ತ್ರಾಸಿ: ಹೆಣ್ಣು ಅಬಲೆಯಲ್ಲ, ಅಚಲೆ: ಶ್ರೀಮತಿ ಗುಣರತ್ನ

ಕುಂದಾಪುರ: ಸಮಾಜದ ಅಭಿವೃದ್ಧಿಯ ಮೂಲದಲ್ಲಿ ತಾಯಿಯೇ ಪ್ರಧಾನಳಾಗಿ ಕಾರ್ಯ ನಿರ್ವಹಿಸುವುದರಿಂದ ಆಕೆಗೆ ಉತ್ತಮ ಶಿಕ್ಷಣ ಅನಿವಾರ್ಯ. ಹೆಣ್ಣು ಅಬಲೆಯಲ್ಲ, ಆಕೆ ಸಮಾಜದ ಎಲ್ಲಾ ಸ್ತರಗಳಲ್ಲೂ ಪುರುಷರೊಂದಿಗೆ ಸರಿಸಮಾನಳಾಗಿ ನಿಲ್ಲಬಲ್ಲವಳಾಗಿದ್ದಾಳೆ. ವಿದ್ಯಾವಂತ ತಾಯಿಯಂದಿರಿಂದ ಮಾತ್ರ  ವಿದ್ಯಾವಂತ, ಪ್ರಜ್ಞಾವಂತ ವ್ಯಕ್ತಿಗಳಿಂದ ಕೂಡಿದ ಸಮಾಜ ನಿಮರ್ಾಣ ಸಾದ್ಯವಿದೆ. ಇದು ನಾರಾಯಣ ಗುರುಗಳ ಸಂದೇಶವೂ ಹೌದು ಎಂದು ಕುಂದಾಪುರ ಪುರಸಭೆ ಸದಸ್ಯೆ ಗುಣರತ್ನ ಹೇಳಿದರು.
          ಅವರು ತ್ರಾಸಿಯ ಅಣ್ಣಪ್ಪಯ್ಯ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ತ್ರಾಸಿ ಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘ (ರಿ.) ಇದರ ಮಹಿಳಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣ ವಂಚಿತ ಹೆಣ್ಣು ಮಕ್ಕಳನ್ನು ಗುರುತಿಸುವ ಕೆಲಸವನ್ನು ಸಂಘಟನೆಗಳು ಮೊದಲು ಮಾಡಬೇಕು. ನಿರುದ್ಯೋಗಿ ಮಹಿಳೆಯರು ಸ್ವಉದ್ಯೋಗದ ಕ್ಷೇತ್ರದಲ್ಲಿ ತರಬೇತಿ ಪಡೆದು, ಆಥರ್ಿಕವಾಗಿ ಸ್ವಾವಲಂಬಿ ಜೀವನ ನಡೆಸಬೇಕು ಎಂದು ಕರೆ ಕೊಟ್ಟರು.
        ಕುಂದಾಪುರ ಬಿಲ್ಲವ ಸೇವಾ ಸಂಘದ ಉಪಾಧ್ಯಕ್ಷೆಯಾದ ಕಲ್ಪನಾ ಭಾಸ್ಕರ್ ಮಾತನಾಡಿ ಇಂದಿನ ಮಕ್ಕಳಲ್ಲಿ ಹಿರಿಯರಿಗೆ ಗೌರವ ನೀಡುವ ಸಂಸ್ಕಾರದ ಕೊರತೆಯಿದೆ. ಧಾಮರ್ಿಕ ಅಪನಂಬಿಕೆಗಳಿಂದಾಗಿ ದೇವರ ಬಗ್ಗೆ ಹಿರಿಯರ ಬಗ್ಗೆ ಭಯ, ಭಕ್ತಿಯನ್ನು ಕಳೆದುಕೊಂಡಿದ್ದಾರೆ. ಇಂದಿನ ಶಿಕ್ಷಣ ವ್ಯವಸ್ಥೆಯೂ ಕೂಡಾ ವಿದ್ಯಾಥರ್ಿಗಳನ್ನು ತಯಾರು ಮಾಡುವ ಕಾಖರ್ಾನೆಗಳಾಗಿವೆ. ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಸುಶೀಲ, ಪ್ರಜ್ಞಾಪೂರಿತ, ಕರ್ತವ್ಯನಿಷ್ಠೆ ಬರಬೇಕಾದರೆ ತಾಯಿ ವಿದ್ಯಾವಂತೆಯಾಗಿರಬೇಕು ಎಂದರು.
           ಈ ಸಂದರ್ಭದಲ್ಲಿ ತ್ರಾಸಿಯ ಮಾಸ್ಟರ್ ರೀತೆಶ್ ಪೂಜಾರಿಯ ವೈದ್ಯಕೀಯ ವೆಚ್ಚಕ್ಕಾಗಿ ಧನ ಸಹಾಯವನ್ನು ಸಂಘದ ಸದಸ್ಯರ ವಂತಿಗೆಯ ಮೂಲಕ ನೀಡಲಾಯಿತು.
ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಗಿರಿಜಾ ಈಶ್ವರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವಾಧ್ಯಕ್ಷರುಗಳಾದ ವೆಂಕಟ ಪೂಜಾರಿ ಕಳಿನಮನೆ, ರವಿ ಡಿ. ಪೂಜಾ ಕಳಿನಮನೆ, ಕಾರ್ಯದಶರ್ಿ ವರದಾ ಪ್ರಭಾಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
 ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಭಾಶ್ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುಮಾರಿ ಜಯಶ್ರೀ ಸ್ವಾಗತಿಸಿದರು ಶಿವಾನಂದ ಧನ್ಯವಾದಗೈದರು ಸುರೇಶ್ ಪೂಜಾರಿ ಕಾರ್ಯಕ್ರಮವನ್ನು ನಿರೂಪಿಸಿದರು.  ಕುಂದಾಪ್ರ.ಕಾಂ> editor@kundapra.com