``ಡ್ರಾಮಾ'' ಚಿತ್ರೀಕರಣ ತಂಡಕ್ಕೆ ಬೀಜಾಡಿ ಪಂಚಾಯತ್ನಿಂದ ಅಭಿನಂದನೆ

ಕುಂದಾಪುರ : ಕಳೆದ ಕೆಲವಾರು ದಿನಗಳಿಂದ ಕುಂದಾಪುರದ ಬೀಜಾಡಿ ಸನ್ ಫೀಸ್ಟ್ ರೆಸಾಟರ್್ ಪಕ್ಕದ ಸಮುದ್ರ ತೀರದಲ್ಲಿ ಚಲನಚಿತ್ರ ಚಿತ್ರೀಕರಣ ನಡೆಸುತ್ತಿರುವ 'ಡ್ರಾಮಾ' ಸಿನೆಮಾ ತಂಡವನ್ನು ದಿ.04-07-2012 ರಂದು ಬೀಜಾಡಿ ಗ್ರಾಮಸ್ಥರ ಪರವಾಗಿ ಬೀಜಾಡಿ ಗ್ರಾಮ ಪಂಚಾಯತ್ ವತಿಯಿಂದ ಅಭಿನಂದಿಸಲಾಯಿತು.

ಬೀಜಾಡಿ ಪರಿಸರದಲ್ಲಿ ಚಿತ್ರೀಕರಣ ಮುಗಿಸಿ ಬೇರೆಡೆ ಚಿತ್ರೀಕರಣಕ್ಕೆ ತೆರಳುತ್ತಿರುವ `ಡ್ರಾಮಾ' ಚಿತ್ರೀಕರಣ ತಂಡವನ್ನು ಚಲನಚಿತ್ರ ಚಿತ್ರೀಕರಣದ ಬಿಡುವಿನ ಸಂದರ್ಭ ಸ್ಥಳಕ್ಕೆ ತೆರಳಿದ ಬೀಜಾಡಿ ಗ್ರಾ.ಪಂ. ತಂಡ ಯೋಗರಾಜ್ ಭಟ್ ನೇತೃತ್ವದ ಚಿತ್ರೀಕರಣ ತಂಡವನ್ನು ಅಭಿನಂದಿಸಿ ಗೌರವ ಸಲ್ಲಿಸಿದರು.

ಸಮಾರಂಭದಲ್ಲಿ ನಿದರ್ೆಶಕ ಯೋಗರಾಜ್ ಭಟ್ , ನಿಮರ್ಾಪಕ ಜಯಣ್ಣ, ನಾಯಕ ನಟರಾದ ಯಶ್, ನಿನಾಸಂ ಸತೀಶ್, ನಟಿ ರಾಧಿಕಾ ಪಂಡಿತ್, ಖಳನಾಯಕ ಲೋಹಿತಾಶ್ವ ಅವರನ್ನು ಸನ್ಮಾನಿಸಲಾಯಿತು. ಗ್ರಾ.ಪಂ. ಉಪಾಧ್ಯಕ್ಷೆ ವೈಲೆಟ್ ಬೆರೆಟ್ಟೊ, ಗ್ರಾ.ಪಂ. ಸದಸ್ಯರು,ಮತ್ತು ಸಿಬ್ಬಂದಿಗಳು, ಸ್ಥಳೀಯ ಹಿರಿಯರಾದ ಶೇಷಗಿರಿ ಗೋಟ, ಶ್ರೀನಿವಾಸ ಕುಂದರ್, ತೆಕ್ಕಟ್ಟೆ ಫ್ರೆಂಡ್ಸ್ ಸಂಸ್ಥೆಯ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.ಬೀಜಾಡಿ ಪಂಚಾಯತ್ ಸದಸ್ಯ ರವೀಂದ್ರ ದೊಡ್ಮನೆ ಕಾರ್ಯಕ್ರಮ ನಿರ್ವಹಿಸಿ, ಸಂಯೋಜಿಸಿದರು.
ವರದಿ : ಯೋಗೀಶ್ ಕುಂಭಾಸಿ

ನಿಮ್ಮ ಪ್ರತಿಕ್ರಿಯೆ ಬರೆಯಿರಿ ಕುಂದಾಪ್ರ.ಕಾಂ> editor@kundapra.com