ತೆಕ್ಕಟ್ಟೆ ಇಂಟರ್ಯಾಕ್ಟ್ ಕ್ಲಬ್ ಪದಗ್ರಹಣ       ಸೇವೆಯೇ ಶ್ರೇಷ್ಠ. ಶಾಲಾ ಓದು, ಸಾಧನೆ ಜೊತೆಗೆ ಸೇವಾ ಮನೋಭಾವನೆಬೆಳೆಸಿಕೊಂಡು ಉತ್ತುಂಗಕ್ಕೇರಿ ಎಂದು ರೋಟರಿ ಜಿಲ್ಲಾ 3180 ಉಪರಾಜ್ಯಪಾಲ ಅಭಿನಂದನ್ ಶೆಟ್ಟಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಇತ್ತೀಚೆಗೆ ತೆಕ್ಕಟ್ಟೆ ಸರಕಾರಿ ಪ್ರೌಢ ಶಾಲೆಯಲ್ಲಿ ಇಂಟರ್ಯಾಕ್ಟ್ ಕ್ಲಬ್ ಉದ್ಘಾಟಿಸಿ ಮಾತನಾಡಿದರು.
       ತೆಕ್ಕಟ್ಟೆ ರೋಟರಿ ಕ್ಲಬ್ ಪ್ರಯೋಜಿಸಿದ ಇಂಟರ್ಯಾಕ್ಟ್ ಕ್ಲಬ್ ಪದಗ್ರಹಣವನ್ನು ಸಂಸ್ಥೆಯ ಅಧ್ಯಕ್ಷ ಸುಧಾಕರ ಶೆಟ್ಟಿ ನೆರವೇರಿಸಿದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶಿವರಾಮ ಶೆಟ್ಟಿ, ರೋಟರಿ ಜೋನಲ್ ಲೆಪ್ಟಿನೆಂಟ್ ಚಂದ್ರಶೇಖರ್ ಮೆಂಡನ್, ಪ್ರಭಾರ ಮುಖ್ಯ ಶಿಕ್ಷಕ ಗೋಪಾಲಕೃಷ್ಣ ಶೆಟ್ಟಿ, ಇಂಟರ್ಯಾಕ್ಟ ಸಂಯೋಜಕಿ ಅನುರಾಧ ಮೇಡಂ, ಇಂಟರ್ಯಾಕ್ಟ ಅಧ್ಯಕ್ಷೆ ಮೇಘನಾ, ರೋಟರಿ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ಮುಂತಾದವರು ಉಪಸ್ಥಿತರಿದದರು.

ರೋ|| ಕೇಶವ ಕೋಟೇಶ್ವರ ಪ್ರಾಸ್ತಾವಿಕ ಮಾತನಾಡಿದರು. ಇಂಟರ್ಯಾಕ್ಟ ಕಾರ್ಯದರ್ಶಿ ಸಚಿನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
 
ನಿಮ್ಮ ಪ್ರತಿಕ್ರಿಯೆ ಬರೆಯಿರಿ 
ಕುಂದಾಪ್ರ.ಕಾಂ> editor@kundapra.com