ಕೋಟೇಶ್ವರ ಶ್ರೀ ಮಾರಿಯಮ್ಮ ದೇವಿಗೆ ಮುಖವಾಡ ಸಮರ್ಪಣೆ


ಕುಂದಾಪುರ : ಕುಂದಾಪುರ ತಾಲೂಕು ಕೋಟೇಶ್ವರದ ಶ್ರೀ ಮಹಾದೇವಿ ಮಾರಿಯಮ್ಮ ದೇವಾಲಯದ ಆಡಳಿತ ಸಮಿತಿಯು ಸುಮಾರು 40 ಸಾವಿರ ರೂ. ವೆಚ್ಚದಲ್ಲಿ ನಿರ್ಮಿಸಿದ ಕಂಚಿನ ಮುಖವಾಡವನ್ನು ಶ್ರೀ ಮಾರಿಯಮ್ಮ ದೇವಿಗೆ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಅರ್ಚಕ ಸಹೋದರರಾದ ಸುಬ್ಬಣ್ಣ ಬಳೆಗಾರ್, ಗೋಪಾಲ ಬಳೆಗಾರ್, ಜೀರ್ಣೋದ್ಧಾರ ಸಮಿತಿಯ ರತ್ನಾಕರ ಕಾಮತ್ ಮತ್ತು ರಂಗನಾಥ ಭಟ್ ಉಪಸ್ಥಿತರಿದ್ದರು. ಶಿಲ್ಪಿ ರಾಜಗೋಪಾಲಾಚಾರ್ಯರ ನೇತೃತ್ವದ ತಂಡ ಈ ಕುಸುರಿ ಕೆಲಸವನ್ನು ನಿರ್ವಹಿಸಿತ್ತು.
ನಿಮ್ಮ ಪ್ರತಿಕ್ರಿಯೆ ಬರೆಯಿರಿ