
*ನೆಮ್ಮದಿ ಕೇಂದ್ರ ನೆಮ್ಮದಿ ಹಾಳು ಮಾಡುತ್ತಿದೆ.
*ಸಂಚಾರಿ ಪೋಲಿಸರು ದೌರ್ಜನ್ಯ ನಡೆಸುತ್ತಾರೆ.
*ಸಕಾಲದಲ್ಲೂ ಆಗುತಿದೆ ವಿಳಂಬ.
* ಹೆದ್ದಾರಿ ಪ್ರಾಧಿಕಾರದಿಂದಾಗುತ್ತಿದೆ ಸಮಸ್ಯೆ

ಹಿಂದೆ ಒಂದೇ ದಿನದಲ್ಲಿ ಸಿಗುತ್ತಿದ್ದ ದಾಖಲೆಗಳು ಈಗ ತಿಂಗಳಾದರೂ ಸಿಗುತ್ತಿಲ್ಲ. ಸಕಾಲ ಬಂದ ನಂತರ ಅಜರ್ಿ ಸಲ್ಲಿಸಿದ್ದಕ್ಕೆ ಮೊಬೈಲ್ಗೆ ಸಂದೇಶಗಳು ಬರುವುದು ಬಿಟ್ಟರೆ ಯಾವುದೇ ರೀತಿಯ ಪರಿಹಾರಗಳಾಗುತ್ತಿಲ್ಲವೆಂಬ ಬಗ್ಗೆ ನನಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಈ ಬಗ್ಗೆ ಸ್ಥಳೀಯ ಶಾಸಕರೊಂದಿಗೆ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಆದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.
ಯಾವುದೇ ಸಂದರ್ಭದಲ್ಲಿ ನಿಮ್ಮ ಕೆಲಸಗಳು ನೇರವಾಗಿ ಆಗುತ್ತಿಲ್ಲವೆಂದಾದಲ್ಲಿ ಅದರ ಒಂದು ಪ್ರತಿಯನ್ನು ನನ್ನ ಕಚೇರಿಗೆ ತಲುಪಿಸಿ. ನಾನು ನಿಮಗೆ ಸಹಾಯ ಮಾಡಲು ಬದ್ಧನಾಗಿದ್ದೇನೆ ಎಂದು ಇದೆ ಸಂದರ್ಭದಲ್ಲಿ ಅವರು ಹೇಳಿದರು.
ಸಂಸದರೊಂದಿಗೆ ನಡೆದ ಮುಖಾಮುಖಿಯಲ್ಲಿ ಅಹವಾಲು ಮಂಡಿಸಿದ ಸಾರ್ವಜನಿಕರು |
ಮುಖಾಮುಖಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ನ್ಯಾಯವಾದಿಗಳಾದ ಟಿ.ಬಿ ಶೆಟ್ಟಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳಿಂದ ಏನೂ ಅಭಿವೃದ್ಧಿಗಳಾಗಲೀ ಜನರಿಗೆ ಸಹಾಯಗಳಾಗಲೀ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಸ್ಥಿತಿಗೆ ನಾಗರೀಕರು ಬಂದು ಮುಟ್ಟಿದ್ದು, ಇದೊಂದು ಅತ್ಯಂತ ದುರಂತದ ಸ್ಥಿತಿ ಎಂದು ವಿಷಾದ ವ್ಯಕ್ತಪಡಿಸಿದರು.
ನಿಮ್ಮ ಪ್ರತಿಕ್ರಿಯೆ ಬರೆಯಿರಿ
ಕುಂದಾಪ್ರ.ಕಾಂ> editor@kundapra.com