'ಹಿರಿಯಡ್ಕ ಕ್ಷೇತ್ರ ಮಹಾತ್ಮೆ'- ಅಗಸ್ಟ್ 19 ರಂದು ಉಡುಪಿಯಲ್ಲಿ 300ನೇ ಪ್ರದರ್ಶನ


ಕುಂದಾಪುರ: ತಿರುಗಾಟದಲ್ಲಿಯೇ ಜಯಭೇರಿಗಳಿಸಿ ಯಕ್ಷರಂಗದಲ್ಲಿ ಕ್ರಾಂತಿ ಮೂಡಿಸಿ ಪ್ರಜ್ಞಾವಂತ ಪ್ರೇಕ್ಷಕರ ಮುಕ್ತಕಂಠದ ಪ್ರಶಂಸೆಗೆ ಪಾತ್ರವಾದ ವಾಸ್ತು ತಜ್ಞ ಹಾಗೂ ಜ್ಯೋತಿಷಿ ಕೋಟೇಶ್ವರ ಬಸವರಾಜ್ ಶೆಟ್ಟಿಗಾರ ವಿರಚಿತ "ಹಿರಿಯಡ್ಕ ಕ್ಷೇತ್ರ ಮಹಾತ್ಮೆ" ಯಕ್ಷಗಾನದ 300 ನೇ ಪ್ರದರ್ಶನ ಇದೇ ಅಗಸ್ಟ್ 19 ರಂದು ಮಧ್ಯಾಹ್ನ 2 ಗಂಟೆಗೆ ಉಡುಪಿ ಪಿಪಿಸಿ ಅಡಿಟೋರಿಯಂನಲ್ಲಿ ನಡೆಯಲಿದೆ.
ನಂಬಿದವರಿಗೆ ಇಂಬು ನೀಡುವ ಶಂಭು ಪ್ರಿಯನಾದ ಹಿರಿಯಡ್ಕ ವೀರಭದ್ರ ಸ್ವಾಮಿಯನ್ನೇ ಅನವರತ ` ಅನ್ಯತಾ ಶರಣಂ ನಾಸ್ತಿ' ಎಂದು ನಂಬಿಕೊಂಡು ಬಂದ ಭಕ್ತಾಭಿಮಾನಿಗಳಿಗೂ ಹಾಗೂ ರಾತ್ರಿ ನಿದ್ದೆ ಬಿಡಲು ಆಗದೇ ಇರುವ ಕಲಾಭಿಮಾನಿಗಳಿಗೊಂದು ಹಗಲು ನಡೆಯುವ ಪ್ರದರ್ಶನದಲ್ಲಿ ಗಾನ ಗಂಧರ್ವ ಶಬರಾಯ, ರಾಘವೇಂದ್ರ ಮಯ್ಯ, ಸಂಪ್ರದಾಯದ ಯುವ ಭಾಗವತ ಕತಗಾಲರ ಗಾನವೈಭವ. ಯುವಕಣ್ಮಣಿ ಗಣಪತಿ ಶೆಟ್ಟಿಯವರ ` ಭಾ ಸ್ವಾಮಿ ವೀರಭದ್ರನೇ........ ಗಾನಸುದೆಗೆ ಸಮರ್ಥ ಚಂಡೆ, ಮದ್ದಳೆ ವಾದಕರ ಕೈಚಳಕವು ಸಮಸ್ತ ಯಕ್ಷಾಭಿಮಾನಿಗಳಿಗೆ ರಸದೌತಣ ನೀಡಲಿದೆ.
9 ಕ್ಷೇತ್ರ ಮಹಾತ್ಮೆಗಳನ್ನು ರಂಗಕ್ಕೆ ನೀಡಿ ಕ್ಷೇತ್ರ ಮಹಾತ್ಮೆಗಳ ಸರದಾರ ಬಿರುದಾಂಕಿತರಾಗಿ ನಾಡಿನ ಹೆಮ್ಮಯ ಸಾಹಿತಿ ಎಂದೆನಿಸಿದ ವಾಸ್ತು ತಜ್ಞ ಕೆ.ಬಸವರಾಜ್ ಶೆಟ್ಟಿಗಾರರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನ ನೀಡಿ ಗೌರವಿಸಲಾಗುವುದು ಎಂದು ಕಾರ್ಯಕ್ರಮದ ವ್ಯವಸ್ಥಾಪಕರಾದ ಪೇತ್ರಿ ಭಾಲಕೃಷ್ಣ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಬರೆಯಿರಿ
ಕುಂದಾಪ್ರ.ಕಾಂ> editor@kundapra.com