ಕೋಡಿಯಲ್ಲಿ ಮತ್ತೆ ಅಬ್ಬರಿಸುತಿದೆ ಕಡಲು ; ಕೇಳೋರ್ಯಾರು ಸ್ಥಳೀಯ ನಿವಾಸಿಗಳ ಗೋಳು...?

 ಕುಂದಾಪುರ: ಕರಾವಳಿ ಪ್ರದೇಶವಾದ ಕುಂದಾಪುರ ವಿನಾಯಕ ಕೋಡಿ ಜನರ ಪಾಲಿಗೆ ವರ್ಷಂಪ್ರತಿ ಬರುವ ಮಳೆಗಾಲ ಭಯದ ವಾತಾವರಣವನ್ನು ಸ್ರಷ್ಟಿ ಮಾಡುತ್ತಾ ಬಂದಿದೆ. ಪ್ರತಿ ವರ್ಷ ಮಳೆಗಾಲದಲ್ಲಿ  ವಾತಾವರಣದ ವೈಪರಿತ್ಯಕ್ಕೆ ಸಮುದ್ರದ ದೈತ್ಯ ಅಲೆಗಳ ರಭಸವನ್ನು ನೆನಸಿಕೊಂಡಾಗ ಜನರ ಎದೆಯಲಿ ನಡುಕ ಹುಟ್ಟದಿರದು. ಈ ಭಾರಿಯೂ ಕಡಲ್ಕೊರೆತ ಉಂಟಾಗಿದ್ದು ಇತ್ತೀಚಿನ ಒಂದು ವಾರದಲ್ಲಿ ಕಡಲು ಪ್ರಕ್ಷುಬ್ದಗೊಂಡಿದ್ದಲ್ಲದೇ 2-3 ಕಡೆಗಳಲ್ಲಿ ಭಾರಿ ಪ್ರಮಾಣದ ಕಡಲ್ಕೊರೆತ ಉಂಟಾಗಿದೆ. 

ಕೋಡಿಯ ಎಮ್-ಕೋಡಿ, ಮದ್ಯ ಕೋಡಿ, ಕೋಡಿ ತಲೆ(ಅಳಿವೆ) ಪ್ರದೇಶದಲ್ಲಿ ಕಡಲ್ಕೋರೆತದ ಸ್ಥಿತಿ.
   
 ಕೋಡಿಯ ಎಮ್-ಕೋಡಿ, ಮದ್ಯ ಕೋಡಿ, ಕೋಡಿ ತಲೆ(ಅಳಿವೆ) ಪ್ರದೇಶದಲ್ಲಿ ಕಡಲ್ಕೊರೆತದ ಸಮಸ್ಯೆ ಉಲ್ಬಣಿಸಿದ್ದು ಜನರು ಭಯದಲ್ಲಿ ದಿನ ದೂಡುವಂತಾಗಿದೆ. ಎಮ್-ಕೋಡಿ ಪ್ರದೇಶದಲ್ಲಿ ಈಗಾಗಲೇ ರಸ್ತೆಯವರೆಗೂ ನೀರು ಚಿಮ್ಮುತ್ತಿದ್ದು ಹಾಸಿರುವ ಬಂಡೆ ಕಲ್ಲುಗಳು ಜಾರಿ ನೀರು ಪಾಲಾಗುತ್ತಿದೆ. ಅಲ್ಲದೇ ನೆಲ ಪ್ರದೇಶ ಕುಸಿಯುತ್ತಿರುವುದು ಕಂಡು ಬರುತ್ತಿದೆ. ನೀರಿನ ಹೊಡೆತ ಜಾಸ್ಥಿಯಾದಲ್ಲಿ ರಸ್ತೆ ಮನೆಗಳಿಗೂ ನೀರು ನುಗ್ಗಬಹುದಾದ ಪರಿಸ್ಥಿತಿ ತಲೆದೋರಿದೆ. ಇನ್ನು ಮದ್ಯ ಕೋಡಿ ಪ್ರದೇಶದಲ್ಲಿ ಬಂಡೆ ಕಲ್ಲುಗಳು ನೀರು ಪಾಲಾಗಿದ್ದು ರಸ್ತೆಗೆ ನೀರು ಬರಲು 10-12 ಅಡಿಯಷ್ಟೇ ದೂರ ಇದೆ. ಈ ಎರಡು ಪ್ರದೇಶಗಳ ಸ್ಥಳಿಯ ಅಂಗಡಿ ಮಾಲೀಕರು ಹಾಗೂ ಮನೆಯವರು ಪರಿತಪಿಸುವಂತಾಗಿದೆ.ಅಲ್ಲದೇ ಸಂಪರ್ಕ ರಸ್ತೆ ಕೊಚ್ಚಿ ಹೋಗುವ ಭೀತಿ ಸ್ಥಳೀಯರಲ್ಲಿ ಮನೆಮಾಡಿದೆ.ಉಳಿದಂತೆ ಕೋಡಿ ತಲೆ ಪ್ರದೇಶದಲ್ಲಿ ಅಲೆಗಳ ಅಬ್ಬರ ಜಾಸ್ಥಿಯಾಗಿದೆ.
 ರಸ್ತೆ ಕೊಚ್ಚಿ ಹೋಗುವ ಭೀತಿಯಲ್ಲಿ ಸ್ಥಳಿಯರು.
 ಬೇಕಾಗಿದೆ ಶಾಶ್ವತ ಪರಿಹಾರ.
ಸ್ಥಳದಲ್ಲಿ ಕಡಲ್ಕೊರೆತದ ಸ್ಥಿತಿ ಗಂಭಿರವಾಗಿದ್ದು ಜನಪ್ರತಿನಿಧಿಗಳು, ಸಂಬಂದಪಟ್ಟ ಇಲಾಖೆ ಈ ಕೂಡಲೇ ಗಮನಹರಿಸಬೇಕು ಮತ್ತು ವರ್ಷಗಳಿಂದ ಆಶ್ವಾಸನೆ ನೀಡುತ್ತಾ ಬಂದಿರುವಂತೆ ಶಾಶ್ವತ ಪರಿಹಾರ ಕಾರ್ಯವನ್ನು ಕೈಗೊಂಡು ಜನರ ಸಂಕಷ್ಟ ಪರಿಹರಿಸಭೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.ಶಾಶ್ವತ ಪರಿಹಾರ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ  ಚುನಾವಣೆಯನ್ನು ಬಹಿಷ್ಕರಿಸುವುದಾಗಿಯು ಮಾತುಗಳು ಈ ಪ್ರದೇಶದ ಜನರಿಂದ ಕೇಳಿ ಬರುತ್ತಿದೆ.


 ತಡೆಗೋಡೆಗಾಗಿ ಹಾಸಲಾದ ಬಂಡೆಕಲ್ಲುಗಳು ನೀರು ಪಾಲು.
 `` ಪ್ರತಿ ವರ್ಷಗಳಿಂದ ಕಡಲ್ಕೊರೆತದಂತಹ ನೈಸರ್ಗಿಕ ವೈಪರಿತ್ಯ ಸಮಸ್ಯೆಗಳನ್ನು ಈ ಭಾಗದ ಜನರು ಅನುಭವಿಸುತ್ತಿದ್ದಾರೆ. ಆದ್ರೆ ಯಾರೊಬ್ಬ ಜನಪ್ರತಿನಿಧಿಗಳಿಂದಲೂ ಯಾವುದೇ ಶಾಶ್ವತ ಪರಿಹಾರವನ್ನು ನಿರೀಕ್ಷೆ ಮಾಡಲಾಗಿಲ್ಲ. ಎಲ್ಲರ ಆಶ್ವಾಸನೆಗಳು ಹುಸಿಯಾದವು. ಜನಪ್ರತಿನಿಧಿಗಳು ಬತರ್ಾರೆ, ಹೋಗ್ತಾರೆ ಸ್ಥಳ ಪರಿಶೀಲಿಸಿ ಶಾಶ್ವತ ತಡೆಗೋಡೆ ನಿರ್ಮಾಣದ ಭರವಸೆ ನೀಡುತ್ತಾರೆ ಆದ್ರೆ ಈವರೆಗೂ ಯಾವ ಪ್ರಯೋಜನವೂ ಆಗಿಲ್ಲ''
- ಗೌಫ್ ಕೋಡಿ (ಸ್ಥಳೀಯ ನಿವಾಸಿ)



 ಕಡಲು ಪ್ರಕ್ಷುಬ, ದೈತ್ಯ ಅಲೆಗಳು ದಡಕ್ಕಪ್ಪಳಿಸುತ್ತಿದ್ದು ತೀವ್ರ ಕಡಲ್ಕೊರೆತ ಉಂಟಾಗಿದೆ.
`` ಕಷ್ಟವಾಗ್ತಿದೆ ಸ್ವಾಮೀ ಆದ್ರೆ ನಮ್ಮ ಗೋಳು  ಯಾರ ಬಳಿ ಹೇಳೋದು ವರ್ಷ ವರ್ಷ ನೋಡಿ ಸಾಕಾಗಿ ಹೋಗಿದೆ. ಕಳೆದ ಬಾರಿ ಸಂಸದರು ಭೇಟಿ ನೀಡಿದ್ದ ಸಂದರ್ಭದಲ್ಲಿ ಸಮಸ್ಯೆ ಆಲಿಸಿದ ಅವರು ಕೇಂದ್ರ ಸಕರ್ಾರದಿಂದ ಶಾಶ್ವತ ಪರಿಹಾರಕ್ಕಾಗಿ ಅನುದಾನ ಒದಗಿಸುವ ಭರವಸೆ  ನೀಡಿದ್ದರು ಎಂದಿಗೆ ಅದರ ಕಾರ್ಯ ಆಗುತ್ತದೋ ಗೊತ್ತಿಲ್ಲ''
 - ಶೇಖರ (ಎಮ್-ಕೋಡಿ ನಿವಾಸಿ)
   





``ವರ್ಷಗಳಿಂದ ಕೋಡಿ ಜನರು ಸಂಕಷ್ಟವನ್ನು 
ಅನುಭವಿಸುತ್ತಿದ್ದಾರೆ, ಈ ಪ್ರದೇಶದಲ್ಲಿ ಕಳೆದ
 4-5 ದಿನಗಳಿಂದ ಕಡಲ್ಕೊರೆತ ಸಂಭವಿಸುತ್ತಿದೆ.
ಹೀಗೆ ಮುಂದುವರಿದಲ್ಲಿ ಮನೆ-ಅಂಗಡಿಗಳು 
ಜಲಾವ್ರತವಾಗಬಹುದು''
- ಮಹಮ್ಮದ್ ಭಾಷಾ (ಮದ್ಯ ಕೋಡಿ ನಿವಾಸಿ)
ಚಿತ್ರ, ವರದಿ: ಯೋಗೀಶ್ ಕುಂಭಾಸಿ.


ನಿಮ್ಮ ಪ್ರತಿಕ್ರಿಯೆ ಬರೆಯಿರಿ