ಬೀಜಾಡಿ :ಕ್ರೀಯಾಶೀಲ ನಾಯಕತ್ವ ಶಿಬಿರ

ಕುಂದಾಪುರ: ಕರಾವಳಿ ಯುವಕ ಮಂಡಲ ಬೀಜಾಡಿ-ಗೋಪಾಡಿ ಇವರ ಆಶ್ರಯದಲ್ಲಿ ಪಡು ಬೀಜಾಡಿ ಸರಕಾರಿ ಹಿರಿಯ ಪ್ರಾಥವಿ ಕ್ರೀಯಾಶೀಲ ನಾಯಕತ್ವ ಶಿಬಿರ ನಡೆಸಲಾಯಿತು.
   ತಾಲೂಕು ಯುವಜನ ಸೇವಾ ಮತ್ತು ಕ್ರೀಡಾ ಇಲಾಖಾಧಿಕಾರಿ ದಿನಕರ ಹೆಗ್ಡೆ ಶಿಬಿರವನ್ನು ಉಧ್ಘಾಟಿಸಿದರು. ಜೆಸಿಐ ತರಬೇತುದಾರ ಕೆ.ಕೆ.ಶಿವರಾಮ ಮಾತನಾಡಿ, ನಮ್ಮಲ್ಲಿರುವ ಕೀಳರಿಮೆಯನ್ನು ಹೋಗಲಾಡಿಸಿ ಸಕರಾತ್ಮಕ ಮನೋಭಾವ ಬೇಳೆಸಿಕೊಂಡು ಆತ್ಮ ವಿಶ್ವಾಸದಿಂದÀ ಮುನ್ನೆಡೆದರೆ  ಜೀವನದಲ್ಲಿ ಜಯಶಾಲಿಯಾಗಬಹುದು ಎಂದರು.
   ಕರಾವಳಿ ಯುವಕ ಮಂಡಲದ ಅಧ್ಯಕ್ಷ ಬಾಬಣ್ಣ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಮೋಹನ್ ಮಡಿವಾಳ, ಶೇಖರ ಚಾತ್ರಬೆಟ್ಟು, ನರಸಿಂಹ ನಾಯ್ಕ್. ಲಕ್ಷ್ಮಣ ನಾಯಕ್, ಹೆರಿಯಣ್ಣ ಚಾತ್ರಬೆಟ್ಟು,ಅಶೋಕ ಪೂಜಾರಿ ಒಡ್ಡಿನ ಮನೆ, ಗಣೇಶ್ ಪುತ್ರನ್, ಶಂಕರ್ ಚಾತ್ರಬೆಟ್ಟು ಉಪಸ್ಥಿತದ್ದರು.
           ಯುವಕ ಮಂಡಲ ಕಾರ್ಯದರ್ಶಿ ಗೋವಿಂದ ಕಾಂಚನ್ ಸ್ವಾಗತಿಸಿ, ನರಸಿಂಹ.ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು. ರಾಜುಗಜಾನನ ವಂದಿಸಿದರು. ಬಳಿಕ ಯುವಕ ಯುವತಿಯರು ಈ ಶಿಬಿರದ ನಡೆಯಿತು.

ನಿಮ್ಮ ಪ್ರತಿಕ್ರಿಯೆ ಬರೆಯಿರಿ
 ಕುಂದಾಪ್ರ.ಕಾಂ> editor@kundapra.com