ವಿದ್ಯಾರ್ಥಿಯ ನಿಜಗುಣ ಮೈದಾನದಲ್ಲಿ ಪ್ರಕಟ: ಫಾ. ಅನಿಲ್ ಡಿ ಸೋಜಾ

ಕುಂದಾಪುರ :ವಿದ್ಯಾರ್ಥಿಗಳ ನಿಜವಾದ ಗುಣ ತರಗತಿ ಕೊಠಡಿಯಲ್ಲಿ ಕಾಣಸಿಗದೇ ಆಟದ ಮೈದಾನದಲ್ಲಿ ಗುರುತಿಸಬಹುದಾಗಿದೆ. ಕ್ರೀಡಾ ಪ್ರತಿಭೆಯುಳ್ಳ ವಿದ್ಯಾರ್ಥಿಗಳು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳಲು ಸಾಧ್ಯ. ಇಂದಿನ ದಿನಗಳಲ್ಲಿ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ದಾನಿಗಳ ಸಂಖ್ಯೆ ಹೆಚ್ಚಾಗಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಕುಂದಾಪುರ ಸೈಂಟ್ ಮೇರಿಸ್ ವಿದ್ಯಾಸಂಸ್ಥೆಗಳ ಸಂಚಾಲಕ, ವಲಯ ಧರ್ಮಗುರುಗಳಾದ  ಅತೀ. ವಂ. ಫಾ. ಅನಿಲ್ ಡಿ ಸೋಜಾ ಹೇಳಿದರು. ಅವರು ಕುಂದಾಪುರ ಫ್ರೆಂಡ್ಸ್ ವಾಲಿಬಾಲ್ ಕ್ಲಬ್, ಬ್ಯೂಟಿ ಕ್ವೀನ್ ಕುಂದಾಪುರ ಮತ್ತು ಕುಂದಾಪುರ ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಜರುಗಿದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ಕ್ರೀಡಾ ಪ್ರತಿಭೆಗಳಿಗೆ ಗೌರವಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
         ಕುಂದಾಪುರ ತಾಲೂಕು ಯುವಜನ ಸೇವಾ ಕ್ರೀಡಾಧಿಕಾರಿ ದಿನಕರ ಹೆಗ್ಡೆ ಆಶಯ ಭಾಷಣದಲ್ಲಿ ವಿದ್ಯಾಥರ್ಿಗಳು ಮೈದಾನಕ್ಕೆ ಬಂದು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿದಾಗ ಅವರ ವ್ಯಕ್ತಿತ್ವ ವಿಕಸನಗೊಳ್ಳುತ್ತವೆ. ಆರೋಗ್ಯವಂತ ವಿದ್ಯಾಥರ್ಿಗಳಾಗಿ, ಶಿಸ್ತಿನ ಸಿಪಾಯಿಗಳಾಗಿ ಜೀವನ ಸಾಗಿಸಬಹುದು ಎಂದು ಶುಭಹಾರೈಸಿದರು. 40 ಮಂದಿ ಕ್ರೀಡಾ ಪ್ರತಿಭೆಗಳನ್ನು ಗುರುತಿಸಲಾಯಿತು. ಹಾಗೂ ರಾಷ್ಟ್ರೀಯ ಮಟ್ಟದ ಚೆಸ್ ಸ್ಪಧರ್ೆಗೆ ಆಯ್ಕೆಯಾದ ಶಾಲಾ ವಿದ್ಯಾಥರ್ಿನಿ ಕು.ವಿಯೋಲಾ ಲೂಯಿಸ್ರಿಗೆ ಶಾಲು ಹೊದಿಸಿ, ಫಲ ಪುಷ್ಪ ಸ್ಮರಣಿಕೆ ನೀಡಿ ಗೌರವಿಸಲಾಯಿತು. 
        ಮುಖ್ಯ ಅತಿಥಿಗಳಾಗಿ ಕುಂದಾಪುರ ಫ್ರೆಂಡ್ಸ್ ವಾಲಿಬಾಲ್ ಕ್ಲಬ್ನ ಗೋಪಾಲ ಬಾಳೆಹಿತ್ಲು, ರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರ ಮಹಮ್ಮದ್ ಸಮೀರ್, ಕುಂದಾಪುರ ಬ್ಯೂಟಿ ಕ್ವೀನ್ ಮಾಲೀಕ ಹುಸೇನ್ ಹೈಕಾಡಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಶಾಲಾ ವಿದ್ಯಾಥರ್ಿ ನಾಯಕಿ ವಿಜೇತಾ ವಿ. ಕಾಂಚನ್, ಕ್ರೀಡಾ ಸಚಿವ ಚರಣ್ ಬಿ ಇದ್ದರು. ಶಿಕ್ಷಕ ನಾಗರಾಜ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಕೋನಿ ಮಿನೇಜಸ್ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷ್ಣ ವಂದಿಸಿದರು.