಗಿದ್ದ ಉಡುಪಿ ಜಿಲ್ಲಾ ಉಸ್ತುವಾರಿಯ ಸ್ಥಾನವನ್ನು  ಕೋಟ ಶ್ರೀನಿವಾಸ್ ಪೂಜಾರಿ ಅವರ ಪಾಲಾಗಿದೆ. ಇದರ ಜೊತೆಗೆ ಮುಜರಾಯಿ ಇಲಾಖೆಯ ಜವಾಬ್ದಾರಿ ಸಹ ಅವರ ಪಾಲಿಗೆ ಬಂದಿದೆ.