ಕೇಂದ್ರ ಮೊಸಳೆ ಕಣ್ಣೀರು ನಿಲ್ಲಿಸಲಿ. ರೈತರ ಸಮಸ್ಯೆಗೆ ಸ್ವಂದಿಸಲಿ: ಸಂಸದ ಬಿ.ವೈ.ರಾಘವೇಂದ್ರ.


ಸುದ್ದಿಗೊಷ್ಠಿಯ ಪ್ರಮುಖಾಂಶಗಳು.

*ಕೇಂದ್ರ ಸರಕಾರ 2 ಲಕ್ಷವರೆಗಿನ ರೈತರ ಸಾಲವನ್ನು ಮನ್ನಾ ಮಾಡಲು ಒತ್ತಾಯ.

*ಪಶ್ಚಿಮ ಘಟ್ಟ ಪ್ರದೇಶಗಳನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಿರುವುದಕ್ಕೆ ವಿರೋಧ.

*ಯಡಿಯೂರಪ್ಪ ವಿಪಕ್ಷ ನಾಯಕರಲ್ಲ. ಅವರ ಆ ನಡವಳಿಕೆಯಿಂದಾಗಿ ರಾಜ್ಯ ಸರಕಾರ 3,500 ಕೋಟಿ ರೂ. ರೈತರ ಸಾಲಮನ್ನಾ ಮಾಡಿದ್ದು, 16 ಲಕ್ಷ ಕುಟುಂಬಗಳಿಗೆ ಇದರ ನೇರ ಅನುಕೂಲವಾಗಿದೆ.

*ಕುಂದಾಪುರ ತಾಲೂಕಿನಲ್ಲಿ ಸುಮಾರು 5.36 ಕೋಟಿ ರೂ. ರೈತರ ಸಾಲಮನ್ನಾ ಆಗಲಿದ್ದು, 11423 ರೈತ ಕುಟುಂಬಗಳು ಇದರ ಪ್ರಯೋಜನ ಪಡೆಯಲಿದ್ದಾರೆ 

*ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಹಣವನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹ.

*ಬೈಂದೂರು ಕ್ಷೇತ್ರವ್ಯಾಪ್ತಿಯ ಕುಡಿಯುವ ನೀರು, ಅಳಿವೆ ಸಮಸ್ಯೆಗಳ ಪರಿಹಾರ ಕಾರ್ಯದ ವಿವರ.

*ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗಾದ ಅವಮಾನದ ಬಗ್ಗೆ ಬೇಸರ.ಕುಂದಾಪುರ: ಕೇಂದ್ರ ಸರಕಾರ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದನ್ನು ಬಿಟ್ಟು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ  2 ಲಕ್ಷವರೆಗಿನ ರೈತರ ಸಾಲವನ್ನು ಮನ್ನಾ ಮಾಡಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
         ಕುಂದಾಪುರದಲ್ಲಿ ಸುದ್ಧಿಗೋಷ್ಠಿಯನ್ನುದ್ದೇಶಿ ಮಾತನಾಡಿದ ಅವರು ರಾಜ್ಯದಲ್ಲಿ ಬರ ಪರಿಸ್ಥಿತಿ ಕಂಡು ಬಂದಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರ ಸಹಕಾರಿ ಸಂಘಗಳಲ್ಲಿನ ರೈತರ 25 ಸಾವಿರ ರೂ. ಸಾಲವನ್ನು ಮನ್ನಾ ಮಾಡಿದೆ. ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಬಳಿಕ ಎರಡು ಬಾರಿ ರೈತರ ಸಾಲವನ್ನು ಮನ್ನಾ ಮಾಡಿ ರೈತರ ಕಣ್ಣೀರೊರೆಸುವ, ರೈತರ ಬೆಂಬಲಕ್ಕೆ ನಿಲ್ಲುವ ಕಾರ್ಯ ಮಾಡಿದೆ. ಆದರೆ ಕೇಂದ್ರ ಸರಕಾರ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದನ್ನು ಮತ್ತು ಭಾಷಣ ಮಾಡುವುದನ್ನು ಬಿಟ್ಟು ರೈತರ ಸಾಲ ಮನ್ನಾ ಮಾಡಲು ಮುಂದಾಗಬೇಕು ಮತ್ತು ಹೆಚ್ಚು ಅನುದಾನವನ್ನು ನೀಡಿ ರೈತರ ಕಣ್ಣೀರೊರೆಸುವ ಕಾರ್ಯ ಮಾಡಬೇಕೆಂದು ಅವರು ಒತ್ತಾಯಿಸಿದರು.

ಯಡಿಯೂರಪ್ಪ ವಿಪಕ್ಷ ನಾಯಕರಲ್ಲ_ರೈತರ ಸಾಲ ಮನ್ನ.
           ಇತ್ತೀಚಿಗೆ ಯಡಿಯೂರಪ್ಪನವರು ವಿಪಕ್ಷ ನಾಯಕರಂತೆ ವತರ್ಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಬರ ಪರಿಸ್ಥಿತಿಯಲ್ಲಿ ರೈತರ ಸಂಕಷ್ಟಗಳನ್ನು ಸರಕಾರದ ಗಮನ ಸೆಳೆಯುವುದು ಇದರ ಉದ್ದೇಶವಾಗಿತ್ತು. ಇದಾದ ಎರಡು ಮೂರು ದಿನಗಳ ಒಳಗೆ ರಾಜ್ಯ ಸರಕಾರ ರೈತರ 25 ಸಾವಿರ ರೂ.ವರೆಗಿನ ಸಾಲಮನ್ನಾ ಮಾಡುವ ಬಗ್ಗೆ ಪ್ರಕಟಿಸಿತ್ತು. ರಾಜ್ಯ ಸರಕಾರ 3,500 ಕೋಟಿ ರೂ. ರೈತರ ಸಾಲಮನ್ನಾ ಮಾಡಿದ್ದು, 16 ಲಕ್ಷ ಕುಟುಂಬಗಳಿಗೆ ಇದರ ನೇರ ಅನುಕೂಲವಾಗಿದೆ. ರೈತರ ಸಾಲಮನ್ನಾ ಬಗ್ಗೆ ಸಚಿವ ಸಂಪುಟದಲ್ಲಿ ಕೂಡ ಒಪ್ಪಿಗೆ ದೊರೆತಿದೆ. ಕುಂದಾಪುರ ತಾಲೂಕಿನಲ್ಲಿ ಸುಮಾರು 5.36 ಕೋಟಿ ರೋ. ರೈತರ ಸಾಲಮನ್ನಾ ಆಗಲಿದ್ದು, 11423 ರೈತ ಕುಟುಂಬಗಳು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ಅವರು ಹೇಳಿದರು.
ಕೇಂದ್ರ ಸರಕಾರ ಇತ್ತೀಚಿಗೆ ಜಾರಿಗೆ ತಂದಿರುವ ಬಗರ್ ಹುಕುಂ ಅರಣ್ಯ ಹಕ್ಕು ಕಾಯಿದೆ ಒಬ್ಬರ ಕಣ್ಣಿಗೆ ಸುಣ್ಣ, ಒಬ್ಬರ ಕಣ್ಣಿಗೆ ಬೆಣ್ಣೆ ಹಚ್ಚುವಂತಿದ್ದು, ಇದರಿಂದ ಯಾವುದೇ ಲಾಭವಿಲ್ಲ. ಅರ್ಥವಿಲ್ಲದ ಕಾನೂನು ಜಾರಿಗೆ ತರಲಾಗಿದ್ದು, ಈ ಬಗ್ಗೆ ಕೇಂದ್ರದ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ. ಎಲ್ಲರಿಗೂ ಅನ್ವಯಿಸುವಂತೆ ಒಂದೇ ರೀತಿಯ ಕಾನೂನು ಜಾರಿಗೊಳಿಸಬೇಕು. ಬಗರ್ಹುಕುಂ ಕಾಯಿದೆಗೆ ತಿದ್ದುಪಡಿ ಮಾಡಬೇಕೆಂದು ಅವರು ಒತ್ತಾಯಿಸಿದರು.

ಕೇಂದ್ರದ ಮಲತಾಯಿ ಧೋರಣೆ.
        ಕಳೆದ ಮೂರು ವರ್ಷಗಳಿಂದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಹಣ ಬಿಡುಗಡೆಯಾಗುತ್ತಿಲ್ಲ. ಅಟಲ್ ಬಿಹಾರಿ ವಾಜಪೇಯಿಯವರು ಆರಂಭಿಸಿದ ಈ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಕೇಂದ್ರ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಸಾಂಸದರು ಗೆದ್ದಿದ್ದಾರೆ ಎಂಬ ಒಂದು ಕಾರಣದಿಂದ ರಾಜ್ಯವನ್ನು ಕೇಂದ್ರ ಸರಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದ ಅವರು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಹಣವನ್ನು ಬಿಡುಗಡೆಗೊಳಿಸಬೇಕೆಂದು ಅವರು ಆಗ್ರಹಿಸಿದರು.
    ಬೆಳೆ ಹಾನಿ ಬಗ್ಗೆ ಕೇಂದ್ರ ಸರಕಾರ ಎಕ್ರೆಗೆ ಒಂದು ಸಾವಿರ ರೂ. ನೀಡುವ ಪದ್ಧತಿ ಅವೈಜ್ಞಾನಿಕವಾಗಿದ್ದು, ಈ ಪದ್ಧತಿಯನ್ನು ಕೈಬಿಟ್ಟು, ಬೆಳೆ ಹಾನಿ ಬಗ್ಗೆ ಕೇಂದ್ರದ ತಂಡ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ನೀಡಲು ಕೇಂದ್ರ ಸರಕಾರ ರಾಜ್ಯ ಸರಕಾರದೊಂದಿಗೆ ಕೈಜೋಡಿಸಬೇಕು ಎಂದು ಒತ್ತಾಯಿಸಿದ ಅವರು ಮಳೆಯಿಂದ ಉಂಟಾದ ಹಾನಿಯನ್ನು ಹಂತ ಹಂತವಾಗಿ ಶಾಶ್ವತ ಪರಿಹಾರದ ಬಗ್ಗೆ ರಾಜ್ಯ ಸರಕಾರ ಗಮನಹರಿಸಬೇಕು ಎಂದು ಹೇಳಿದರು.

ಅಭಿವೃಧ್ಧಿ ಕಾರ್ಯಗಳತ್ತ ಗಮನ.
             ಚುನಾವಣೆ ಸಂದರ್ಭ ನೀಡಿದ ಆಶ್ವಾಸನೆಯಂತೆ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗಿದೆ. ತಾಲೂಕಿನ ಗುಂಡೂರು ಸಮೀಪ ಸುಮಾರು 80 ಕೋಟಿ ರೂ. ವೆಚ್ಚದಲ್ಲಿ ಬ್ರೀಡ್ಞ್ ಕಂ ಬ್ಯಾರೇಜ್ ನಿಮರ್ಾಣ ಮಾಡಲಾಗಿದ್ದು, ಮುಂದಿನ 2-3 ತಿಂಗಳೊಳಗೆ ಇದು ಪೂರ್ಣಗೊಳ್ಳಲಿದೆ. ಈ ಯೋಜನೆಯಿಂದ ಸುಮಾರು 4500 ಎಕ್ರೆ ರೈತರಿಗೆ ನೀರನ್ನು ಒದಗಿಸುವ, 10 ಪಂಚಾಯತಿಗಳಿಗೆ ಕುಡಿಯುವ ನೀರನ್ನು ನೀಡಲು ಸಾಧ್ಯವಾಗಲಿದೆ. ಯಡ್ತರೆ-ಬೈಂದೂರು-ಪಡುವರಿ-ಶಿರೂರು ಪ್ರದೇಶದ ವ್ಯಾಪ್ತಿಯ ಜನರಿಗೆ ಕೊಸಳ್ಳಿ ನದಿಯಿಂದ ಕುಡಿಯುವ ನೀರಿನ ಯೋಜನೆಗಾಗಿ 27 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಮಂಜೂರಾತಿ ಹಂತದಲ್ಲಿದ್ದು, ಇದರಿಂದ 78 ಜನವಸತಿ ಗ್ರಾಮಗಳಿಗೆ ಪ್ರಯೋಜನ ದೊರೆಯಲಿದೆ. ನಾಡ-ಸೇನಾಪುರ-ಬಡಾಕೆರೆ-ಹಡವು ಗ್ರಾಮದ 24 ಜನವಸತಿ ಪ್ರದೇಶಗಳಿಗೆ ಸೌಪಣರ್ಿಕಾ ನದಿಯಿಂದ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಕೂಡ ಸರಕಾರಕ್ಕೆ ಸಲ್ಲಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಇರುವ ಶೇ.50 ರಷ್ಟು ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರನ್ನು ಒದಗಿಸಲು ಪ್ರಯತ್ನಿಸಲಾಗಿದೆ ಎಂದು ಹೇಳಿದರು.

        ಗಂಗೊಳ್ಳಿ ಬಂದರು ಹಾಗೂ ಅಳಿವೆ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ಚಚರ್ೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಕಡಲ ತೀರದಲ್ಲಿ ಶಾಶ್ವತ ತಡೆಗೋಡೆ ನಿಮರ್ಾಣ ಮಾಡುವ ಬಗ್ಗೆ ಸರಕಾರದ ಗಮನ ಸೆಳೆಯಲಾಗುವುದು. ಮೀನುಗಾರರಿಗೆ ಅನುಕೂಲವಾಗುವ ಅನೇಕ ಯೋಜನೆಗಳನ್ನು ಕ್ಷೇತ್ರದಲ್ಲಿ ಈಗಾಗಲೇ ನಡೆಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ದುಸ್ಥಿತಿ ಬಗ್ಗೆ ಕಳೆದ ಒಂದು ತಿಂಗಳ ಹಿಂದೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚಚರ್ೆ ನಡೆಸಲಾಗಿದ್ದು, ಮಳೆಗಾಲ ಮುಗಿದ ಬಳಿಕ ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣವಾಗಿ ನವೀಕರಣಗೊಳಿಸಲಾಗುತ್ತದೆ. ಅಲ್ಲಿಯವರೆಗೆ ಜನರಿಗೆ ತೊಂದರೆಯಾಗದಂತೆ ಹೊಂಡಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಅವರು ಹೇಳಿದರು.

ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗಾದ ಅವಮಾನದ ಬಗ್ಗೆ ಬೇಸರವಿದೆ.
          ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಾಲಾಡಿ ಶ್ರೀನಿವಾಸ ಶೆಟ್ಟಿ ನಮ್ಮ ಪ್ರಶ್ನಾತೀತ ನಾಯಕ. ಅವರು ಯಾವುದೇ ಅಧಿಕಾರಕ್ಕೆ, ಸ್ಥಾನಮಾನಕ್ಕೆ ಕೈಚಾಚಿದವರಲ್ಲ. ಅವರು ರಾಜೀನಾಮೆ ನೀಡುವ ಮೊದಲು ನಾನು ಹಾಗೂ ಯಡಿಯೂರಪ್ಪನವರು ಸುಮಾರು 3 ಬಾರಿ ಭೇಟಿ ಮಾಡಿ ಚಚರ್ೆ ನಡೆಸಿದ್ದೇವೆ. ಅವರಿಗೆ ಅವಮಾನವಾಗಿದೆ ಎಂದು ರಾಜೀನಾಮೆ ನೀಡಿದ್ದು, ಅವರಿಗಾದ ಅವಮಾನದ ಬಗ್ಗೆ ನೋವಿದೆ. ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಚಚರ್ೆ ನಡೆದಿದ್ದು, ಈಗ ಈ ಬಗ್ಗೆ ಚಚರ್ೆ ಬೇಡ. ಅವರು ಕಟ್ಟಿದ ಪಕ್ಷ. ಅವರು ಪಕ್ಷದಲ್ಲಿ ಮುಂದುವರಿಯಬೇಕೆಂದು ಒತ್ತಾಯ ಮಾಡಿದ್ದು, ಅವರು ಪಕ್ಷದಲ್ಲೇ ಮುಂದುವರಿಯುವ ವಿಶ್ವಾಸವಿದೆ ಎಂದು ಅವರು ಹೇಳಿದರು.


           ಪಶ್ಚಿಮಘಟ್ಟವನ್ನು ಯುನೆಸ್ಕೊ ವಿಶ್ವಪರಂಪರೆ ಪಟ್ಟಿಗೆ ಸೇರಿಸುವ ಮೊದಲು ಅದರ ಸಾಧಕ ಬಾಧಕ ಬಗ್ಗೆ ಚರ್ಚೆ ನಡೆಸಿ, ಅಲ್ಲಿನ ನಿವಾಸಿಗಳ ಜನಜೀವನ ಬಗ್ಗೆ ಗಮನಹರಿಸಬೇಕಿದೆ .ಪಶ್ಚಿಮ ಘಟ್ಟ ಪ್ರದೇಶಗಳನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಿರುವುದನ್ನು ವಿರೋಧಿಸುತ್ತೇನೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. 


         ಬೈಂದೂರು ಶಾಸಕ ಕೆ.ಲಕ್ಷ್ಮೀನಾರಾಯಣ, ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಣಯಕುಮಾರ್ ಶೆಟ್ಟಿ, ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ಕಿಶೋರ್ಕುಮಾರ್, ಕುಂದಪುರ ತಾ.ಪಂ. ಅಧ್ಯಕ್ಷ ಬೆಳ್ಳಾಡಿ ಶಂಕರ ಶೆಟ್ಟಿ, ಬೈಂದೂರು ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದಶರ್ಿ ಸದಾಶಿವ ಡಿ.ಪಡುವರಿ, ಕುಂದಾಪುರ ಪುರಸಭೆ ಅಧ್ಯಕ್ಷ ಕೆ.ಮೋಹನದಾಸ ಶೆಣೈ, ಪುರಸಭೆ ಸದಸ್ಯ ರಾಜೇಶ ಕಾವೇರಿ, ನ್ಯಾಯವಾದಿ ಕೆ.ಬಿ.ಶೆಟ್ಟಿ, ಶರತ್ಕುಮಾರ್ ಶೆಟ್ಟಿ, ಚಿತ್ತರಂಜನ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.