ರೋಗಿಗಳಿಗೆ ಹಣ್ಣು ಹಂಪಲ ವಿತರಣೆ

 ಕುಂದಾಪುರ:ಕೊಟೇಶ್ವರ ಚೇತನ ಸಂಸ್ಥೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ  ರೋಗಿಗಳಿಗೆ ಹಣ್ಣು ಹಂಪಲ ವಿತರಿಸಲಾಯಿತು. ಕಾರ್ಯಕ್ರಮವನ್ನು ಸಕರ್ಾರಿ ವೈದ್ಯಾಧಿಕಾರಿ ಡಾ. ದಿನಕರ್ ಉಧ್ಘಾಟಿಸಿದರು.
ಸಂಸ್ಥೆಯ ಗೌರವಾಧ್ಯಕ್ಷ ಶ್ರೀ ರಾಘವೇಂದ್ರ ರಾವ್ ಪ್ರಾಯೋಜಕತ್ವದಲ್ಲಿ ಕುಂದಾಪುರ ಸಕರ್ಾರಿ ಆಸ್ವತ್ರೆ, ಅಂಕದ ಕಟ್ಟೆ ಸರ್ಜನ್ ಆಸ್ಪತ್ರೆ, ಕೋಟೇಶ್ವರದ ಎನ್.ಆರ್. ಆಚಾರ್ಯ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಲಾಯಿತು.
          ಇದೇ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಉದ್ಯೋಗಿ ಕೆ.ನರಸಿಂಹ ಪೈ ಅವರು ಆಸ್ಪತ್ರೆಯ ಎಲ್ಲಾ ರೋಗಿಗಳಿಗೂ ತಲಾ ರೂ. 100 ರಂತೆ ಧನ ಸಹಾಯ ಮಾಡಿದರು. 

ಚೇತನ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಕಾರ್ಯದಶರ್ಿ ಗಣೇಶ್ ಐತಾಳ್, ವಾದಿರಾಜ್ ಹೆಬ್ಬಾರ್, ಚಂದ್ರಮೋಹನ್ ಶೇಟ್, ಶ್ರೀನಿವಾಸ ಕುಂದರ್, ಶಂಕರ್ ನಾಯ್ಕ್, ಸುಂದರ್ ಕಾಮತ್, ವಿ.ಗೋಪಾಲ, ಟಿ.ವಿ. ಶ್ರೀನಿವಾಸ ರಾವ್, ಗುರುರಾಜ್ ಜೋತೆಗಿದ್ದರು. ಇದೇ ಸಂಸ್ಥೆಯ ಆಶ್ರಯದಲ್ಲಿ ಇತ್ತಿಚೆಗೆ ಪ್ರಾಥಮಿಕ ಹಾಗೂ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಗಿತ್ತು