ರಸ್ತೆಗಿಲ್ಲದ ಕಾಯಕಲ್ಪ; ಕಿಡಿಗೇಡಿಗಳಿಂದ ರಸ್ತೆ ಸಮೀಪದ ಮರಗಳ ಮಾರಣಹೋಮ...!

 ಕುಂದಾಪುರ: ಇದೋಂದು ಕುಗ್ರಾಮ, ನಕ್ಸಲ್ ಪೀಡಿತ ಪ್ರದೇಶವೆಂಬ ಹಣೆಪಟ್ಟಿ ಸಹ ಹೊಂದಿದೆ.ಗ್ರಾಮದಲ್ಲಿ ಅಭಿವ್ರದ್ದಿ ಮಾತ್ರ ಕುಂಟಿತ. ಕಳೆದ ಕೆಲ ವರ್ಷಗಳಿಂದ ಇಲ್ಲಿನ ಜನ ಮುದೂರು -ಶಳ್ಕೋಡು ಮಾರ್ಗ ಕಲ್ಪಿಸುವ ಹದಗೆಟ್ಟ ರಸ್ತೆ ಸುದಾರಣೆಗೆ ಬೇಡಿಕೆ ಇಟ್ಟಿದ್ದರು.ರಸ್ತೆಯ ವಿಸ್ತರಣೆಯ ಯೋಜನೆಗೆ ಸಕರ್ಾರದಿಂದ ಅನುಮೋದನೆ ದೊರೆಕಿತ್ತು.ಆದ್ರೆ ರಸ್ತೆ ಸಮೀಪ ದಟ್ಟಾರಣ್ಯ ಪ್ರದೇಶವಾದ್ದರಿಂದ ಮರಗಳ ಕಡಿಯುವಿಕೆ ಆಗಬೇಕಾದ್ದರಿಂದ ಅರಣ್ಯ ಇಲಾಖೆ ರಸ್ತೆ ಅಗಲೀಕರಣಕ್ಕೆ ಅನುಮತಿ ಕೊಟ್ಟಿರಲಿಲ್ಲ.  ಇದರಿಂದ ರೋಸಿಯೋ ಅಥವ ಯಾರದೋ ಆಮಿಷಕ್ಕೋ ಒಳಗಾದ  ಸುಮಾರು 100 ಕ್ಕೂ ಹೆಚ್ಚು ಜನರ ತಂಡವೊಂದು ಶನಿವಾರ ತಡ ರಾತ್ರಿ  ರಸ್ತೆ ನಿಮರ್ಾಣಕ್ಕೆ ಅಡ್ಡಗಾಲು ಹಾಕುತ್ತಿರುವ ರಸ್ತೆ ಸಮೀಪದ ಮರಗಳ ಮಾರಣ ಹೋಮಕ್ಕೆ ಮುಂದಾದ ವಿಚಿತ್ರ  ಕ್ರತ್ಯ  ಕುಂದಾಪುರದ ಕೊಲ್ಲೂರು ಸಮೀಪದ ಜಡ್ಕಲ್ ಗ್ರಾಮದ ಬಳಿಯ ಶಳ್ಕೋಡು ಹುಲಿಪಾರಿ ಎಂಬಲ್ಲಿ ನಡೆದಿದೆ.

* ಆಕ್ರೋಷಿತರಿಂದ 3-4 ಕಿ.ಮೀ. ವ್ಯಾಪ್ತಿಯ ರಸ್ತೆ ಸಮೀಪದ 156 ಮರಗಳು ಧರೆಗೆ...

           ಶನಿವಾರ ತಡ ರಾತ್ರಿ 10 ರಿಂದ 12 ಗಂಟೆ ಒಳಗಾಗಿ ಶಳ್ಕೋಡು ಹುಲಿಪಾರಿ ಪ್ರದೇಶದಿಂದ ಮುದೂರು ಮೈದಾನ ಪ್ರದೇಶದವರೆಗೆ ವನ್ಯ ಜೀವಿ ಘಟಕದ ವ್ಯಾಪ್ತಿಯಲ್ಲಿ ಬರುವ  ಸುಮಾರು 3-4 ಕಿ.ಮೀ. ವ್ಯಾಪ್ತಿಯ ರಸ್ತೆ ಸಮೀಪದ 150 ಕ್ಕೂ ಹೆಚ್ಚು ಮರಗಳನ್ನು ಯಾಂತ್ರಿಕ್ರತ ಗರಗಸದ(ಇಲೆಕ್ಟ್ರಿಕಲ್ ಸ್ವಾ ಮಿಷನ್) ಮೂಲಕ ಮರಗಳ ಮಾರಣ ಹೋಮ ಕಾರ್ಯಕ್ಕೆ ಮುಂದಾಗಿದ್ದಾರೆ.ಅವರೆಲ್ಲರ ಈ ದುಷ್ಕ್ರತ್ಯಕ್ಕೆ ಮರಗಳು ರಸ್ತೆ ಮೇಲೆಯೇ ಉರುಳಿದ್ದು  ಇದರಿಂದ ಸ್ಥಳದಲ್ಲಿ ಬಸ್ ಮತ್ತು ವಾಹನ ಸಂಚಾರ ಸ್ಥಗಿತಗೊಂಡಿದೆ ಅಲ್ಲದೇ ವಿದ್ಯುತ್ ಕಂಬಗಳು ಮುರಿದು ಬಿದ್ದು ವಿದ್ಯುತ್ ಸಂಚಾರ ವ್ಯತ್ಯಯವಾಗಿದೆ.
ರಸ್ತೆ ದುರವಸ್ತೆ:  ಸುಮಾರು 60 ವರ್ಷ ಹಳೆಯದಾದ ಶಳ್ಕೋಡು-ಮುದೂರು ರಸ್ತೆಗೆ ಐ.ಎಮ್.ಜಯರಾಮಶೆಟ್ಟಿ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಡಾಂಭರೀಕರಣ ಮಾಡಲಾಗಿದ್ದು,ಅಂದಿನಿಂದ ಇಂದಿನವರೆಗೂ ಯಾವುದೇ ತೇಪೆ ಹಾಕುವ ಕಾರ್ಯಗಳಾಗಲೀ ಅಭಿವ್ರದ್ದಿ ಕಾರ್ಯಗಳಾಗಲೀ ನಡೆದಿಲ್ಲ.ಅತ್ಯಂತ ಕಿರಿದಾದ ರಸ್ತೆ ಇದಾಗಿದ್ದು ಮಳೆಗಾಲದ ಸಂದರ್ಭದಲ್ಲಿ ವಿದ್ಯುತ್ ಸಮಸ್ಯೆ ಸೇರಿದಂತೆ ಸಂಚಾರದ ಅವ್ಯವಸ್ಥೆಗಳು ನಡೆಯುತ್ತಿದೆ.ಸುಮಾರು 25 ವರ್ಷದ ಹಿಂದೊಮ್ಮೆ ಇದೇ ಮಾದರಿಯ ಕ್ರತ್ಯ ನಡೆದಿತ್ತು ಮತ್ತು 2009 ರಲ್ಲಿ ಇಲ್ಲಿಗೆ ಸಮೀಪದ ಕುಂದಲುಬೈಲು ಪ್ರದೇಶದಲ್ಲಿ ಇದೇ ಮಾದರಿ ಕುಕ್ರತ್ಯ ನಡೆದಿತ್ತು ಎಂದು ಸ್ಥಳಿಯ ನಾಗರೀಕರು ವರದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. 

* ತೆರವುಗೊಳಿಸದ ಮರಗಳು, ರಸ್ತೆ ಸಂಚಾರ ಅಸ್ಥವ್ಯಸ್ಥ.

   ಅರಣ್ಯ ಇಲಾಖೆಗೆ ಹತ್ತಿರ:  ಘಟನೆ ನಡೆದ ಮುದೂರು ಮೈದಾನ ಪ್ರದೇಶ ಅರಣ್ಯ ಇಲಾಖೆ ಆಪೀಸ್ಗೆ ಸುಮಾರು ಅರ್ಧ ಕಿ,ಮೀ ಹತ್ತಿರವೇ ಇದ್ದು ಇಷ್ಟು ದೊಡ್ಡ ಘಟನೆ ನಡೆಯುವುದು ಯಾರ ಗಮನಕ್ಕೂ ಬಾರದೇ ಹೊದುದು ಮಾತ್ರ ದುರದ್ರಷ್ಟಕರ ಸಂಗತಿ.
ಅಪಾರ ವನ್ಯ ಸಂಪತ್ತು ನಾಶ:  ದುಷ್ಕಮರ್ಿಗಳ ಅಟ್ಟಹಾಸಕ್ಕೆ ಸಿಲುಕಿ 156 ಮರಗಳು ದರೆಗುರುಳಿದ್ದು ಇವುಗಳೆಲ್ಲದರ ಮೌಲ್ಯ ಸುಮಾರು 50 ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ. ಮರಗಳು ಅನಾಥವಾಗಿ ದರೆಗುರುಳಿರುವ ದ್ರಶ್ಯ ಪರಿಸರ ಪ್ರೇಮಿಗಳ ಮನಕಲಕುವಂತಿದೆ.


* ಗ್ರಾಮದಲ್ಲಿ ವಿದ್ಯುತ್ ಸಂಚಾರ ಅಸ್ತವ್ಯಸ್ಥ...
            
ದುಷ್ಕಮರ್ಿಗಳಿಂದ ಕರ್ತವ್ಯಕ್ಕೆ ಅಡ್ಡಿ:  ಅಕ್ರೋಷಿತ ದುಷ್ಕಮರ್ಿಗಳು ತಮ್ಮ ಈ ದುಷ್ಕ್ರತ್ಯಕ್ಕೆ ಅಧಿಕಾರಿಗಳ ಮೇಲೂ ಹಲ್ಲೆ ನಡೆಸಿದ್ದಾರೆ.ರಾತ್ರಿ ಸಮಯದಲ್ಲಿ ಗಸ್ತು ತಿರುಗುತ್ತಿದ್ದ ಉಪವಲಯ ಅರಣ್ಯ ಅಧಿಕಾರಿ ರೂಪೇಶ್ ಚೌಹಾಣ್ ಸೇರಿದಂತೆ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೇ ಅವ್ಯಾಚ ಶಬ್ದಗಳಿಂದ ನಿಂದಿಸದ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರೂಪೇಶ್ ಚೌಹಾಣ್ ಅವರು ನೀಡಿದ ದೂರಿನಂತೆ ಉದಯ ನಗರ ನಿವಾಸಿಗಳಾದ ಶಿಬು ಕುರಿಯನ್, ಕಾಟೆಯತ್ ವಿನೀಲ್, ಮೇಲ್ ಬೈಜು, ಹಾಗೂ ನವೀನ್ ಬೆಳ್ಕಲ್ ಇವರನ್ನೊಳಗೊಂಡಂತೆ 45 ಮಂದಿಯನ್ನು ಆರೋಪಿಗಳೆಂದು ಗುರುತಿಸಲಾಗಿದೆ. ಉಳಿದವರ ಬಂದನಕ್ಕಾಗಿ ವಿಚಾರಣೆ ನಡೆಯುತ್ತಿದೆ. 

* ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ, ಪರಿಶೀಲನೆ...

ಅಧಿಕಾರಿಗಳ ಭೇಟಿ:  ರಾತ್ರಿಯೇ ಸ್ಥಳಕ್ಕೆ ಕೊಲ್ಲೂರು ಠಾಣಾ ಉಪನಿರೀಕ್ಷಕ ದೇಜಪ್ಪ, ಕುಂದಾಪುರ ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಶೆಟ್ಟಿ, ಉಪವಲಯ ಅರಣ್ಯಾಧಿಕಾರಿ ಕರುಣಾಕರ ಆಚಾರ್ಯ,ಮತ್ತು ಸಿಬ್ಬಂದಿಗಳು ಭೇಟಿ ನೀಡಿದ್ದರು.ಮತ್ತು ಕುಂದಾಪುರ ಡಿ.ವೈ.ಎಸ್.ಪಿ. ಶೇಖರ್ ಅಗಡಿ, ವ್ರತ್ತ ನಿರೀಕ್ಷಕ ಮದನ ಗಾವಂಕರ್, ವನ್ಯಜೀವಿ ವಿಭಾಗದ ಸಂರಕ್ಷಣಾಧಿಕಾರಿ ಸತೀಶ್ ಬಾಬಾ ರೈ, ವನ್ಯಜೀವಿ ಅರಣ್ಯ ಅಧಿಕಾರಿ ಅಸ್ಟಿನ್ ಪಿ. ಸೋನ್ಸ್ ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣೇಶ್,  ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕುದುರೇಮುಖ ವನ್ಯ ಜೀವಿ ಉಪ ವಿಭಾಗ ಕುಂದಾಪುರದ ಸತೀಶ್ ಬಾಬುರಾಯ್ ಮೊದಲಾದವರು ಭೇಟಿ ನೀಡಿದ್ದರು.`` ದರೆಗುರುಳಿದ ಮರಗಳು ಸಂಚಾರಕ್ಕೆ 
ತೊಡಕ್ಕಾಗುತ್ತಿದೆ.ಆದರೆ ತನಿಖೆಯ
                          ನಂತರವಷ್ಟೇ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ''
- ಕರುಣಾಕರ ಆಚಾರ್ಯ
                                    (ಉಪವಲಯ ಅರಣ್ಯಾಧಿಕಾರಿ, ಮುದೂರು ಗ್ರಾಮ)


ಚಿತ್ರ, ವರದಿ: ಯೋಗೀಶ್ ಕುಂಭಾಸಿ

 ನಿಮ್ಮ ಪ್ರತಿಕ್ರಿಯೆ ಬರೆಯಿರಿ ಕುಂದಾಪ್ರ.ಕಾಂ>