ಆತ್ಮ ಚೈತನ್ಯ ವೃದ್ಧಿಗೆ ಸಂಸ್ಕಾರ ಅಗತ್ಯ - ಜೋಷಿ

ಕುಂದಾಪುರ: ಇಂದಿನ ವೇಗದ ಜೀವನ ಶೈಲಿಗೆ ಹೊಂದಿಕೊಳ್ಳುವುದಕ್ಕಾಗಿ ಸಂಸ್ಕಾರಗಳನ್ನು ತ್ಯಜಿಸಬೇಕಾಗಿಲ್ಲ. ಕಂಪ್ಯೂಟರ್ ತಜ್ಞ ದೇವರ ಪೂಜೆ ಮಾಡಬಾರದೆಂದೇನಿಲ್ಲ. ಆದರೆ ಇಂದು ಯುವಕರು ಆಧುನಿಕರೆಂದು ತೋರಿಸಿಕೊಳ್ಳಲು ತಮ್ಮ ಸದಾಚಾರ, ಸಂಸ್ಕಾರಗಳನ್ನೇ ತಿರಸ್ಕರಿಸುತ್ತಿದ್ದಾರೆ. ಮಹಾ ಸಾಧಕರು ಯಾರೂ ತಮ್ಮ ಸಂಸ್ಕಾರ ಬಿಟ್ಟವರಲ್ಲ. ಆತ್ಮ ಚೈತನ್ಯ ವೃದ್ಧಿಗೆ ಸಂಸ್ಕಾರ - ಸದಾಚಾರ ಅಗತ್ಯ  ಎಂದು ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಬ್ರಹ್ಮಣ್ಯ ಜೋಷಿ ಹೇಳಿದರು. 
              ಅವರು ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಆಶ್ರಯದಲ್ಲಿ ಕೋಟೇಶ್ವರದಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರದಲ್ಲಿ ಪಾಲ್ಗೊಂಡು ಪ್ರತಿಭಾವಂತ ವಿಪ್ರವಿದ್ಯಾರ್ಥಿಗಳನ್ನು ಪುರಸ್ಕರಿಸಿ ಶುಭ ಹಾರೈಸಿದರು. 
          ಇದೇ ಸಂದರ್ಭದಲ್ಲಿ ನಿವೃತ್ತ ಸೇನಾನಿ ಹಾಲಿ ತಿರುವನಂತಪುರದ ವೈದ್ಯಾಧಿಕಾರಿ ಡಾ || ಸುಬ್ರಹ್ಮಣ್ಯ ಮಯ್ಯ, ಪಿ.ಎಚ್.ಡಿ. ಪದವಿಗಳಿಸಿದ ಕುಂದಾಫುರ ಭಂಡಾರ್ಕಾರ್ಸ್ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ || ಪ್ರಸನ್ನ ಕುಮಾರ್ ಐತಾಳ ಮತ್ತು ಎಸ್.ಎಸ್.ಎಲ್.ಸಿ. ಯಲ್ಲಿ ಜಿಲ್ಲಾ ಪ್ರಥಮಳಾದ ಪ್ರೇರಣಾ ಕೃಷ್ಣರಾಜ್ ಹಾಗೂ ಪರಿಷತ್ತಿನ ನೂತನ ಮಹಾಪೋಷಕರು ಮತ್ತು ಆಜೀವ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ನಿವೃತ್ತ ಯೋಧ ವಿಶ್ವನಾಥ ಹಂದೆ ತಮ್ಮ ಜೀವಿತಾವಧಿಯ ನಂತರ ಮಣಿಪಾಲ ಆಸ್ಪತ್ರೆಗೆ ದೇಹದಾನ ಮಾಡುವುದಾಗಿ ಘೋಷಿಸಿದರು
         ಅವಿಭಜಿತ ದ.ಕ.ಜಿಲ್ಲಾ ಬ್ರಾಹ್ಮಣ ಮಹಾಸಭಾದ ಕಾರ್ಯದಶರ್ಿ ಡಾ || ಎಚ್.ವಿ.ನರಸಿಂಹ ಮೂತರ್ಿ ಅತಿಥಿಯಾಗಿದ್ದರುಪರಿಷತ್ ಅಧ್ಯಕ್ಷ ಕೆ. ಶ್ರೀನಿವಾಸ್ ಹೆಬ್ಬಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ಪ್ರಧಾನ ಕಾರ್ಯದಶರ್ಿ ಬಿ.ಜಿ.ಸೀತಾರಾಮ ಧನ್ಯ, ಮಹಿಳಾ ವೇದಿಕೆ ಅಧ್ಯಕ್ಷೆ ಶಾಂತಾ ಗಣೇಶ್, ಯುವ ವೇದಿಕೆ ಅಧ್ಯಕ್ಷ ಜಿ.ವಿ.ಗಿರೀಶ್ ಉಪಾಧ್ಯ ಉಪಸ್ಥಿತರಿದ್ದರು. ವಿಪ್ರವಾಣಿ ಸಂಪಾದಕ ಭಾಸ್ಕರ ಉಡುಪ ಗಣ್ಯರನ್ನು ಪರಿಚಯಿಸಿ ಸಂದೇಶ ವಾಚಿಸಿದರು. ಶಂಕರ ರಾವ್ ಕಾರ್ಯಕ್ರಮ ನಿರೂಪಿಸಿ  ಕೊಟೇಶ್ವರ ವಲಯಾಧ್ಯಕ್ಷ ವೈ.ಎನ್.ವೆಂಕಟೇಶಮೂತರ್ಿ ಸ್ವಾಗತಿಸಿದರು. ಹಳ್ಳಿ ಶ್ರೀನಿವಾಸ ಭಟ್ ವಂದಿಸಿದರು.