ಲ್ಯಾಬ್-ಟು-ಲ್ಯಾಂಡ್ ಭಾರತ್ ನಿರ್ಮಾಣ ಅಭಿಯಾನಕ್ಕೆ ಚಾಲನೆ.


ಕುಂದಾಪುರ: ಭಾರತ ಸರಕಾರದ ಲ್ಯಾಬ್-ಟು-ಲ್ಯಾಂಡ್ ಭಾರತ್ ನಿರ್ಮಾಣ ಅಭಿಯಾನಕ್ಕೆ ಕುಂದಾಪುರ ತಾಲೂಕು ಪಂಚಾಯಿತಿ ಅಧ್ಯಕ್ಷ ಬೆಳ್ಳಾರೆ ಶಂಕರ್ ಶೆಟ್ಟಿ  ಚಾಲನೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ತಾಲೂಕು ಪಂಚಾಯಿತಿ ಸದಸ್ಯರಾದ ಪ್ರದೀಪ ಕುಮಾರ್ ಶೆಟ್ಟಿ, ಲಕ್ಷ್ಮಣ, ಮಂಜು ಬಿಲ್ಲವ, ಅಕ್ಷರ ದಾಸೋಹ ಅಧಿಕಾರಿ ಸೀತಾರಾಮ ಶೆಟ್ಟಿ, ಸಂಪನ್ಮೂಲ ವ್ಯಕ್ತಿಗಳಾದ ವಿನೋದ ಗಂಗೊಳ್ಳಿ, ಮುಕುಂದ ಮುಂತಾದವರು ಉಪಸ್ಥಿತರಿದ್ದರು.
         ಬಳಿಕ ಕಾರ್ಕಳ ಜಾಥಾ ತಂಡದವರ ಹಾಡು, ಬೀದಿ ನಾಟಕದ ಮೂಲಕ ಯೋಜನೆಯ ಅರಿವುಮೂಡಿಸಲಾಯಿತು.