ಹಲವೆಡೆ ಹದಗೆಟ್ಟ ರಸ್ತೆ : ಏನೀ ದುರವಸ್ಥೆ!


ಕಳೆದ ಕೆಲವು ದಿನಗಳಿಂದ ಸುರಿತ್ತಿದ್ದ ಮಳೆಯಿಂದಾಗಿ ತಾಲೂಕಿನ ಹಲವೆಡೆ ರಸ್ತೆಗಳು ಹದಗೆಟ್ಟಿದ್ದು ವಾಹನ ಸವರರು, ಪಾದಚಾರಿಗಳು ತೊಂದರೆ ಅನುಭವಿಸುವಂತಾಗಿದೆ. ಹೆಸರಿಗಷ್ಟೇ ಕಾಮಗಾರಿ ನಡೆಸಿ ಕೈತೋಳೆದಕೊಳ್ಳುವ ಕಾಂಟ್ರಾಕ್ಟರ್ ಗಳು, ಬಿಟ್ಟಿ ಪ್ರಚಾರ ಪಡೆದಕೋಳ್ಳುವ ರಾಜಕಾರಣಿಗಳು, ನಿದ್ರಾವಸ್ಥೆಯಲ್ಲಿರುವ ಅಧಿಕಾರಿಗಳು ಇದರತ್ತ ಗಮನಹರಿದಬೇಕಾಗಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತ ಸಮಯದಲ್ಲಿ ಸ್ವಂದಿಸಿ ಆಗಬಹುದಾದ ಅವಗಡವನ್ನು ತಪ್ಪಿಸಲು ಮನಸ್ಸು ಮಾಡಬೇಕಾಗಿದೆ.    ಇಲ್ಲಿನ ರಸ್ತೆಯ ಸ್ಥಿತಿ-ಗತಿಗಳ ಕುರಿತು ಯೋಗಿಶ್ ಕುಂಭಾಶಿಯವರಿಂದ ಒಂದು ವರದಿ.

 ಹದಗೆಟ್ಟ ರಸ್ತೆಯಲ್ಲಿ ಸ್ಥಳಿಯರು ಸಸಿಗಳನ್ನಿಟ್ಟು ವಾಹನ ಸವಾರರಿಗೆ
ಸೂಚನೆ ನೀಡಲು ಮುಂದಾದರು.
ಕುಂದಾಪುರ: ಇತ್ತೀಚಿನ ಮಳೆಗೆ ಹಲವೆಡೆ ರಸ್ತೆಗಳು ಹದಗೆಟ್ಟಿದ್ದು ವಾಹನ ಸವಾರರು ಪಾದಾಚಾರಿಗಳ ಸಂಚಾರಕ್ಕೆ ಅನಾನುಕೂಲವಾಗುತ್ತಿದೆ. ಬೀಜಾಡಿ ಬೈಪಾಸ್ನಿಂದ ಕೋಟೇಶ್ವರ ಒಳ ಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಆರಂಭಿಕ ಹಂತ ಮತ್ತು ಕೋಟೇಶ್ವರ ಮೀನು ಮಾಕರ್ೆಟ್ ಬಳಿ ಬೈಪಾಸ್ನಿಂದ ಕೋಟೇಶ್ವರ ಒಳ ಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ಹೊಂಡ ಗುಂಡಿಗಳಿಂದ ತುಂಬಿದ್ದು ರಸ್ತೆಯ ಮದ್ಯೆ ಬೃಹತ್ ಹೊಂಡಗಳಲ್ಲಿ ನೀರು ತುಂಬಿದೆ, ರಸ್ತೆಯುದ್ದಕ್ಕೂ ಹೊಂಡ-ಗುಂಡಿಗಳು ಎದ್ದಿದ್ದು ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇನ್ನು ಕೋಟೇಶ್ವರ-ಹಾಲಾಡಿ ಸಂಪರ್ಕ ರಸ್ತೆ, ಬೀಜಾಡಿ-ವಕ್ವಾಡಿ ರಸ್ತೆ ಕೋಟೇಶ್ವರ-ಕಿನಾರ ರಸ್ತೆಯೂ ಹದಗೆಟ್ಟಿರುವ ಬಗ್ಗೆ ಸ್ಥಳಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಹದಗೆಟ್ಟಿರುವ ಈ ರಸ್ತೆಯ ತೇಪೆ ಕಾರ್ಯವಾದರೂ ಶೀಘ್ರ  ನಡೆಯಲಿ ಎನ್ನುವುದು ವಾಹನ ಸವಾರರ ಆಶಯ.

ರಾಡಿ ಎದ್ದ ಮೀನುಗಾರಿಕಾ ರಸ್ತೆ: ಬೀಜಾಡಿ, ಗೋಪಾಡಿ, ಕೊರವಡಿ, ತೆಕ್ಕಟ್ಟೆಯ ಮೀನುಗಾರಿಕಾ ರಸ್ತೆಗಳುದ್ದಕ್ಕೂ ಹೊಂಡಗುಂಡಿಗಳಾಗಿದ್ದು ಕೆಸರು ತುಂಬಿ ರಾಡಿಯಾಗಿದೆ. ಬೀಜಾಡಿ ಮೀನುಗಾರಿಕಾ ರಸ್ತೆಯಂತೂ ಸಂಪೂರ್ಣ ಹದಗೆಟ್ಟಿದ್ದು ಚರಂಡಿ ಅವ್ಯವಸ್ಥೆಯಿಂದ ಮಳೆಗಾಲದಲ್ಲಿ ನೀರು ರಸ್ತೆಯ ಮೇಲೆಯೇ ಮೊಣಕಾಲೆತ್ತೆರಕ್ಕೆ ಹರಿಯುತ್ತಿದೆ. ತಕ್ಷಣ ಸಂಭಂದಟ್ಟಇಲಾಖೆ ಗಮನ ಹರಿಸಬೇಕೆಂದು ವಾಹನ ಸವಾರರು ಆಗ್ರಹಿಸಿದ್ದಾರೆ.


ಕುಂದಾಪ್ರ.ಕಾಂ> editor@kundapra.com