``ಕೂಡು ಕುಟುಂಬದ ಕಲ್ಪನೆಯೇ ಸಾಮರಸ್ಯದ ಮಂತ್ರ'' : ಜಯಶೇಖರ ಮಡಪ್ಪಾಡಿ

ಕುಂದಾಪುರ: ಹಿಂದಿನ ಕಾಲದಲ್ಲಿ ಕೂಡುಕುಟುಂಬಗಳು ಹೆಚ್ಚಾಗಿದ್ದು ಪರಸ್ಪರ ಹೊಂದಾಣಿಕೆ, ಸಹಬಾಳ್ವೆಯಿಂದ ಬದುಕುತ್ತಿದ್ದರು. ಅಲ್ಲಿ ಸಾಮರಸ್ಯತೆಯ ಸಮಭಾವವಿರುತ್ತಿತು. ಆದರೆ ಸಾಮರಸ್ಯದ ಮಂತ್ರವಾಗಿದ್ದ ಕೂಡು ಕುಟುಂಬ ಪದ್ಧತಿ ಇತ್ತೀಚೆಗೆ ಕಣ್ಮರೆಯಾಗುತ್ತಿದೆ ಎಂದು ಪತ್ರಕರ್ತ ಜಯಶೇಖರ್ ಮಡಪ್ಪಾಡಿ ಹೇಳಿದರು.

ಅವರು ಗಂಗೊಳ್ಳಿಯ ತುರ್ತು ಸಹಾಯವಾಣಿಯ ವತಿಯಿಂದ ಮದ್ರಸಾ ಇಸ್ಲಾಹುಲ್ ಮುಸ್ಲಿಮೀನ್ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಸಂಸ್ಥೆಯ ವಾಷರ್ಿಕೋತ್ಸವ ಹಾಗೂ ಮೂರನೇ ವರ್ಷದ ಇಫ್ತಾರ್ ಕೂಟದ ಸಂದರ್ಭ ಏರ್ಪಡಿಸಲಾಗಿದ್ದ ಸಭೆಯಲ್ಲಿ ಮಾತನಾಡುತ್ತಿದ್ದರು.

``ನಾವು ಇಡೀ ಪ್ರಪಂಚವನ್ನು ಬದಲು ಮಾಡುತ್ತೇವೆಂಬ ಕಲ್ಪನೆ ಸಾಧ್ಯವಿಲ್ಲವೆಂದಾದರೆ ಕೊನೇ ಪಕ್ಷ ನಮ್ಮ ಸುತ್ತಮುತ್ತಲಿನ ಜೊತೆಗಾದರೂ ಸಹೋದರತೆಯ ಭಾವವನ್ನು ಹಂಚಿಕೊಳ್ಳಲು ಪ್ರಯತ್ನಿಸೋಣ,  ಒಂದು ಮಗುವಿನ ಪೋಷಕರು ಮಗುವಿನ ತಪ್ಪನ್ನು ತಿದ್ದಲು ಹೊಡೆದಾಗ ಮಗು ಅದನ್ನು ಸಂತೋಷದಿಂದಲೇ ಸ್ವೀಕರಿಸಿ ಯಾವುದೇ ದ್ವೇಷ ಮತ್ಸರ ತನ್ನ ಪೋಷಕರ ಮೆಲೆ ಇಟ್ಟುಕೊಳ್ಳುವುದಿಲ್ಲವೋ ಹಾಗೇ ಒಂದೇ ನಾಡಿನಲ್ಲಿ ಬಾಳುತ್ತಿರುವ ನಾವು ಪರಸ್ಪರ ಪ್ರೀತಿ ಸ್ನೇಹ ಸಹಬಾಳ್ವೆಯಿಂದ  ಬದುಕಿದಾಗ ಸಮಾಜ ಸುಭೀಕ್ಷವಾಗುತ್ತದೆ'' ಎಂದು ಅವರು ಅಭಿಪ್ರಾಯ ಪಟ್ಟರು.

ಸಭೆಯ ಅಧ್ಯಕ್ಷತೆಯನ್ನು ಗಂಗೊಳ್ಳಿಯ ಜಮಾಹತ್ ಮುಸ್ಲಿಮೀನ್ನ ಮಾಜಿ ಅಧ್ಯಕ್ಷರಾದ ಅರೆಹೊಳೆ ಅಬ್ದುಲ್ ಹಮೀದ್ ವಹಿಸಿದ್ದರು. ಗಂಗೊಳ್ಳಿ ಕ್ಯಾಥೋಲಿಕ್ ಸಭಾ ಅಧ್ಯಕ್ಷರಾಗಿರುವ ಹಾಗು ತುತರ್ು ಸಹಾಯವಾಣಿ ಸಂಸ್ಥೆಯ ಖಜಾಂಚಿಯಾಗಿರುವ ವಿಲ್ಸನ್ ರೆಬೆರಿಯೋ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ತುರ್ತು  ಸಹಾಯವಾಣಿಯ ಅಧ್ಯಕ್ಷರಾದ ಮೊಹಮ್ಮದ್ ಇಬ್ರಾಹಿಂ ಸ್ವಾಗತಿಸಿ, ವಂದಿಸಿದರು.
 
ನಿಮ್ಮ ಪ್ರತಿಕ್ರಿಯೆ ಬರೆಯಿರಿ
 ಕುಂದಾಪ್ರ.ಕಾಂ> editor@kundapra.com