ರಾಜೀನಾಮೆ ನಿರ್ಧಾರ ಅಚಲ: ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ.
ಕುಂದಾಪುರ: ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೆತೃತ್ವದ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವುದಾಗಿ ಹೇಳಿ ಕೊನೆ ಗಳಿಗೆಯಲ್ಲಿ ನಿಲುವು ಬದಲಿಸಿ ಅವಮಾನ ಮಾಡಿರುವ ಬಗ್ಗೆ ಮನನೊಂದಿರುವ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಶಾಸಕ
ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಅವರ ಮನವೊಲಿಸುವ ಪ್ರಯತ್ನ
ಮುಂದುವರಿದ್ದು, ಅವರ ನಿವಾಸಕ್ಕೆ ಭಾರತೀಯ ಜನತಾ ಪಕ್ಷದ ನಾಯಕರು ಸೇರಿದಂತೆ
ವಿವಿಧ ಪಕ್ಷಗಳ ಗಣ್ಯರು, ಅಭಿಮಾನಿಗಳು ಭೇಟಿ ನೀಡಿದರು.
![]() | |||||||||||
ಬಿಜೆಪಿ ರಾಜ್ಯ ಉಪಾಧ್ಯಕ್ಷ ಭಾನುಪ್ರಕಾಶ್, ಬಿಜೆಪಿ ಜಿಲ್ಲಾಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಶಾಸಕ ರಘುಪತಿ ಭಟ್, ಮಾಜಿ ಶಾಸಕ ಸುನೀಲ್ ಕುಮಾರ್, ಜಿ.ಪಂ. ಮಾಜಿ ಸದಸ್ಯ ಶಂಕರ ಪೂಜಾರಿ, ಯಶಪಾಲ್ ಸುವರ್ಣ, ಕಿರಣ್ ಕುಮಾರ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಶಿವರಾಮ ಉಡುಪ ಭೇಟಿಯಾಗಿ ರಾಜೀನಾಮೆ ನಿರ್ಧಾವನ್ನು ಪುನರ್‌ವಿಮರ್ಶೆ ಮಾಡುವಂತೆ ಮನವೊಲಿಸಿದರು. ಇವರೊಂದಿಗೆ ಜೆಡಿಎಸ್ ಮುಖಂಡ ಯು ಆರ್ ಸಭಾಪತಿ, ಜೆಡಿಎಸ್ ಜಿಲ್ಲಾಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ, ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಬಲರಾಜ್ ರೈ, ಜಯಕರ್ನಾಟಕ ಸಂಘಟನೆಯ ಮುಖ್ಯಸ್ಥರು ಭೇಟಿ ನೀಡಿ ರಾಜಿನಾಮೆ ನಿರ್ಧಾರವನ್ನು ಬದಲಿಸುವಂತೆ ಮನವೊಲಿಸಿದ್ದರು.

ಹಾಲಾಡಿಯವರು ತನ್ನ ರಾಜಿನಾಮೆ
ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಬದಲಾಗಿ ತಮ್ಮ ವಿನಂತಿಯನ್ನು
ಪರಿಶೀಲಿಸುವುದಾಗಿ ಹೇಳಿದ್ದಾರೆ ಎಂದಷ್ಟೇ ಸುರೇಶ್ ಕುಮಾರ್
ತಿಳಿಸಿದ್ದಾರೆ. ಸಚಿವರ ಜೋತೆಗೆ ರಾಜ್ಯ ೩
ನೇ ಹಣಕಾಸು ಆಯೋಗ ಅನುಷ್ಠಾನದ ಅಧ್ಯಕ್ಷ ಎ ಜಿ ಕೋಡ್ಗಿ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ
ಸುನಿಲ್ ಕುಮಾರ್ ಭೇಟಿ ನೀಡಿದರು.
ಆದರೆ ತಮ್ಮ ರಾಜೀನಾಮೆ ನಿರ್ಧಾರ ಅಚಲ ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ
ತಿಳಿಸಿದ್ದಾರೆ.