ಕಾಂಗ್ರೆಸ್ನ ಮಹಿಳಾ ಪದಾಧಿಕಾರಿಗಳ ಸಭೆ


ಕುಂದಾಪುರ: ಇಲ್ಲಿನ ಮಹಿಳಾ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಸಭೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇತೀಚೆಗೆ ನಡೆಯಿತು.
ಸಭೆಯಲ್ಲಿ ಬ್ಲಾಕ್ ಕಾರ್ಯದರ್ಶಿ ಶ್ಯಾಮಲ ಭಂಡಾರಿ ಪಕ್ಷ ಸಂಘಟನೆ ಹಾಗೂ ಮಹಿಳಾ ಸಂಘಟನೆಯ ಕುರಿತು ಚರ್ಚಿಸಿದರು.
ಜಿಲ್ಲಾ ಕಾಂಗ್ರೆಸ್ ವೀಕ್ಷಕಿ ಸರಸು ಡಿ. ಬಂಗೇರ, ಹಿರಿಯ ನಾಯಕಿ ವೆಂಕಮ್ಮ, ಮಾಜಿ ಪುರಸಭಾ ಅಧ್ಯಕ್ಷೆ ದೇವಕಿ ಸಣ್ಣಯ್ಯ, ಮಾಜಿ ಪುರಸಭಾ ಉಪಾಧ್ಯಕ್ಷೆ ಲೇನಿ ಕ್ರಾಸ್ತಾ, ವಾಣಿ.ಆರ್.ಶೆಟ್ಟಿ, ರೇವತಿ ಶೆಟ್ಟಿ,ಸುಜಾತ ವಾಸುದೇವ, ಭಾಗಿರಥಿ ಶೆಟ್ಟಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯೆ ಶೋಭಾ, ಪುರಸಭಾ ಸದಸ್ಯರುಗಳಾದ ರವಿಕಲಾ, ಪುಷ್ಪ ಶೇಟ್, ಗಿರಿಜಾ, ಸುಜಾತ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಕಾರ್ಯದಶರ್ಿಗಳಾದ ನಾರಾಯಣ ಆಚಾರ್, ಶಿವಾನಂದ.ಕೆ, ನಗರ ಕಾಂಗ್ರೆಸ್ ಚಂದ್ರ ಶೇಖರ್ ಶೆಟ್ಟಿ ಇದ್ದರು. ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಪುತ್ರನ್ ಸ್ವಾಗತಿಸಿದರು. ಶಶಿಕಲಾ ವಂದಿಸಿದರು.